ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ನಲ್ಲಿ ಶೇಕಡ 6.66 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ಮಂಗಳವಾರ ಬಹಿರಂಗಪಡಿಸಿದೆ.
ಜೂನ್ 30, 2023 ರಂತೆ, ಎಲ್‌ಐಸಿ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಶೇಕಡ 6.49 ರಷ್ಟು ಪಾಲನ್ನು ಹೊಂದಿದೆ. ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್), ಆಗಸ್ಟ್ 21 ರಂದು ಷೇರು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಹಿಂದೆ ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.

ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಸೋಮವಾರ ಸುಮಾರು ಶೇಕಡ 5ರಷ್ಟು ಇಳಿಕೆಯೊಂದಿಗೆ ವಹಿವಾಟನ್ನು ಆರಂಭ ಮಾಡಿದೆ. ಮಂಗಳವಾರದ ಎರಡನೇ ನೇರ ವಹಿವಾಟಿನ ದಿನವೂ ಕೂಡಾ ಜೆಎಫ್‌ಎಸ್‌ಎಲ್ ಷೇರು ಸುಮಾರು ಶೇಕಡ 5 ರಷ್ಟು ಕುಸಿತ ಕಂಡಿದೆ.
ಸೋಮವಾರ ಬಿಎಸ್‌ಇಯಲ್ಲಿ ಜೆಎಫ್‌ಎಸ್‌ಎಲ್ ಪ್ರತಿ ಷೇರಿಗೆ 265 ರೂಪಾಯಿ ಆಗಿದೆ. ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ದರವು 262 ರೂಪಾಯಿ ಆಗಿದೆ. ಮಂಗಳವಾರ ಎಲ್‌ಐಸಿಯ ಷೇರು ಸುಮಾರು 665.35 ರೂಪಾಯಿ ಆಗಿತ್ತು. ಈ ಸಮಯಕ್ಕೆ ಶೇಕಡ 5.00 ರಷ್ಟು ಇಳಿಕೆಯಾಗಿ, 236.45 ರೂಪಾಯಿಗೆ ತಲುಪಿದೆ. ಎಲ್‌ಐಸಿ ಷೇರು ಶೇಕಡ 1.63 ರಷ್ಟು ಏರಿಕೆಯಾಗಿ 662.80 ರೂಪಾಯಿಗೆ ತಲುಪಿದೆ.
ಎಲ್‌ಐಸಿ ತನ್ನ ಇತ್ತೀಚಿನ ಮಾರುಕಟ್ಟೆ ಫೈಲಿಂಗ್‌ನಲ್ಲಿ ಆಗಸ್ಟ್ 18, 2023 ರಂದು ಟಿಐಎಲ್ ಲಿಮಿಟೆಡ್‌ನಲ್ಲಿ ತನ್ನ ಷೇರುಗಳನ್ನು ಕಡಿಮೆ ಮಾಡಿದೆ ಎಂದು ಬಹಿರಂಗಪಡಿಸಿದೆ. ಟಿಐಎಲ್ ಲಿಮಿಟೆಡ್‌ನಲ್ಲಿ ಎಲ್‌ಐಸಿಯ ಪಾಲು ಈಕ್ವಿಟಿ ಷೇರುಗಳ ಸಂಖ್ಯೆ 8,10,038 ರಿಂದ 5,96,195 ಕ್ಕೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ಎಲ್‌ಐಸಿ ಇಂಡಿಯಾದ ಪ್ರಕಾರ, ಟಿಐಎಲ್‌ನಲ್ಲಿನ ಎಲ್‌ಐಸಿಯ ಪಾಲು ಶೇಕಡ 8.076ರಿಂದ ಶೇಕಡ 5.944ಕ್ಕೆ ಇಳಿಕೆಯಾಗಿದೆ.
ಜಿಯೋ ಫೈನಾನ್ಶಿಯಲ್ ಸರ್ವೀಸಸ್‌ನ ಬಗ್ಗೆ ಪ್ರತಿಕ್ರಿಯಿಸಿದ ಎಪ್ಸ್2ಟ್ರೇಡ್ಸ್‌ನ ಎಆರ್ ರಾಮಚಂದ್ರನ್, "ಎಲ್‌ಐಸಿ ಜಿಯೋ ಫೈನಾನ್ಶಿಯಲ್ ಸರ್ವೀಸಸ್‌ನಲ್ಲಿ ಶೇಕಡ 6.66 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದ್ದರೂ ಸಹ, ಜಿಯೋ ಫೈನಾನ್ಶಿಯಲ್ ಇತರೆ ಸಂಸ್ಥೆಗಳಿಗೆ ಹೋಲಿಸಿದಾಗ ಹೆಚ್ಚು ಮೌಲ್ಯಯುತವಾಗಿದೆ.
ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಮಾಹಿತಿ
ಲೀಸ್ಟಿಂಗ್‌ಗೂ ಮೊದಲು ಮೊದಲ ಡಿಜಿಟಲ್ ಎನ್‌ಬಿಎಫ್‌ಸಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ ಸುಮಾರು 300 ರೂಪಾಯಿಗಳಂತೆ ವಹಿವಾಟು ಮಾಡಿದೆ. ಲೀಸ್ಟ್ ಮಾಡುವುಕ್ಕೂ ಮುನ್ನ ಈ ಸ್ಟಾಕ್ ಬೆಲೆ 261.85 ರೂಪಾಯಿ ಆಗಿದ್ದು, ಗ್ರೇ ಮಾರ್ಕೆಟ್‌ನಲ್ಲಿಯೇ ಸ್ಟಾಕ್ ಬೆಲೆಗಿಂತ ಅಧಿಕ ಬೆಲೆಯಲ್ಲಿ ವಹಿವಾಟು ನಡೆದಿದೆ.
ಹೂಡಿಕೆದಾರರು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರತಿ ಷೇರಿಗೆ ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಒಂದು ಪಾಲನ್ನು ನಿಗದಿಪಡಿಸಲಾಗಿದೆ. ಪೋಷಕ ಸಂಸ್ಥೆಯಿಂದ ಬೇರ್ಪಟ್ಟು ಸುಮಾರು ಒಂದು ತಿಂಗಳುಗಳ ಕಾಲ ನಕಲಿ ಸ್ಟಾಕ್ ಆಗಿದ್ದ ಜೆಎಫ್‌ಎಸ್ ಷೇರುಗಳು ಅಂತಿಮವಾಗಿ ಇಂದು ವಹಿವಾಟಿಗೆ ಇಳಿಯುತ್ತಿದೆ. ಆದರೆ ಮುಂದಿನ 10 ಟ್ರೇಡಿಂಗ್ ದಿನಗಳವರೆಗೆ ಟ್ರೇಡ್-ಟು-ಟ್ರೇಡ್ ವಿಭಾಗದಲ್ಲಿ ಇರುತ್ತದೆ.
ಗಮನಿಸಿ: ಈ ಸ್ಟಾಕ್‌ನಲ್ಲಿ ಹೂಡಿಕೆ ಮಾಡುವಂತೆ ಲೇಖಕರು ಅಥವಾ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು ಸಲಹೆ ನೀಡುವುದಿಲ್ಲ. ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್‌ನ ಈ ಬರಹದ ಆಧಾರದ ಮೇಲೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರಿಂದಾಗುವ ನಷ್ಟಕ್ಕೆ ಗುಡ್‌ರಿಟರ್ನ್ಸ್ ಆಗಲಿ ಅಥವಾ ಲೇಖಕರಾಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚಿಸುವುದು ಅಗತ್ಯ.


Click it and Unblock the Notifications