ಅಕ್ಟೋಬರ್ 1 ರಿಂದ ದೇಶಾದ್ಯಂತ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಪೋಸ್ಟ್ ಆಫೀಸ್ ಯೋಜನೆ ಅಥವಾ ಕ್ರೆಡಿಟ್ ಕಾರ್ಡ್ ಶುಲ್ಕಗಳು ಅಡುಗೆ ಅನಿಲ ಬೆಲೆಗಳಿರಬಹುದು ಇವೆಲ್ಲವುಗಳಿಗೆ ಸಂಬಂಧಿಸಿದ ಬದಲಾವಣೆಗಳು ಶ್ರೀಸಾಮಾನ್ಯನ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಇದೇ ರೀತಿ ಅಕ್ಟೋಬರ್ 1 ರಿಂದ ವಿಮಾ ನೀತಿಗಳ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ..
ಜೀವ ವಿಮಾ ಪಾಲಿಸಿ ಸರೆಂಡರ್‌ಗಾಗಿ ಹೊಸ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತಂದಿದ್ದು, ಈ ಕಾರಣದಿಂದಾಗಿ ಪಾಲಿಸಿ ಪ್ರೀಮಿಯಂ ಹೆಚ್ಚಾಗುವ ನಿರೀಕ್ಷೆಯಿದೆ. ಇದರೊಂದಿಗೆ, ಈಗ ಜೀವ ವಿಮಾ ಪಾಲಿಸಿಯನ್ನು ಸರೆಂಡರ್ ಮಾಡಿದಾಗ ಹೆಚ್ಚಿನ ಮರುಪಾವತಿಯನ್ನು ನೀಡಲಾಗುತ್ತದೆ. ಹೀಗಾಗಿ ಪಾಲಿಸಿಯನ್ನು ಸರೆಂಡರ್ ಮಾಡುವುದರಿಂದ ಪಾಲಿಸಿದಾರರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಸಾಂಪ್ರದಾಯಿಕ ಎಂಡೋಮೆಂಟ್ ಪಾಲಿಸಿಗಳಿಗಾಗಿ IRDAI ((Insurance Regulatory and Development Authority of India) ವಿಮಾ ಕಂಪನಿಗಳಿಗೆ ಹೆಚ್ಚಿನ ವಿಶೇಷ ಸರೆಂಡರ್ ಮೌಲ್ಯವನ್ನು (SSV) ನೀಡಿದೆ ಎಂದು ಎಕನಾಮಿಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ

ಈ ಬದಲಾವಣೆಯಿಂದ ಅನೇಕ ಪಾಲಿಸಿದಾರರಿಗೆ ತಮ್ಮ ಜೀವ ವಿಮಾ ಪಾಲಿಸಿಗಳನ್ನು ಬದಲಾಯಿಸಲು ಅಥವಾ ಸ್ಥಗಿತಗೊಳಿ ಸಿದ್ರೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಸರೆಂಡರ್ ಮೌಲ್ಯ ನಿಯಂತ್ರಣವನ್ನು ಬದಲಾಯಿಸಲು ಮತ್ತು ನಿಯಮಗಳನ್ನು ಅನುಸರಿಸಲು ಸಮಯವನ್ನು ವಿಸ್ತರಿಸಲು ಅನೇಕ ವಿಮಾ ಕಂಪನಿಗಳು ಐಆರ್‌ಡಿಎಐ ಗೆ ಮನವಿ ಮಾಡಿತ್ತು. ಅಕ್ಟೋಬರ್ 1, 2024 ರಿಂದ, ಎಲ್ಲಾ ವಿಮಾ ಕಂಪನಿಗಳು ವಿಶೇಷ ಸರೆಂಡರ್ ಮೌಲ್ಯ ನಿಯಂತ್ರಣವನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ. ಒಂದು ವೇಳೆ ವಿಫಲವಾದರೆ, ವಿಮಾ ನಿಯಂತ್ರಕ ಐಆರ್‌ಡಿಎಐ ಇಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಐಆರ್‌ಡಿಎಐ ಹೊಸ ನಿಯಮಗಳ ಪ್ರಕಾರ, ಈಗ ಪಾಲಿಸಿಯನ್ನು ರದ್ದುಪಡಿಸಿದಾಗ ಹೆಚ್ಚಿನ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಹಿಂದೆ, ಪಾಲಿಸಿಯನ್ನು ಕೆಲವು ನಿರ್ದಿಷ್ಟ ಅವಧಿಯೊಳಗೆ ರದ್ದುಪಡಿಸಿದರೆ ಮಾತ್ರ ಭಾಗಶಃ ಮೊತ್ತವನ್ನು ಹಿಂಪಡೆಯಲು ಅವಕಾಶವಿತ್ತು. ಆದರೆ ಈಗಿನ ನಿಯಮದಂತೆ, ಹೆಚ್ಚಿನ ಮೊತ್ತವನ್ನು ಹಿಂಪಡೆಯಬಹುದಾಗಿದೆ.
ಈ ಹೊಸ ನಿಯಮದಿಂದ ವಿಮಾ ಪಾಲಿಸಿದಾರರು ತಮ್ಮ ನಿರ್ಧಾರಗಳನ್ನು ಹೆಚ್ಚು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಎಬಿಪಿ ನ್ಯೂಸ್ ಪ್ರಕಾರ, ಈ ಮೊದಲು ಪಾಲಿಸಿಯನ್ನು 4 ರಿಂದ 7 ವರ್ಷಗಳೊಳಗೆ ಸರೆಂಡರ್ ಮಾಡಿದರೆ, ಪ್ರೀಮಿಯಂನ 50 ಪ್ರತಿಶತವನ್ನು ಪಾಲಿಸಿದಾರರಿಗೆ ಪಾವತಿಸಬೇಕು ಎಂದು ನಿಯಮವಾಗಿತ್ತು. ಉದಾಹರಣೆಗೆ, ನೀವು 2 ಲಕ್ಷ ರೂ ಪ್ರೀಮಿಯಂ ಪಾವತಿಸಿ ಮತ್ತು 4 ವರ್ಷಗಳಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಿದರೆ, ನೀವು ಸುಮಾರು 1.2 ಲಕ್ಷ ರೂ. ಆಗಿತ್ತು. ಆದರೆ ಈಗ ವಿಶೇಷ ಸರೆಂಡರ್ ಮೌಲ್ಯದ ನಿಯಮಗಳ ಪ್ರಕಾರ, ಸುಮಾರು 1.55 ಲಕ್ಷ ರೂ. ಪಡೆಯುತ್ತಾರೆ.
ಈ ಹಿಂದೆ ಪಾಲಿಸಿದಾರರು 1 ವರ್ಷದ ನಂತರ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಅವರಿಗೆ ಯಾವುದೇ ಮೊತ್ತವನ್ನು ನೀಡುತ್ತಿರಲಿಲ್ಲ, ಆದರೆ ಹೊಸ ನಿಯಮದ ಪ್ರಕಾರ ಅಕ್ಟೋಬರ್ 1 ರ ನಂತರ ಜೀವ ವಿಮೆಯನ್ನು ಸರೆಂಡರ್ ಮಾಡಿದರೆ ಅವರಿಗೆ ಮರುಪಾವತಿ ಸಿಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ, ಐಆರ್‌ಡಿಎಐ, 'ಐದು ವರ್ಷಕ್ಕಿಂತ ಕಡಿಮೆ ಅವಧಿಯ ಪ್ರೀಮಿಯಂ ಪಾವತಿ ಅವಧಿ ಮತ್ತು ಏಕ ಪ್ರೀಮಿಯಂ ಪಾಲಿಸಿಗಳಿಗೆ, ಅನ್ವಯವಾಗುವಂತೆ ಮೊದಲ ಪೂರ್ಣ ವರ್ಷದ ಪ್ರೀಮಿಯಂ ಅಥವಾ ಸಿಂಗಲ್ ಪ್ರೀಮಿಯಂ ಪಡೆದ ತಕ್ಷಣ ಎಸ್‌ಎಸ್‌ವಿ ಪಾವತಿಸಲಾಗುವುದು " ಎಂದು ಹೇಳಿದೆ.
ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ ಪಾಲಿಸಿದಾರರು 5 ಲಕ್ಷ ರೂ ವಿಮಾ ಮೊತ್ತದೊಂದಿಗೆ 10 ವರ್ಷಗಳ ಪಾಲಿಸಿಯನ್ನು ಖರೀದಿಸಿದರು. ಅವರು ಮೊದಲ ವರ್ಷದಲ್ಲಿ 50,000 ರೂ.ಗಳ ಭಾರಿ ಪ್ರೀಮಿಯಂ ಪಾವತಿಸುತ್ತಾರೆ. ಇದುವರೆಗೆ ಒಂದು ವರ್ಷದ ನಂತರ ಪಾಲಿಸಿಯನ್ನು ಕಂಟ್ಯೂನ್ ಮಾಡಿದಿದ್ದರೆ, ವಿಮಾದಾರರಿಂದ ಯಾವುದೇ ಮರುಪಾವತಿಯನ್ನು ಸಿಗುತ್ತಿರಲಿಲ್ಲ. ಹೀಗಾಗಿ 50 ಸಾವಿರ ರೂಪಾಯಿ ನಷ್ಟವಾಗುತ್ತಿತ್ತು. ಆದರೆ ಇತ್ತೀಚಿನ ನಿಯಮಗಳ ಪ್ರಕಾರ, ಅವರು ಒಂದು ವರ್ಷದ ನಂತರ ಪಾಲಿಸಿಯಿಂದ ನಿರ್ಗಮಿಸಿದರೂ ಮರುಪಾವತಿಗೆ ಅರ್ಹರಾಗುತ್ತಾರೆ. ವಿಮಾದಾರರು ಪೂರ್ಣ ವರ್ಷಕ್ಕೆ ಪ್ರೀಮಿಯಂ ಪಡೆದಿದ್ದರೆ, ಅವರು ಪಾಲಿಸಿದಾರರಿಗೆ 31,295 ರೂಪಾಯಿಗಳನ್ನು ಹಿಂತಿರುಗಿಸಬೇಕಾಗುತ್ತದೆ.


Click it and Unblock the Notifications