ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಪಾವತಿ ಆಗದೆ, ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ಮತ್ತೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಾಂಪ್ರದಾಯಿಕ ನಾನ್ ಲಿಂಕ್ಡ್ ಪಾಲಿಸಿಯಾದರೆ ಮತ್ತೆ ಮುಂದುವರಿಸಲು ಐದು ವರ್ಷದೊಳಗಿನ ಕಾಲ ಮಿತಿ ವಿಧಿಸಲಾಗಿದೆ. ಒಂದು ವೇಳೆ ಯುನಿಟ್ ಲಿಂಕ್ಡ್ ಪಾಲಿಸಿಯಾದರೆ ಮೂರು ವರ್ಷದೊಳಗೆ ಮಾತ್ರ ಮಾಡಿಕೊಳ್ಳಲು ಸಾಧ್ಯ.
ಪ್ರೀಮಿಯಂ ಪಾವತಿಗೆ ಗಡುವಿನ ದಿನಾಂಕದಿಂದ ಹೆಚ್ಚುವರಿಯಾಗಿ ಒಂದು ತಿಂಗಳ ಸಮಯ ನೀಡುತ್ತದೆ ಎಲ್ ಐಸಿ. ಆ ಅವಧಿಯೊಳಗೆ ಕೂಡ ಪ್ರೀಮಿಯಂ ಪಾವತಿಸದಿದ್ದರೆ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಈಗಿನ ಹೊಸ ನಿಯಮ ಜಾರಿಗೆ ತರುವ ಮುನ್ನ, ಮೊದಲ ಬಾರಿಗೆ ಪ್ರೀಮಿಯಂ ತಪ್ಪಿಸಿದ ಎರಡು ವರ್ಷದೊಳಗೆ ಮುಂದುವರಿಸಿಕೊಂಡು ಹೋಗಬೇಕಿತ್ತು.
ಪಾಲಿಸಿಯ ಅವಧಿ ಮುಗಿಯುವ ಮುನ್ನ ಬಾಕಿ ಪ್ರೀಮಿಯಂ, ಬಡ್ಡಿಯನ್ನು ಪಾವತಿಸಿ, ಮತ್ತೆ ಪಾಲಿಸಿಯನ್ನು ಮುಂದುವರಿಸಬಹುದಿತ್ತು. ಆದರೆ ಈ ನಿಯಮವು ಜನವರಿ 1, 2014ರ ನಂತರ ಪಾಲಿಸಿ ಖರೀದಿ ಮಾಡಿದವರಿಗೆ ಅನ್ವಯ ಆಗುತ್ತದೆ.

ಅದಕ್ಕೂ ಮುನ್ನ ಪಾಲಿಸಿ ಖರೀದಿಸಿದವರು ನಾನ್ ಲಿಂಕ್ಡ್ ಪಾಲಿಸಿಗಳನ್ನು ಐದು ವರ್ಷದೊಳಗೆ ಹಾಗೂ ಯುನಿಟ್ ಲಿಂಕ್ಡ್ ಪಾಲಿಸಿಗಳನ್ನು ಮೂರು ವರ್ಷದೊಳಗೆ (ಪ್ರೀಮಿಯಂ ಪಾವತಿ ನಿಲ್ಲಿಸಿದ ಸಮಯದಿಂದ ಮೊದಲುಗೊಂಡು) ಮತ್ತೆ ಮುಂದುವರಿಸಬಹುದು.
ಆದರೆ, ಈಗ ಜನವರಿ 1, 2014ರ ನಂತರ ಪಾಲಿಸಿ ಖರೀದಿ ಮಾಡಿದವರಿಗೂ ಮೇಲ್ಕಂಡ ನಿಯಮ ಅನ್ವಯ ಆಗುತ್ತದೆ. ಐಆರ್ ಡಿಎಐನಿಂದ ಅನುಮತಿ ದೊರೆತ ನಂತರ ನಿಯಮ ಜಾರಿಗೆ ಬಂದಿದೆ.
ಇಲ್ಲಿ ಇನ್ನೂ ಒಂದು ಅಂಶ ಗಮನದಲ್ಲಿ ಇರಬೇಕು. ಪಾಲಿಸಿಯ ನಿರ್ದಿಷ್ಟ ಷರತ್ತುಗಳು ಕೂಡ ಅನ್ವಯ ಆಗುತ್ತದೆ. ಜೀವ ವಿಮೆ ಕವರ್ ಜತೆಗೆ ಪಾಲಿಸಿದಾರರು ಮುಂದುವರಿಯಬಹುದು. ಹೊಸದಾಗಿ ಮತ್ತೆ ಪಾಲಿಸಿ ಖರೀದಿ ಮಾಡುವ ಅಗತ್ಯ ಇಲ್ಲದೆ ಅನುಕೂಲಗಳನ್ನು ಪಡೆಯಬಹುದು.


Click it and Unblock the Notifications