ಕಾರಿನ ಮೇಲೆ ಸಾಲ; ಬಡ್ಡಿ, ಮರುಪಾವತಿ ಇತ್ಯಾದಿ ವಿವರ

ಹಣಕಾಸಿನ ಸಮಸ್ಯೆ ಇದೆಯಾ? ನಿಮ್ಮ ಬಳಿ ಕಾರು ಇದೆಯಾ? ಅದನ್ನು ಅಡಮಾನ ಮಾಡಿ ಕೂಡ ಸಾಲ ಪಡೆಯಬಹುದು. ಕೆಲವು ಸಂಸ್ಥೆಗಳಂತೂ ಕಾರಿನ ಮೂಲ ಮೌಲ್ಯದ 150 ಪರ್ಸೆಂಟ್ ನಷ್ಟು ಸಾಲ ನೀಡುತ್ತವೆ. ಇನ್ನೂ ಕೆಲ ಸಂಸ್ಥೆಗಳು ಕಾರಿನ ಮೌಲ್ಯದ ಶೇಕಡಾ 50ರಷ್ಟು ನೀಡುತ್ತವೆ.

ಬ್ಯಾಂಕ್ ಜತೆಗೆ ನಿಮ್ಮ ಸಂಬಂಧ ಹೇಗಿದೆ, ಈ ಹಿಂದೆ ಕಾರಿನ ಸಾಲವನ್ನು ಹೇಗೆ ಮರುಪಾವತಿ ಮಾಡಿದ್ದೀರಿ ಎಂಬುದು ಇದಕ್ಕೆ ಆಧಾರವಾಗಿರುತ್ತದೆ. ಕೆಲವರಿಗೆ ಪ್ರೀ ಅಪ್ರೂವ್ಡ್ ಸಾಲ ಕೂಡ ಈಗಾಗಲೇ ನಿಮ್ಮ ಹೆಸರಲ್ಲಿ ಇರಬಹುದು. ಅದಕ್ಕೆ ಕನಿಷ್ಠ ಪ್ರಮಾಣದ ದಾಖಲೆಗಳನ್ನು ಒದಗಿಸಿದರೂ ಸಾಕು. ಯಾವುದೇ ಕಾಗದ- ಪತ್ರಗಳ ಅಗತ್ಯವಿಲ್ಲದೆ ತಕ್ಷಣವೇ ಸಾಲ ವಿತರಣೆ ಆಗುತ್ತದೆ.

ಒಂದು ವೇಳೆ ಹೊಸ ಗ್ರಾಹಕರಾಗಿದ್ದಲ್ಲಿ ಕೆವೈಸಿ ದಾಖಲಾತಿ ನೀಡಬೇಕು. ಬ್ಯಾಂಕ್ ಮಾಹಿತಿ, ಸಂಬಳದ ಸ್ಲಿಪ್ ಅಥವಾ ಐಟಿಆರ್ ಮುಂತಾದವು ಒದಗಿಸಬೇಕು. ವೇತನ ಪಡೆಯುವವರಿಗೆ ಹಾಗೂ ಸ್ವ ಉದ್ಯೋಗಿಗಳಿಗೆ ಹೀಗೆ ಸಾಲ ಪಡೆಯುವುದಕ್ಕೆ ಪ್ರತ್ಯೇಕ ಅಗತ್ಯಗಳು ಇರುತ್ತವೆ.

ಕಾರಿನ ಮೇಲೆ ಸಾಲ; ಬಡ್ಡಿ, ಮರುಪಾವತಿ ಇತ್ಯಾದಿ ವಿವರ

ಸಾಲದ ಮೇಲಿನ ಬಡ್ಡಿ ದರವು ವಾರ್ಷಿಕ 13.75% ನಿಂದ 17 ಪರ್ಸೆಂಟ್ ತನಕ ಇರುತ್ತದೆ. ಕೆಲವು ಕಡೆಗೆ ಪರ್ಸನಲ್ ಲೋನ್ ಗಿಂತ ಇದು ಕಡಿಮೆ ಇರುತ್ತದೆ. ಸಾಲ ಮರುಪಾವತಿ ಅವಧಿ 12ರಿಂದ 84 ತಿಂಗಳ ತನಕ ಸಾಲ ನೀಡುವ ಸಂಸ್ಥೆಯ ಮೇಲೆ ಅವಲಂಬಿತ ಆಗುತ್ತದೆ.

ಆದರೆ, ಸಾಲ ಮಾಡುವ ಮುನ್ನ ಮರುಪಾವತಿ ಆಗದ ಪ್ರೊಸೆಸಿಂಗ್ ಫೀ, ಪೂರ್ವಪಾವತಿ ಮಾಡಿದರೆ ಅದಕ್ಕೆ ಶುಲ್ಕ, ಭಾಗಶಃ ಪಾವತಿ ಶುಲ್ಕ, ಸ್ಟ್ಯಾಂಪ್ ಡ್ಯೂಟಿ ಶುಲ್ಕ, ಆರ್ ಟಿಒ ವರ್ಗಾವಣೆ ಶುಲ್ಕ, ಇಎಂಐ ತಡವಾದಲ್ಲಿ ಶುಲ್ಕ, ಇಎಂಐ ಪಾವತಿ ಬೌನ್ಸ್ ಆದಲ್ಲಿ ಅದಕ್ಕೆ ಶುಲ್ಕ ಇತ್ಯಾದಿಗಳನ್ನು ಸಹ ಗಮನಿಸಿಕೊಳ್ಳಬೇಕು.

ಇನ್ನು ಸಾಲ ಪಡೆಯುವ ವ್ಯಕ್ತಿಯ ಎಲ್ಲ ಇಎಂಐಗಳು ಸೇರಿ ಆದಾಯದ 40 ಪರ್ಸೆಂಟ್ ಒಳಗಿರಬೇಕು. ಒಂದು ವೇಳೆ ಇಎಂಐ ಅನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+