ಬೆಂಗಳೂರು, ಮೇ 9: ಅಮೆರಿಕಾದ ನ್ಯೂಯಾರ್ಕ್ ಸಿಟಿಯು ಜಗತ್ತಿನ ಅತ್ಯಂತ ಶ್ರೀಮಂತ ನಗರಗಳ ಪೈಕಿ ಒಂದು ನಗರವಾಗಿ ಗುರುತಿಸಿಕೊಂಡಿದೆ. ಈ ನ್ಯೂಯಾರ್ಕ್ ನಗರವು 3,50,000 ಮಿಲಿಯನೇರ್‌ಗಳನ್ನು ಹೊಂದಿರುವ ಮಹಾನಗರವಾಗಿದೆ.
ಆ ಮೂಲಕ ಯಾವುದೇ ಒಂದು ನಗರ ಹೊಂದಿರುವ ಅತಿಹೆಚ್ಚಿನ ಸಂಖ್ಯೆಯ ಬಿಲಿಯನೇರ್‌ಗಳು ಇಲ್ಲಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿ ಅಂದರೆ ಕಳೆದ ಒಂದು ದಶಕದಲ್ಲಿ ಈ ನಗರದ ಶ್ರೀಮಂತರ ಸಂಖ್ಯೆ ಕೂಡ 48%ರಷ್ಟು ಜಾಸ್ತಿಯಾಗಿದೆ ಎಂದು ಇಮಿಗ್ರೆಂಟ್ ಕನ್ಸಲ್ಟೆನ್ಸಿಯಾಗಿರುವ ಹೆನ್ಲಿ& ಪಾರ್ಟನರ್ಸ್ ಹೇಳಿದೆ. ತನ್ನ 8.26 ಮಿಲಿಯನ್ ನಿವಾಸಿಗಳ ಪೈಕಿ ಪ್ರತಿ 24 ಮಂದಿಯ ಪೈಕಿ ಒಬ್ಬರು ಏಳು ಅಂಕಿಯ ಆಸ್ತಿಯನ್ನು ಹೊಂದಿದ್ದಾರೆ. ಇದು 2013ರಲ್ಲಿ ಪ್ರತಿ 36 ಮಂದಿಯಲ್ಲಿ ಒಬ್ಬರು ಈ ರೀತಿಯ ಶ್ರೀಮಂತಿಕೆಯನ್ನು ಹೊಂದಿದ್ದರು. ಈ ಸಂಸ್ಥೆಯ ವರದಿ ಪ್ರಕಾರ, 60 ಬಿಲಿಯನೇರ್ ಹಾಗೂ 744 ಮಂದಿಯು ಸುಮಾರು 100 ಮಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

ಅತಿಹೆಚ್ಚಿನ ಸಂಖ್ಯೆಯ ಮಿಲಿಯನೇರ್‌ಗಳ ಪಟ್ಟಿಯಲ್ಲಿ ಮಿಯಾಮಿ 33ನೇ ಸ್ಥಾನದಲ್ಲಿದೆ. ಕಳೆದ 10 ವರ್ಷದಲ್ಲಿ ಈ ಮಿಲಿನೇರ್‌ಗಳ ಸಂಖ್ಯೆಯು ಶೇ.78ರಷ್ಟು ಜಾಸ್ತಿಯಾಗಿದೆ. ಹಾಗೆಯೇ ಬೇ ಏರಿಯಾವು 305,700 ಮಂದಿ ಮಿಲಿನೇರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಾನ್ ಜೋಸ್, ಸಾನ್ ಫ್ರಾನ್ಸಿಸ್ಕೋ, ಪಾಲೊ ಆಲ್ಟೊ ಒಳಗೊಂಡಂತೆ ಈ ಪ್ರದೇಶವೂ ಏಳು ಅಂಕೆಯ ಸಂಪತ್ತು ಹೊಂದಿರುವ ಅಗರ್ಭ ಶ್ರೀಮಂತರಿದ್ದಾರೆ.
ಇನ್ನು ಟೋಕಿಯೋ 298,300 ಮಂದಿ ಮಿಲಿಯನೇರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ನಗರದಲ್ಲಿನ ಶ್ರೀಮಂತರ ಸಂಖ್ಯೆಯು ಕಳೆದ ಹತ್ತು ವರ್ಷದಲ್ಲಿ ಶೇ.5ರಷ್ಟು ಏರಿಕೆ ಕಂಡಿದೆ. ಇನ್ನೊಂದೆಡೆ ಏಷ್ಯಾ ಖಂಡದಲ್ಲಿರುವ ಸಿಂಗಾಪುರ ನಗರವು 3,400 ಮಿಲಿಯನೇರ್‌ಗಳೊಂದಿಗೆ ಅತಿಹೆಚ್ಚಿನ ಶ್ರೀಮಂತರ ನಗರವಾಗಿ 4ನೇ ಸ್ಥಾನದಲ್ಲಿದೆ.
ಹೆನ್ಲಿ ಹಾಗೂ ಪಾಲುದಾರರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುರ್ಗ್ ಸ್ಟೆಫೆನ್ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ಮಾರುಕಟ್ಟೆಗಳಲ್ಲಿನ ನಿರ್ಗಮನವು ವಿಶ್ವದ ಶ್ರೀಮಂತ ನಗರಗಳ ಬೆಳವಣಿಗೆಯನ್ನು ಉತ್ತೇಜಿಸಿದೆ. 2023ರಲ್ಲಿ ಜಾಗತಿಕ ಷೇರುಗಳ ಮೌಲ್ಯ ಶೇ.20ರಷ್ಟು ಹಾಗೂ ಈ ವರ್ಷದಲ್ಲಿ ಶೇ.7ರಷ್ಟು ಏರಿಕೆ ಕಂಡಿದೆ.
ಈ ನಡುವೆ ಕೆಲವು ಪ್ರಮುಖ ನಗರಗಳಲ್ಲಿನ ಶ್ರೀಮಂತರ ಸಂಖ್ಯೆಯಲ್ಲಿಯೂ ಕುಸಿತ ಕಂಡಿದೆ. ಕಳೆದ ಒಂದು ದಶಕದಲ್ಲಿ ಲಂಡನ್ ತನ್ನ ಮಿಲಿಯನೇರ್‌ಗಳ ಸಂಖ್ಯೆಯನ್ನು ಶೇ.10ರಷ್ಟು ಕಳೆದುಕೊಂಡಿದೆ. ಇದರಲ್ಲಿ ಯುಕೆಯು ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸುವ ಕ್ರಮವೂ ಸೇರಿದೆ. ಕೊರೊನಾ ಸ್ಫೋಟದ ಬಳಿಕ ಚೀನಾದ ಮಿಲಿಯನೇರ್‌ಳು ಹೆಚ್ಚಿನ ಸಂಖ್ಯೆಯಲ್ಲಿ ಹಾಂಗ್‌ಕಾಂಗ್‌ನಿಂದ ಸಿಂಗಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಆ ಮೂಲಕ ಶ್ರೀಮಂತರ ಸಂಖ್ಯೆಯಲ್ಲಿ ಶೇ.4ರಷ್ಟು ಕುಸಿತ ಕಂಡಿದೆ.
ಇನ್ನೊಂದೆಡೆ, ಮಿಲಿಯನೇರ್‌ಗಳ ನಗರದ ಪಟ್ಟಿಯಲ್ಲಿ ಕೆಲವು ಹೊಸ ನಗರಗಳು ಕೂಡ ಸೇರ್ಪಡೆಯಾಗಿವೆ. ಆ ಪೈಕಿ ಚೀನಾದ ಶೆನ್‌ಜೆನ್ ಕೂಡ ಒಳಗೊಂಡಿದೆ. ಅಲ್ಲಿ ಕಳೆದ ಒಂದು ದಶಕದಲ್ಲಿ ಮಿಲಿಯನೇರ್‌ಗಳ ಸಂಖ್ಯೆಯು ಶೇ.140ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ ಬೆಂಗಳೂರು, ಹೋ ಚಿ ಮಿನ್ಹ್ ಸಿಟಿ, ವಿಯೆಟ್ನಾಂ ಹಾಗೂ ಯುಎಸ್‌ನ ಅರಿಜೋನಾದ ಸ್ಕಾಟ್ಸ್‌ಡೇಲ್ ನಗರಗಳು ಕೂಡ ಕಳೆದ 10 ವರ್ಷಗಳಲ್ಲಿ ತಮ್ಮಲ್ಲಿರುವ ಮಿಲಿಯನೇರ್‌ಗಳ ಜನಸಂಖ್ಯೆಯನ್ನು ದುಪ್ಪಟ್ಟು ಮಾಡಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಇನ್ನು ದುಬೈ ನಗರವು ಮಧ್ಯಪ್ರಾಚ್ಯ ಭಾಗದಲ್ಲಿ ಅತ್ಯಂತ ಶ್ರೀಮಂತ ನಗರವಾಗಿ ಗುರುತಿಸಿಕೊಂಡಿದ್ದು, ಜಾಗತಿಕವಾಗಿ 21ನೇ ಸ್ಥಾನದಲ್ಲಿದೆ.


Click it and Unblock the Notifications