ಭಾರತದಲ್ಲಿ ಹಲವು ಉದ್ಯಮಿಗಳು ಔದ್ಯೋಗಿಕವಾಗಿಯೂ ಉನ್ನತ ಸ್ಥಾನದಲ್ಲಿದ್ದುಕೊಂಡು ಸ್ವಂತ ಕಂಪನಿಗಳನ್ನು ಕಟ್ಟಿ ಬೆಳೆಸುವ ಮೂಲಕ ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿರುವ ಸಾಕಷ್ಟು ಯಶೋಗಾಥೆಗಳು ನಮ್ಮ ಮುಂದಿವೆ. ಇನ್ನು ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡವರ ಪೈಕಿ ಅನೇಕರು ಹೊರದೇಶಗಳಲ್ಲಿ ಕಲಿತು ಬಂದು ಶಿಕ್ಷಣದ ಆ ಅನುಭವವನ್ನು ಉದ್ಯಮದಲ್ಲಿ ಅಳವಡಿಸಿಕೊಂಡು ಹೆಚ್ಚಿನವರು ಎತ್ತರಕ್ಕೆ ಏರಿದವರಾಗಿದ್ದಾರೆ.
ವಿದೇಶದಲ್ಲಿ ಅಧ್ಯಯನ ಮಾಡಿದವರು ಕೂಡ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಸುದೀರ್ಘ ಅವಧಿಗೆ ಅಲ್ಲಿಯೇ ಕೆಲಸವನ್ನು ಮಾಡಿಕೊಂಡಿರುತ್ತಾರೆ. ನಂತರ ಭಾರತಕ್ಕೆ ವಾಪಾಸ್ ಬಂದು ತಮ್ಮ ಸ್ವಂತ ಕಂಪೆನಿಯನ್ನು ಹುಟ್ಟುಹಾಕಿದ್ದಾರೆ. ಅಂಥಹ ಉದ್ಯಮಿಗಳ ಸಾಲಿನಲ್ಲಿ ಅಂಕಿತ್ ಅಗರ್ವಾಲ್ ಕೂಡ ನಿಲ್ಲುತ್ತಾರೆ. ಅಂಕಿತ್ ಅಗರ್ವಾಲ್ ಅವರು ಸ್ಟೆರ್ಲೈಟ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2021ರಿಂದ ಕಂಪನಿಯ ಎಂಡಿ ಆಗಿ ಅದನ್ನು ಮುನ್ನಡೆಸುತ್ತಿದ್ದಾರೆ.

ಅಗರ್ವಾಲ್ ಅವರು ಎರಡು ವರ್ಷಗಳ ಕಾಲ ಲಂಡನ್‌ನಲ್ಲಿ ವಿಶ್ಲೇಷಕರಾಗಿ ಡಾಯ್ಚ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದರು. ಅಂಕಿತ್ ಅವರು ಶೈಕ್ಷಣಿಕವಾಗಿ ಸಾಕಷ್ಟು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಅವರು ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ. ಅಷ್ಟೇಅಲ್ಲ, ಮುಂದೆ ಅವರು ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.
ಅಂಕಿತ್ ಅವರು ಒಂದೇ ಕಂಪನಿಯಲ್ಲಿ ಸುಧೀರ್ಘ ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಅಂದರೆ, ಕಳೆದ 14 ವರ್ಷಗಳಿಂದ ಅಂಕಿತ್ ಅಗರ್ವಾಲ್ ಅವರು ಸ್ಟೆರ್ಲೈಟ್ ಟೆಕ್ನಾಲಜೀಸ್ ಜೊತೆ ಸಂಬಂಧ ಹೊಂದಿದ್ದಾರೆ. ಕಂಪನಿಯು ಫೆಬ್ರವರಿ 23ರ ವರದಿ ಪ್ರಕಾರ, ಕಂಪನಿಯು 5795 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಈ ಕಂಪೆನಿಯು ಪುಣೆಯನ್ನು ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಸ್ಟೆರ್ಲೈಟ್ ಟೆಕ್ನಾಲಜೀಸ್ ಕಂಪೆನಿಯು ಆಪ್ಟಿಲ್ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂದಿಸಿದಂತೆ ಕೆಲಸ ಮಾಡುತ್ತಿದೆ. ಅಂಕಿತ್ ಅವರು ಈ ಕಂಪೆನಿಗೆ ಸೇರುವ ಮೊದಲು ಲಂಡನ್‌ನಲ್ಲಿ ವೇದಾಂತ ರಿಸೋರ್ಸಸ್ ಪಿಎಲ್‌ಸಿ ಜತೆ ಕಾರ್ಪೊರೇಟ್ ಸ್ಟ್ರಾಟಜಿಯ ಅಸೋಸಿಯೇಟ್ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಅಂಕಿತ್ ಅವರು ಕೇವಲ ವೃತ್ತಿ ಬದುಕಿನಲ್ಲಿ ಮಾತ್ರ ಉನ್ನತ ಸ್ಥಾನದಲ್ಲಿ ತೊಡಗಿಸಿಕೊಂಡಿಲ್ಲ. ಜತೆಗೆ ತಮ್ಮ ಫಿಟ್ನೆಸ್ ಬಗ್ಗೆಯೂ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಅವರು ಕ್ರೀಡಾಪಟುವಾಗಿ ಕ್ರಾಸ್ ಕಂಟ್ರಿ ಓಟದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ತಮ್ಮ ಕಂಪನಿಯಲ್ಲಿರುವ ಎಲ್ಲ ಉದ್ಯೋಗಿಗಳು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹಂಬಲವನ್ನು ಹೊಂದಿದ್ದಾರೆ. ಅದಕ್ಕಾಗಿ ಅವರಿಗೆ ತಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಇದು ಉದ್ಯೋಗಿಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದಕ್ಕೂ ಪ್ರೇರಣೆ ಕೊಡುತ್ತಿದೆ.

ಅವರು ತಮ್ಮ ಎಸ್‌ಟಿಎಲ್ ಕಂಪೆನಿಯನ್ನು ಭಾರತದ ಹೊರತಾಗಿ ಯುಎಸ್‌ಎ, ಯುಕೆ, ಇಟಲಿ ಹಾಗೂ ಬ್ರೆಜಿಲ್‌ನಲ್ಲಿಯೂ ಉತ್ತಮ ವಹಿವಾಟು ನಡೆಸುವತ್ತ ಬೆಳೆಸಿದ್ದಾರೆ. ಅಂಕಿತ್ ಅರ್ಗವಾಲ್ ಅವರು ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ಮೂಲಕ ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.


Click it and Unblock the Notifications