For Quick Alerts
ALLOW NOTIFICATIONS  
For Daily Alerts

ಬಡ್ಡಿ ಮನ್ನಾ: ನ. 5ರೊಳಗೆ ಸಾಲಗಾರರ ಖಾತೆಗೆ ಕ್ಯಾಶ್ ಬ್ಯಾಕ್ ಎಂದ ಆರ್ ಬಿಐ

By ಅನಿಲ್ ಆಚಾರ್
|

ಇಎಂಐ ವಿನಾಯಿತಿ ಅವಧಿಯಲ್ಲಿ ಎರಡು ಕೋಟಿ ರುಪಾಯಿವರೆಗಿನ ಸಾಲದ ಮೇಲೆ ಸಂಗ್ರಹಿಸಿದ "ಬಡ್ಡಿಯ ಮೇಲಿನ ಬಡ್ಡಿಯನ್ನು" ನವೆಂಬರ್ 5, 2020ರೊಳಗೆ ಖಾತೆಗೆ ಜಮೆ ಮಾಡಲು 'ಅಗತ್ಯ ಕ್ರಮ' ತೆಗೆದುಕೊಳ್ಳಬೇಕು ಎಂದು ಬ್ಯಾಂಕ್ ಗಳು, ಹಣಕಾಸು ಮತ್ತು ನಾನ್ ಬ್ಯಾಂಕಿಂಗ್ ಸಂಸ್ಥೆಗಳಿಗೆ ಹೇಳಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸುಪ್ರೀಮ್ ಕೋರ್ಟ್ ಗೆ ತಿಳಿಸಿದೆ.

 

ಈ ಹಿಂದೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿ, ಎರಡು ಕೋಟಿ ರುಪಾಯಿ ತನಕ ವಸೂಲಿ ಮಾಡಿದ ಬಡ್ಡಿ ಮೇಲಿನ ಬಡ್ಡಿಯನ್ನು ನವೆಂಬರ್ 5, 2020ರೊಳಗೆ ಖಾತೆಗಳಿಗೆ ಜಮೆ ಮಾಡುವುದಾಗಿ ತಿಳಿಸಿತ್ತು. ಈ ಮೊತ್ತವನ್ನು ಖಾತೆಗಳಿಗೆ ಹಾಕಿದ ಮೇಲೆ ಅದನ್ನು ಕೇಂದ್ರ ಸರ್ಕಾರವು ಹಣಕಾಸು ಸಂಸ್ಥೆಗಳಿಗೆ ಹಿಂತಿರುಗಿಸುತ್ತದೆ.

Loan Moratorium: ಎರಡು ವರ್ಷದ ತನಕ ಮರುಪಾವತಿ ವಿನಾಯಿತಿ ಪಡೆಯುವುದು ಹೇಗೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಆರು ತಿಂಗಳು ಮೀರಿದ ಸಾಲ ವಿನಾಯಿತಿಯಿಂದ ಒಟ್ಟಾರೆ ಸಾಲದ ಶಿಸ್ತಿನ ಚೈತನ್ಯ ಕಳೆದುಕೊಳ್ಳುತ್ತದೆ ಎಂದು ಹೇಳಿತ್ತು. ಅಕ್ಟೋಬರ್ ಐದನೇ ತಾರೀಕಿನಂದು ಸುಪ್ರೀಂ ಕೋರ್ಟ್ ಆದೇಶ ಬಂದ ಮೇಲೆ ಈ ಅಫಿಡವಿಟ್ ಗಳನ್ನು ದಾಖಲಿಸಲಾಗಿತ್ತು.

 ನ. 5ರೊಳಗೆ ಸಾಲಗಾರರ ಖಾತೆಗೆ ಕ್ಯಾಶ್ ಬ್ಯಾಕ್ ಎಂದ ಆರ್ ಬಿಐ

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸಾಲ ಮರುಹೊಂದಾಣಿಕೆ ಬಗ್ಗೆ ಕೆ.ವಿ. ಕಾಮತ್ ಸಮಿತಿ ಶಿಫಾರಸು ಪ್ರಕಾರ ಕ್ರಮ ಕೈಗೊಳ್ಳಲಾಗಿತ್ತು. ಕೊರೊನಾ ಕಾರಣಕ್ಕೆ ಮಾರ್ಚ್ 1, 2020ರಿಂದ 31.8.2020ರ ತನಕ ಸಾಲ ಇಎಂಐ ವಿನಾಯಿತಿ ಘೋಷಿಸಲಾಗಿತ್ತು.

English summary

Loan Moratorium: Banks Told To Credit 'Interest On Interest' By November 5 To Borrowers, RBI Tells SC

RBI said Supreme Court that, loan moratorium: interest on interest credit to account holders by November 5, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X