ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ 2022 ರ ನಡುವೆ ವಿಶ್ವದಾದ್ಯಂತ ಹಲವಾರು ಕಂಪನಿಗಳು ಉದ್ಯೋಗ ಕಡಿತವನ್ನು ಮಾಡಿದೆ. 2023 ರಲ್ಲಿಯೂ ಈ ಪ್ರಕ್ರಿಯೆಯು ಮುಂದುವರೆದಿದೆ. 2022 ಕ್ಕೆ ಹೋಲಿಸಿದರೆ 2023ರಲ್ಲಿ ಶೇಕಡ 58 ರಷ್ಟು ಉದ್ಯೋಗ ಕಡಿತ ಏರಿಕೆಯಾಗಿದೆ.
2023 ರಲ್ಲಿ ಉದ್ಯೋಗ ಮಾರುಕಟ್ಟೆಯು ಅತ್ಯಂತ ಕ್ರಿಯಾತ್ಮಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಆಸಕ್ತಿದಾಯಕ ವಾತಾವರಣವನ್ನು ಸೃಷ್ಟಿಸಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

layoffs.fyi ಯ ಮಾಹಿತಿಯ ಪ್ರಕಾರ, 2023 ರಲ್ಲಿ ಒಟ್ಟು 1,175 ಟೆಕ್ ಕಂಪನಿಗಳು 2,60,509 ಉದ್ಯೋಗಿಗಳನ್ನು ವಜಾಗೊಳಿಸಿದೆ. 1,064 ಟೆಕ್ ಕಂಪನಿಗಳು 2022 ರಲ್ಲಿ 1,64,969 ಉದ್ಯೋಗಿಗಳನ್ನು ಕೈಬಿಡಲು ನಿರ್ಧಾರ ಮಾಡಿದೆ. ಇದನ್ನು ನೋಡಿದಾಗ 2023ರಲ್ಲಿ ಉದ್ಯೋಗ ಕಡಿತ 2022ರ ಉದ್ಯೋಗ ಕಡಿತಕ್ಕಿಂತ ಶೇಕಡ 57.8 ರಷ್ಟು ಹೆಚ್ಚಳವಾಗಿದೆ.
ಅಮೆಜಾನ್‌ನಲ್ಲಿ ಅಧಿಕ ಉದ್ಯೋಗ ಕಡಿತ
ಅಮೆಜಾನ್ ಈ ವರ್ಷ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದೆ. 17,000 ಉದ್ಯೋಗಿಗಳನ್ನು ಅಮೆಜಾನ್ ಕೆಲಸದಿಂದ ತೆಗೆದುಹಾಕಿದೆ. ನಂತರದ ಸ್ಥಾನದಲ್ಲಿ ಗೂಗಲ್ ಇದ್ದು 12,000 ಮಂದಿಯನ್ನು ವಜಾಗೊಳಿಸಿದೆ. ಮೆಟಾದಲ್ಲಿ 10,000 ಮತ್ತು ಮೈಕ್ರೋಸಾಫ್ಟ್‌ನಲ್ಲಿ 10,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಭಾರತದಲ್ಲಿ, ಬೈಜೂಸ್ ಎರಡು ಸುತ್ತುಗಳಲ್ಲಿ 3,500 ಉದ್ಯೋಗಿಗಳನ್ನು ವಜಾಗೊಳಿಸಿದೆ. ನಂತರ ಅನಾಕಾಡೆಮಿ ಒಟ್ಟು ಉದ್ಯೋಗಿಗಳ ಶೇಕಡ 12 ರಷ್ಟು ಮಂದಿಗೆ ಪಿಂಕ್ ಸ್ಲಿಪ್ ನೀಡಿದೆ. ಶೇರ್‌ಚಾಟ್ 500, ಸ್ವಿಗ್ಗಿ 380, ಓಲಾ 200 ಮತ್ತು ಫಿಸಿಕ್ಸ್ ವಾಲಾ 120 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ.
ತಜ್ಞರು ಏನು ಹೇಳುತ್ತಾರೆ?
ಟೀಮ್‌ಲೀಸ್ ಡಿಜಿಟಲ್‌ನ ಸಹಾಯಕ ಉಪಾಧ್ಯಕ್ಷ (ತಂತ್ರ ಮತ್ತು ಬೆಳವಣಿಗೆ) ಮುನಿರಾ ಲೋಲಿವಾಲಾ ಈ ಬಗ್ಗೆ ಮಾತನಾಡಿದ್ದು, "ಉದ್ಯೋಗ ಕಡಿತ ಸೀಸನ್ ನಡುವೆಯೂ ಕೆಲವೆಡೆ ಕಡಿಮೆ ಉದ್ಯೋಗ ಕಡಿತವನ್ನು ಮಾಡಲಾಗಿದೆ. ಶೇಕಡ 2-3 ರಷ್ಟು ಉದ್ಯೋಗ ಕಡಿತ ಮಾಡಲಾಗಿದೆ," ಎಂದು ಹೇಳುತ್ತಾರೆ.
"ಹಸಿರು ಸಾಫ್ಟ್‌ವೇರ್ ಅಭಿವೃದ್ಧಿಗಳನ್ನು ಉತ್ತೇಜಿಸುವ ಮೂಲಕ, ಕ್ಲೌಡ್ ನೆಟ್‌ವರ್ಕ್‌ಗಳನ್ನು ವಿಸ್ತರಿಸುವ ಮೂಲಕ ಮತ್ತು ಗ್ರಾಹಕ ಇಂಟರ್ಫೇಸ್ ಪರಿಹಾರಗಳು/ಸೇವೆಗಳನ್ನು ಹೆಚ್ಚಿಸುವ ಮೂಲಕ ಜಾಗತಿಕ ನಿರೀಕ್ಷೆಗಳನ್ನು ಪೂರೈಸಲು ಭಾರತಕ್ಕೆ ಸವಾಲಾಗಿದೆ. ಇದು ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ ನಿಗದಿಪಡಿಸಲಾದ ಲೇ-ಆಫ್‌ಗಳಿಗೆ ಕಾರಣವಾಗುವ ಪ್ರಾಜೆಕ್ಟ್ ಎಕ್ಸಿಕ್ಯೂಶನ್ ಟೈಮ್‌ಲೈನ್‌ಗಳ ಮೇಲೆ ಪರಿಣಾಮ ಬೀರುತ್ತದೆ," ಎಂದು ಮುನಿರಾ ಲೋಲಿವಾಲಾ ತಿಳಿಸಿದರು.
"2023 ರ ಉದ್ಯೋಗ ಮಾರುಕಟ್ಟೆಯು ಅತ್ಯಂತ ಕ್ರಿಯಾತ್ಮಕವಾಗಿತ್ತು. ಜಾಗತಿಕವಾಗಿ ಸ್ಥಳೀಯವಾಗಿ ಉದ್ಯೋಗ ಕಡಿತ ನಿಧಾನವಾಗಿ ನಡೆಯುತ್ತಿದೆ. ಮಾನವ ಸಂಪನ್ಮೂಲ ಮುಖ್ಯಸ್ಥರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಆಸಕ್ತಿದಾಯಕ ವಾತಾವರಣವನ್ನು ಸೃಷ್ಟಿಸಿದವು. ಟೆಕ್ ದೈತ್ಯರುಗಳು ಬ್ಯಾಕ್ ಟು ಆಫೀಸ್ ಅನ್ನು ಆರಂಭಿಸುತ್ತಿದ್ದಾರೆ," ಎಂದು ಟೀಮ್‌ಲೀಸ್ ಎಡ್ಟೆಕ್‌ನ ಸಿಒಒ ಮತ್ತು ಉದ್ಯೋಗಾರ್ಹತೆಯ ಮುಖ್ಯಸ್ಥ ಜೈದೀಪ್ ಕೇವಲ್ರಮಣಿ ಹೇಳಿದರು.
2024 ರಲ್ಲಿ ಏನು ಕಥೆ?
2026 ರವರೆಗೆ ಬದಲಾಗುತ್ತಿರುವ ಹವಾಮಾನದೊಂದಿಗೆ ಉದ್ಯೋಗ ನಷ್ಟಗಳು ಮತ್ತು ವಜಾಗೊಳಿಸುವಿಕೆಗಳು ಮುಂದುವರಿಯುತ್ತವೆ ಎಂದು ಮುನಿರಾ ಲೋಲಿವಾಲಾ ಹೇಳಿದರು. ಜಿಸಿಸಿಗಳು, ಡೇಟಾ ಸೆಂಟರ್‌ಗಳು, ಬಿಎಫ್‌ಎಸ್‌ಐಗಳಲ್ಲಿನ ಟೆಕ್ ಸೆಂಟರ್‌ಗಳು, ಆಟೋಮೋಟಿವ್‌ಗಳು ಮತ್ತು ಇಆರ್ & ಡಿ ಉದ್ಯಮಗಳಲ್ಲಿ ನೇಮಕಾತಿಗಳು ನಡೆಯಲಿದೆ ಎನ್ನುತ್ತಾರೆ ತಜ್ಞರು.


Click it and Unblock the Notifications