ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 2020-21ರ ಹಣಕಾಸು ವರ್ಷದಲ್ಲಿ 1.84 ಲಕ್ಷ ಕೋಟಿ ರೂ.ಗಳ ಪ್ರೀಮಿಯಂ ಸಂಗ್ರಹಿಸಿದ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 3.4ರಷ್ಟು ಅಥವಾ ಸುಮಾರು 1.77 ಲಕ್ಷ ಕೋಟಿ ರೂ. ನಷ್ಟಿದೆ ಎಂದು ಹೇಳಿದೆ.
ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಜನರು ಹೆಚ್ಚಿನ ಪ್ರೀಮಿಯಂ ಪಾವತಿಗಳನ್ನು ಮಾಡಿದ್ದರ ಜೊತೆಗೆ, ಸರ್ಕಾರಿ ವಿಮಾ ಕಂಪನಿಯು ವರ್ಷದಲ್ಲಿ 1.34 ಲಕ್ಷ ಕೋಟಿ ರೂ. ಕ್ಲೈಮ್ ಹಣವನ್ನು ಪಾವತಿ ಮಾಡಿದೆ.

ಎಲ್ಐಸಿ 1.85 ಲಕ್ಷ ಕೋಟಿ ರೂ.ಗಳ ಪ್ರೀಮಿಯಂನಲ್ಲಿ 56,406 ಕೋಟಿ ರೂ. ವೈಯಕ್ತಿವಾಗಿ ಪಡೆದರೆ, ಕಳೆದ ವರ್ಷ ಪಿಂಚಣಿ ಮತ್ತು ಗ್ರೂಪ್ ಇನ್ಷೂರೆನ್ಸ್ ಯೋಜನೆಗಳ ಅಡಿಯಲ್ಲಿ ಸುಮಾರು 1.27 ಲಕ್ಷ ಕೋಟಿ ರೂ.ಗಳನ್ನು ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಪ್ರೀಮಿಯಂಗಳಿಗಾಗಿ ಎಲ್ಐಸಿಯ ಮಾರುಕಟ್ಟೆ ಪಾಲು ಮಾರ್ಚ್‌ನಲ್ಲಿ ಶೇಕಡಾ 64.74ರಷ್ಟು ಮತ್ತು ಇಡೀ ಹಣಕಾಸು ವರ್ಷದಲ್ಲಿ ಶೇಕಡಾ 66.18 ರಷ್ಟಿದೆ. ಇದಲ್ಲದೆ, ಎಲ್‌ಐಸಿ ಗಳಿಸಿದ ಮಾರುಕಟ್ಟೆ ಪಾಲು ಮಾರ್ಚ್ 2021ಕ್ಕೆ ಶೇ. 81.04ರಷ್ಟಿದ್ದು, ಪಾಲಿಸಿಗಳ ಮೂಲಕ ವರ್ಷಕ್ಕೆ ಶೇ. 75 ರಷ್ಟು ಹೊಂದಿದೆ.
ಜೀವ ವಿಮಾ ಕ್ಷೇತ್ರವು ಒಟ್ಟಾರೆಯಾಗಿ 2.78 ಲಕ್ಷ ಕೋಟಿ ರೂ.ಗಳ ಹೊಸ ಪ್ರೀಮಿಯಂಗಳನ್ನು ಸಂಗ್ರಹಿಸಿದೆ. ಇದು 2020-21 ರ ಹಣಕಾಸು ವರ್ಷದ ವಾರ್ಷಿಕ ಆಧಾರದ ಮೇಲೆ ಶೇಕಡಾ 7.5 ರಷ್ಟು ಹೆಚ್ಚಾಗಿದೆ. ಅದರಲ್ಲಿ, ಖಾಸಗಿ ಜೀವ ವಿಮಾ ಕಂಪನಿಗಳು ಹೊಸ ಪ್ರೀಮಿಯಂಗಳನ್ನು 94,103 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಶೇಕಡಾ 16.3 ರಷ್ಟು ಬೆಳವಣಿಗೆಯನ್ನು ಹೊಂದಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications