ಬೆಂಗಳೂರು, ಜನವರಿ 23: ನೀವು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ, ಕುಟುಂಬ ಸದಸ್ಯರಿಗೆ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಾರ್ಗವೊಂದನ್ನು ಹುಡುಕುತ್ತಿದ್ದೀರಾ. ಆರ್ಥಿಕ ಸುರಕ್ಷತೆಗಾಗಿ ನೀವು ಮಾಸಿಕ ಇಂತಿಷ್ಟು ಹಣ ಕಟ್ಟಿ ಉತ್ತಮ ಹಿಂಪಡೆದ ನಿರೀಕ್ಷೆಯಲ್ಲಿದ್ದರೆ ನೀವು ಭಾರತೀಯ ಜೀವ ವಿಮಾ ನಿಗಮ (LIC)ದ ಹೊಸ ಯೋಜನೆಯ ಫಲಾನುಭವಿಗಳಾಬಹುದು.
ಹೌದು, ನಮ್ಮ ಆರ್ಥಿಕ ಭವಿಷ್ಯ ಉಜ್ವಲವಾಗಿಸಲು, ನಾವಿಲ್ಲದಿದ್ದರೂ ನಮ್ಮ ಕುಟುಂಬಕ್ಕೆ ಜೊತೆಯಾಗಲು ಜೀವ ವಿಮಾ ನಿಗಮ (LIC)ವು ಹೊಸ ಪ್ರೀಮಿಯಂ 'ದತ್ತಿ ಯೋಜನೆ'ಯೊಂದನ್ನು ಪರಿಚಯಿಸಿದೆ.
ಎಲ್‌ಐಸಿಯ ಈ ನವೀನ ಯೋಜನೆಯಡಿ ನೀವು ದುಡಿಮೆಯಲ್ಲಿ ಪ್ರತಿದಿನ ಕೇವಲ 71 ರೂಪಾಯಿಯಂತೆ ಮಾಸಿಕ 2,120 ರೂಪಾಯಿ ಹೂಡಿಕೆಗೆ ಅವಕಾಶ ಇದೆ. ಹೂಡಿಕೆ ಮುಕ್ತಾಯವಾದ ನಂತರ ನಿಮಗೆ 48.5 ಲಕ್ಷ ರೂಪಾಯಿ ಹಣ ದೊರೆಯಲಿದೆ ಎಂದು ನಿಗಮ ತಿಳಿಸಿದೆ.

ಎಲ್‌ಐಸಿ ದತ್ತಿ ಯೋಜನೆಯು ಪಾಲಿಸಿದಾರರಿಗೆ ಹೂಡಿಕೆಯ ಅವಧಿಯುದ್ದಕ್ಕೂ ನಿಯಮಿತ ಹೂಡಿಕೆ ಮೇಲೆ ಗಣನೀಯ ಆದಾಯ ಒದಗಿಸುತ್ತದೆ. ಅದೇ ಕೊನೆಯಲ್ಲಿ ಒಂದು ದೊಡ್ಡ ಮೊತ್ತವಾಗಿ ನಿಮ್ಮ ಕೈ ಸೇರುತ್ತದೆ. ಇದು ನಿಮ್ಮ ಸಾಲಗಳ ಪಾವತಿಗೆ, ಮಕ್ಕಳ ಶಿಕ್ಷಣಕ್ಕೆ ಇಲ್ಲವೇ ನಿಮ್ಮ ಕುಟುಂಬದ ದೀರ್ಘಾವಧಿಯ ಅವಶ್ಯಕತೆಗಳನ್ನು ಪೂರೈಸಲು ನೀವು ಈ ಹಣ ಬಳಸಬಹುದಾಗಿದೆ. ಮುಖ್ಯವಾಗಿ ಈ ಯೋಜನೆಯು ಜೀವ ವಿಮೆ ಸೌಲಭ್ಯವನ್ನು ನೀಡುತ್ತದೆ. ಸಾವಿನ ನಂತರವೂ ನಿಮ್ಮ ಕುಟುಂಬಕ್ಕೆ ಆರ್ಥಿಕ ಸುರಕ್ಷಿತತೆ ನೀಡುತ್ತದೆ. ತೆರಿಗೆ ಪ್ರಯೋಜನ ನೀಡಲಿದೆ ಎಂದು ನಿಗಮ ತಿಳಿಸಿದೆ.
ಹೂಡಿಕೆ ಹೇಗೆ?
ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಸರಳ. ನೀವು ಹತ್ತಿರದ ಎಲ್‌ಐಸಿ ಶಾಖೆಗೆ ಭೇಟಿ ನೀಡಿ. ಅಲ್ಲಿ ಪ್ರತಿನಿಧಿಗಳು ನಿಮಗೆ ಈ ಯೋಜನೆ, ಹೂಡಿಕೆ, ಅವಧಿ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾರೆ. ಆಗ ನೀವು ಈ ಯೋಜನೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಎಷ್ಟು ಉತ್ತಮ ಆಯ್ಕೆ ಎಂಬುದು ಖಚಿತವಾಗುತ್ತದೆ. ನಂತರ ನೀವು ಹೂಡಿಕೆಯ ಮೊತ್ತವನ್ನು ಆಯ್ಕೆ ಮಾಡಿಕೊಂಡು ಪೋರ್ಟ್‌ಫೋಲಿಯೊವನ್ನು ಅಭಿವೃದ್ಧಿಪಡಿಸಿ ನಂತರ ಪ್ರತಿ ತಿಂಗಳು ಹಣ ಹೂಡಿಕೆಗೆ ಆರಂಭಿಸಬಹುದು.

ಈ ಯೋಜನೆಯನ್ನು 8 ವರ್ಷ ವಯೋಮಿತಿ ಮೀರಿದವರಿಂದ ಗರಿಷ್ಠ 55 ವರ್ಷಗೊಳಗಿನ ವ್ಯಕ್ತಿಗಳು ಯೋಜನೆ ಖರೀದಿಸಬಹುದು. 12 ರಿಂದ 35 ವರ್ಷಗಳ ಪಾಲಿಸಿ ಅವಧಿಯ ಅವಶ್ಯಕತೆ ಸೇರಿದಂತೆ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಬೇಕು. ಯೋಜನೆಯ ಕನಿಷ್ಠ ವಿಮಾ ಮೊತ್ತ ರೂ. 1 ಲಕ್ಷ ಇದ್ದು, ಯಾವುದೇ ಗರಿಷ್ಠ ಹಣದ ಮಿತಿ ನೀಡಲಾಗಿಲ್ಲ.
ಉದಾಹರಣೆಗೆ, 18ನೇ ವಯಸ್ಸಿನಲ್ಲಿ ದತ್ತಿ ಯೋಜನೆ ಖರೀದಿಸಿ ಖರೀದಿಸುವ ಮತ್ತು 35 ವರ್ಷಗಳ ಅವಧಿಯನ್ನು ಆಯ್ಕೆ ಮಾಡುವ ವ್ಯಕ್ತಿಯು ವಾರ್ಷಿಕ ಪ್ರೀಮಿಯಂ ರೂ. 26,534 ನಷ್ಟು ಪಾವತಿಸುತ್ತಾನೆ. ಆತನ ಒಟ್ಟು ಹಣ 10 ಲಕ್ಷ ರೂ.ಆಗಲಿದೆ. ಎರಡನೇ ವರ್ಷ ಈ ಪ್ರೀಮಿಯಂ ಪಾವತಿಯ ಹಣ 25,962 ರೂ.ಗೆ ಇಳಿಕೆಯಾಗುತ್ತದೆ ಎಂದು ಎಲ್‌ಐಸಿ ತಿಳಿಸಿದೆ.
More From GoodReturns

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications