ಎಲ್ ಇಡಿ ಟಿವಿ ಮತ್ತು ಗೃಹಬಳಕೆ ವಸ್ತುಗಳಾದ ರೆಫ್ರಿಜರೇಟರ್, ವಾಷಿಂಗ್ ಮಶೀನ್ ನಂಥವು ಮುಂದಿನ ವರ್ಷದ ಜನವರಿಯಿಂದ 10% ಬೆಲೆ ಏರಿಕೆ ಆಗುವ ನಿರೀಕ್ಷೆ ಇದೆ. ಪ್ರಮುಖ ವಸ್ತುಗಳಾದ ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ವಾಯು ಹಾಗೂ ಜಲ ಸಾಗಣೆ ವೆಚ್ಚಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇರುವುದರಿಂದ ಈ ಬೆಳವಣಿಗೆ ನಿರೀಕ್ಷೆ ಮಾಡಲಾಗಿದೆ.
ಇನ್ನು ಟಿವಿ ಪ್ಯಾನೆಲ್ ಗಳ ಬೆಲೆಯಲ್ಲಿ (ಓಪನ್ ಸೆಲ್) ಕೂಡ ಎರಡು ಪಟ್ಟಿಗೂ ಹೆಚ್ಚು ಏರಿಕೆ ಆಗಲಿವೆ. ಅದಕ್ಕೆ ಕಾರಣ ಆಗಿರುವುದು ಜಾಗತಿಕ ಮಾರಾಟಗಾರರಿಂದ ಪೂರೈಕೆ ಕಡಿಮೆ ಆಗಿದೆ. ಈ ಬಗ್ಗೆ ಉತ್ಪಾದಕರು ಹೇಳುವುದೇನೆಂದರೆ, ಕಚ್ಚಾ ತೈಲ ದರದಲ್ಲಿ ಏರಿಕೆಯಾಗಿರುವುದರಿಂದ ಪ್ಲಾಸ್ಟಿಕ್ ಬೆಲೆಯಲ್ಲೂ ಜಾಸ್ತಿ ಆಗಿದೆ. ಆದ್ದರಿಂದ ಪೂರೈಕೆ ಕಡಿಮೆ ಆಗಿದೆ ಎನ್ನುತ್ತಾರೆ.
ಜನವರಿಯಲ್ಲೇ ಬೆಲೆಗಳು 6ರಿಂದ 7 ಪರ್ಸೆಂಟ್ ಜಾಸ್ತಿ ಆಗಬಹುದು
ಇಂತಹ ಸನ್ನಿವೇಶದಲ್ಲಿ ಎಲ್ ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್ ನಂಥ ಉತ್ಪಾದಕರಿಗೆ ಜನವರಿಯಿಂದ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಆಗಿದೆ. ಸೋನಿ ಕಂಪೆನಿಯು ಸನ್ನಿವೇಶವನ್ನು ಪರಾಂಬರಿಸುತ್ತಿದ್ದು, ಈ ಕುರಿತು ತೀರ್ಮಾನ ಕೈಗೊಳ್ಳಬೇಕಿದೆ. "ಏರಿಕೆ ಆಗಿರುವ ಪದಾರ್ಥಗಳ ಬೆಲೆಯಿಂದಾಗಿ ನಮ್ಮ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ. ಜನವರಿಯಲ್ಲೇ ಬೆಲೆಗಳು 6ರಿಂದ 7 ಪರ್ಸೆಂಟ್ ಜಾಸ್ತಿ ಆಗಬಹುದು. ಇನ್ನು ಮೊದಲ ತ್ರೈಮಾಸಿಕದ ಕೊನೆಗೆ ಅದು 10ರಿಂದ 11 ಪರ್ಸೆಂಟ್ ಹೆಚ್ಚಬಹುದು," ಎಂದು ಪ್ಯಾನಾಸೋನಿಕ್ ಇಂಡಿಯಾ ಅದ್ಯಕ್ಷ ಮತ್ತು ಸಿಇಒ ಮನೀಶ್ ಶರ್ಮಾ ತಿಳಿಸಿದ್ದಾರೆ.
ಸೋನಿಯಿಂದ ಕಾದು ನೋಡುವ ನಿರ್ಧಾರ
ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದಿಂದ ಕೂಡ ಎಲ್ಲ ಉತ್ಪನ್ನಗಳ ಮೇಲೆ ಕನಿಷ್ಠ 7ರಿಂದ 8 ಪರ್ಸೆಂಟ್ ಜನವರಿ 1ರಿಂದ ಏರಿಕೆ ಮಾಡಲಾಗುತ್ತದೆ. ಇನ್ನು ಸೋನಿಯಿಂದ ಕಾದು ನೋಡುವ ನಿರ್ಧಾರಕ್ಕೆ ಬರಲಾಗಿದೆ. ಅಂತಿಮವಾದ ತೀರ್ಮಾನವನ್ನು ಇನ್ನಷ್ಟೇ ತೆಗೆದುಕೊಳ್ಳಬೇಕಿದೆ. ಚಿಕ್ಕ ಸ್ಕ್ರೀನ್ ಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದ್ದು, ಅವುಗಳ ಬೆಲೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಆಗಿದೆ. ಅದರಲ್ಲೂ ಭಾರತದಲ್ಲಿ ಈಗಲೂ 32 ಇಂಚಿನ ಟಿವಿ ಬಳಕೆ ಪ್ರಮಾಣವೇ ಜಾಸ್ತಿ ಇದೆ. ಮಾರುಕಟ್ಟೆಯಲ್ಲಿ ಟಿವಿ ಓಪನ್ ಸೆಲ್ ಗೆ ಕೊರತೆ ಇರುವುದರಿಂದ ಅವುಗಳ ಬೆಲೆ ಇನ್ನೂರು ಪರ್ಸೆಂಟ್ ಮೇಲೇರಿದೆ ಎಂದು ಥಾಮ್ಸನ್ ಹಾಗೂ ಕೊಡಾಕ್ ತಿಳಿಸಿವೆ. ಬೆಲೆ ಏರಿಕೆಗೆ ಕಾರಣವಾಗಿರುವ ಮತ್ತೊಂದು ಅಂಶ ಅಂದರೆ, ಆಮದು ಸಾಗಣೆ ವೆಚ್ಚದಲ್ಲಿನ ಏರಿಕೆ.
ಬೇಡಿಕೆ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಬೆಲೆ
2020ರ ಅಕ್ಟೋಬರ್ ಗೆ ಹೋಲಿಸಿದರೆ ಆಮದು ಸಾಗಣೆ ವೆಚ್ಚದಲ್ಲಿನ ಏರಿಕೆ 3 ಪಟ್ಟು ಹೆಚ್ಚಾಗಿದೆ. ಇತ್ತ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಅಂಡ್ ಅಪ್ಲೈಯನ್ಸಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (CEAMA) ಹೇಳುವ ಪ್ರಕಾರ, ಮುಂದಿನ ತ್ರೈಮಾಸಿಕದಲ್ಲಿ ಬೆಲೆ ಏರಿಕೆ ಕಾರಣ ಕೂಡ ಬೇಡಿಕೆ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಭಾರತದ ಗೃಹಬಳಕೆ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ವಲಯವು ಮುಖ್ಯವಾಗಿ ಜಾಗತಿಕ ಆಮದಿನ ಮೇಲೆ ಅವಲಂಬನೆ ಆಗಿದೆ. ಅದರಲ್ಲೂ ಚೀನಾದ ಮೇಲೆ ಅವಲಂಬಿತವಾಗಿದೆ. ಮುಖ್ಯ ಬಿಡಿ ಭಾಗಗಳು ಹಾಗೂ ಕೆಲವು ಫಿನಿಷ್ಡ್ ಗೂಡ್ಸ್ ಅಲ್ಲಿಂದಲೇ ಆಮದಾಗುತ್ತವೆ. CEAMA ಹಾಗೂ ಫ್ರಾಸ್ಟ್ ಅಂಡ್ ಸುಲ್ಲಿವನ್ ಜಂಟಿ ವರದಿ ಪ್ರಕಾರ, 2018- 19ರಲ್ಲಿ ಒಟ್ಟು ಮಾರುಕಟ್ಟೆ ಗಾತ್ರ 76,400 ಕೋಟಿ ರುಪಾಯಿ ಇತ್ತು. ಅದರಲ್ಲಿ 32,200 ಕೋಟಿ ರುಪಾಯಿ ದೇಶೀಯ ಉತ್ಪಾದನೆ ಕೊಡುಗೆ ಆಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?



Click it and Unblock the Notifications