ಕನ್ನಡಕ ಉತ್ಪಾದಕ ಹಾಗೂ ಮಾರಾಟ ಕಂಪನಿ ಲೆನ್ಸ್‌ಕಾರ್ಟ್ ತೆಲಂಗಾಣ ಸರಕಾರದ ಜೊತೆಗೆ ಡಿಸೆಂಬರ್ 8ರಂದು ಒಡಂಬಡಿಕೆಗೆ ಸಹಿ ಹಾಕಿ ಒಪ್ಪಂದ ಮಾಡಿಕೊಂಡಿದೆ. ಹಾಗಿದ್ರೆ ರಾಜ್ಯದಲ್ಲಿ ಹೊಡಿಕೆ ಮಾಡಲು ಅವರು ಕೇಳಿದ ಜಾಗದ ಕಥೆ ಏನಾಯ್ತು..? ಇದರಿಂದ ರಾಜ್ಯಕ್ಕೆ ಆದ ನಷ್ಟವೆಷ್ಟು..? ಇಲ್ಲಿದೆ ಹೆಚ್ಚಿನ ಮಾಹಿತಿ
ಹೌದು, ತೆಲಂಗಾಣದ ಐಟಿ, ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಸಂಸದೀಯ ವ್ಯವಹಾರ ಸಚಿವ ಡಿ ಶ್ರೀಧರ್ ಬಾಬು ಈ ಬಗ್ಗೆ ಟ್ವೀಟ್ ಮಾಡಿದ್ದು, "ಇಂದು ಲೆನ್ಸ್‌ಕಾರ್ಟ್ ಡಾಟ್ ಕಾಂ ಜೊತೆ ಎಂಒಯುಗೆ ಸಹಿ ಹಾಕಿರುವುದು ತುಂಬಾ ಸಂತೋಷ ತಂದಿದೆ. ಲೆನ್ಸ್‌ಕಾರ್ಟ್ ಜಗತ್ತಿನ ಅತಿ ದೊಡ್ಡ ಐವೇರ್ ಉತ್ಪಾದನಾ ಘಟಕವನ್ನು ತೆಲಂಗಾಣದಲ್ಲಿ ತೆರೆಯಲಿದ್ದು, 1,500 ಕೋಟಿ ರೂ. ಹೂಡಿಕೆ ಮಾಡಲಿದೆ," ಎಂದು ಅವರು ಬರೆದುಕೊಂಡಿದ್ದಾರೆ.

ಭಾರತೀಯ ಮಾರುಕಟ್ಟೆಯ ಜೊತೆಗೆ ಆಗ್ನೇಯ ಏಷ್ಯಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಿಗೆ ರಫ್ತಿಗಾಗಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ಉತ್ಪಾದನಾ ಘಟಕದಲ್ಲಿ 2,100 ಉದ್ಯೋಗ ಅವಕಾಶಗಳು ಸಿಗುತ್ತವೆ.ನಾವು ಹೊಡಿಕೆ ಮಾಡುವ ಉತ್ಪಾದನಾ ಘಟಕದಲ್ಲಿ ಕಂಪನಿಯು ಲೆನ್ಸ್‌ಗಳು, ಸನ್‌ಗ್ಲಾಸ್‌ಗಳು, ಬಿಡಿಭಾಗಗಳು ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಲಿದೆ. ಈಗಲೇ ಈ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಸ್ಥಾಪಿಸುವ ಸಂಬಂಧ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಫ್ಯಾಬ್ ಸಿಟಿಯಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪನೆ
ಈ ಕಂಪನಿಯು ಫ್ಯಾಬ್ ಸಿಟಿಯಲ್ಲಿ ಹೊಸ ಘಟಕವನ್ನು ಸ್ಥಾಪನೆಯಾಗಲಿದ್ದು, ಈಗಾಗಲೇ ಭೂಮಿ ಗುರುತು ಕೂಡ ಮಾಡಲಾಗಿದೆ. ವೇಗವಾಗಿ ಮತ್ತು ಕಂಪನಿಗಳಿಗೆ ಸುಲಭವಾಗಿ ಉದ್ಯಮ ಸ್ಥಾಪಿಸಲು ಅನುವು ಮಾಡಿಕೊಡುವ ನಮ್ಮ ನೀತಿಗೆ ಇದು ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದ್ದಾರೆ. ಈ ವಾರದಲ್ಲಿಯೇ ಜಮೀನನ್ನು ಕಂಪನಿಗೆ ಹಸ್ತಾಂತರಿಸುವ ಸಾಧ್ಯತೆ ಕೂಡ ಇದೆ
ರಾಜ್ಯಕ್ಕೆ 1,500 ಕೋಟಿ ಹೂಡಿಕೆ ನಷ್ಟ
ರಾಜ್ಯದಲ್ಲಿ ಲೆನ್ಸ್‌ಕಾರ್ಟ್ ಘಟಕ ಸ್ಥಾಪನೆಯಾಗಬೇಕಿತ್ತು. ಈ ಹೂಡಿಕೆ ಅವಕಾಶಕ್ಕೆ ಲೆನ್ಸ್‌ಕಾರ್ಟ್ ರಾಜ್ಯವನ್ನೇ ಹುಡುಕಿಕೊಂಡು ಬಂದಿತ್ತು. ಅದರೂ ಕೂಡ ಈ ಯೋಜನೆ ಕೈತಪ್ಪಿದ್ದು, ರಾಜ್ಯಕ್ಕೆ 1,500 ಕೋಟಿ ನಷ್ಟವಾಗಿದೆ.
ಸಹಕಾರ ನೀಡಲು ಒಪ್ಪಿಗೆ ಸೂಚಿಸಿದ ಸಚಿವ ಎಂ.ಬಿ ಪಾಟೀಲ್
2014ರ ಏಪ್ರಿಲ್‌ನಲ್ಲಿ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ ಬೆಂಗಳೂರು ಏರ್‌ಪೋರ್ಟ್‌ನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ 25 ಎಕರೆ ಭೂಮಿ ಕೋರಿ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಬಹುಬೇಗನೇ ಸ್ಪಂದಿಸಿದ್ದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಕೈಗಾರಿಕಾ ಸಚಿವಾಲಯ ಸಿದ್ಧವಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅದರೆ ಅದು ಏನಾಗಿದೆ ಎಂಬುವುದು ಮಾತ್ರ ಗೋತ್ತಿಲ್ಲ. ಸದ್ಯ ಇದೇ ಹೂಡಿಕೆ ತೆಲಂಗಾಣ ಪಾಲಾಗಿದೆ ಇದರಿಂದರಾಜ್ಯಕ್ಕೆ 1,500 ಕೋಟಿ ಹೂಡಿಕೆ ನಷ್ಟವಾಗಿದೆ.


Click it and Unblock the Notifications