ಮೂರು ಹಣಕಾಸು ವರ್ಷಗಳಿಗೆ ಆದಾಯ ತೆರಿಗೆ ಇಲಾಖೆ 84 ಕೋಟಿ ರೂಪಾಯಿ ದಂಡವನ್ನು ಎಲ್‌ಐಸಿ ಬಳಿ ಕೋರಿ ನೋಟಿಸ್ ಸಲ್ಲಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿಗಮ ನಿರ್ಧರಿಸಿದೆ ಎಂದು ಜೀವ ವಿಮಾ ನಿಗಮ (ಎಲ್‌ಐಸಿ) ಮಂಗಳವಾರ ತಿಳಿಸಿದೆ.
2012-13ರ ವರ್ಷಕ್ಕೆ ತೆರಿಗೆ ಪ್ರಾಧಿಕಾರವು 12.61 ಕೋಟಿ ರೂಪಾಯಿ, 2018-19ರ ಹಣಕಾಸು ವರ್ಷಕ್ಕೆ 33.82 ಕೋಟಿ ರೂಪಾಯಿ, 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ ಎಂದು ಎಲ್‌ಐಸಿ ನಿಯಂತ್ರಣ ಫೈಲಿಂಗ್‌ನಲ್ಲಿ ತಿಳಿಸಿದೆ.

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 271 (1) (ಸಿ) ಮತ್ತು 270ಎ ಉಲ್ಲಂಘನೆಗಾಗಿ ಸರ್ಕಾರಿ ಸ್ವಾಮ್ಯದ ವಿಮಾದಾರರಿಗೆ ದಂಡವನ್ನು ವಿಧಿಸಲಾಗಿದೆ ಎಂದು ಎಲ್‌ಐಸಿ ಹೇಳಿದೆ. ತೆರಿಗೆ ಇಲಾಖೆಯು ಸೆಪ್ಟೆಂಬರ್ 29, 2023 ರಂದು ನೋಟಿಸ್ ನೀಡಿದೆ ಎಂದು ಹೇಳಿದೆ.
1956 ರಲ್ಲಿ 5 ಕೋಟಿ ರೂಪಾಯಿಗಳ ಆರಂಭಿಕ ಬಂಡವಾಳದೊಂದಿಗೆ ಆರಂಭವಾ ಎಲ್‌ಐಸಿ ಮಾರ್ಚ್ 31, 2023 ರಂತೆ 40.81 ಲಕ್ಷ ಕೋಟಿ ರೂಪಾಯಿಗಳ ಲೈಫ್ ಫಂಡ್‌ನೊಂದಿಗೆ 45.50 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದೆ.
290 ಕೋಟಿ ರೂಪಾಯಿ ಜಿಎಸ್‌ಟಿ ಬಿಲ್
ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಈ ಹಿಂದೆ ಬಿಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಕಾಯ್ದೆ 2017 ರ ಅಡಿಯಲ್ಲಿ ಬಿಹಾರದಿಂದ 290 ಕೋಟಿ ರೂಪಾಯಿ ಮೌಲ್ಯದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜೊತೆಗೆ ಬಡ್ಡಿ ಮತ್ತು ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ವಿನಿಮಯ ಫೈಲಿಂಗ್ ಮೂಲಕ ಮಾಹಿತಿ ನೀಡಿದೆ.
ಜಿಎಸ್‌ಟಿ ಅಪಲೇಟ್ ಟ್ರೈಬ್ಯೂನಲ್‌ಗೆ ನಿಗದಿತ ಸಮಯದೊಳಗೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಸರ್ಕಾರಿ ಸ್ವಾಮ್ಯದ ವಿಮಾ ಗುಂಪು ಹೇಳಿದೆ. ಹಲವಾರು ನಿಯಮಗಳನ್ನು ಎಲ್‌ಐಸಿ ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಲಾಗಿದೆ.
ಒಟ್ಟು 2,90,49,22,609 ರೂಪಾಯಿಗಳ ಮೊತ್ತದಲ್ಲಿ ಜಿಎಸ್‌ಟಿ ಅಡಿಯಲ್ಲಿ, 1,66,75,78,995 ರೂಪಾಯಿಗಳನ್ನು, ಬಡ್ಡಿಯಾಗಿ 1,07,05,85,715 ರೂಪಾಯಿಗಳನ್ನು ಮತ್ತು ದಂಡವಾಗಿ 16,67,57,899 ರೂಪಾಯಿಗಳನ್ನು ಬಿಹಾರ ಕೋರಿದೆ.
ಜೂನ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಲ್‌ಐಸಿಯ ನಿವ್ವಳ ಲಾಭವು ಕಳೆದ ವರ್ಷದ ಅದೇ ತ್ರೈಮಾಸಿಕದಲ್ಲಿ 683 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 9,544 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ, ಕಂಪನಿಯ ನಿವ್ವಳ ಪ್ರೀಮಿಯಂ ಆದಾಯವು 98,351 ಕೋಟಿ ರೂಪಾಯಿ ಆಗಿದೆ.
ಇದಕ್ಕೂ ಒಂದು ವರ್ಷದ ಹಿಂದೆ ನಿವ್ವಳ ಆದಾಯವು ಸುಮಾರು 98,363 ಕೋಟಿ ರೂಪಾಯಿ ಆಗಿದೆ. ನಿವ್ವಳ ಲಾಭವು ಹಿಂದಿನ ತ್ರೈಮಾಸಿಕದಲ್ಲಿ ವರದಿಯಾದ 13,428 ಕೋಟಿ ರೂಪಾಯಿಯಿಂದ ಶೇಕಡ 29 ರಷ್ಟು ಇಳಿಕೆಯಾಗಿದೆ.


Click it and Unblock the Notifications