ಮುಂಬೈ, ಜೂನ್ 6: ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮವಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಬಿಸಿ ತಟ್ಟುತ್ತಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಅನೇಕ ಬ್ಯಾಂಕುಗಳು ಗ್ರಾಹಕರಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿವೆ.
ಇದಕ್ಕೆ ಕಾರಣ, ಲಾಕ್‌ಡೌನ್ ಪರಿಣಾಮವಾಗಿ ಲಕ್ಷಾಂತರ ಜನ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇನ್ನೂ ಕೆಲವರು ಸಂಬಳ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಬೇಡಿಕೆ ಕುಸಿದಿದ್ದು, ಉತ್ಪಾದನಾ ಚಟುವಟಿಕೆ ಮೇಲೆ ಕರಿನೆರಳು ಬಿದ್ದಿದೆ. ಸಾಲ ಮರುಪಾವತಿ ವಿಷವಾಗಿ ಅನೇಕ ಬ್ಯಾಂಕುಗಳು ಇಂತಹ ಕಠಿಣ ಸಮಯದಲ್ಲಿ ಸಾಲ ನೀಡಲು ಮುಂದೆ ಬರುತ್ತಿಲ್ಲ.
ಇದಕ್ಕೆ ತಾಜಾ ಉದಾಹರಣೆಯೇ ಇಂದು ಗೃಹ ಸಾಲ ವಲಯದಲ್ಲಿ ಎದ್ದಿರುವ ಒಂದು ದೊಡ್ಡ ಸುದ್ದಿ. ಮುಂಬೈ ಸೇರಿದಂತೆ ಅನೇಕ ನಗರಗಳಲ್ಲಿ ಗೃಹ ಸಾಲ ವಿತರಿಸಲು ಹಣಕಾಸು ಸಂಸ್ಥೆಗಳು ಹಿಂದೇಟು ಹಾಕುತ್ತಿವೆ.
ಸಾಲರಿ ಸ್ಲಿಪ್‌ಗಳನ್ನು ಕೇಳುತ್ತಿದ್ದಾರೆ
ಲಾಕ್‌ಡೌನ್ ಮೊದಲು ಮಂಜೂರಾದ ಗೃಹ ಸಾಲಗಳನ್ನು ಈಗ ವಿತರಿಸಲು ಕೆಲ ಹಣಕಾಸು ಸಂಸ್ಥೆಗಳು ಮೀನಾಮೇಷ ಎಣಿಸುತ್ತಿವೆ ಎಂದು ಸೋಮವಾರ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಸಾಲಗಾರರಿಂದ ಹೊಸದಾಗಿ ಸಾಲರಿ ಸ್ಲಿಪ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಕೇಳುತ್ತಿವೆ ಎಂದು ತಿಳಿದು ಬಂದಿದೆ.
ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ
ಲಾಕ್‌ಡೌನ್ ಪರಿಣಾಮವಾಗಿ ಅನೇಕ ಕಡೆ ಲಕ್ಷಾಂತರ ಜನ ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಬ್ಯಾಂಕುಗಳು ದೀರ್ಘಾವಧಿಯ ಸಾಲಗಳು ಸೇರಿದಂತೆ ಎಲ್ಲ ಬಗೆಯ ಸಾಲಗಳನ್ನು ನೀಡಲು ಹಿಂದೇಟು ಹಾಕುತ್ತಿವೆ. ಗೃಹ ಸಾಲ ಮಂಜೂರಾದರೂ ಸಾಲಗಾರರಿಂದ ಉದ್ಯೋಗ ಖಾತ್ರಿಯ ಬಗ್ಗೆ ಅವಶ್ಯಕ ದಾಖಲೆಗಳನ್ನು ಕೇಳುತ್ತಿದ್ದಾರೆ. ಮಂಜೂರಾದ ಸಾಲಗಳೆಲ್ಲವನ್ನೂ ಮರುಮೌಲ್ಯಮಾಪನ ಮಾಡುತ್ತಿವೆ.
ಗೃಹ ಸಾಲದ ಬೆಳವಣಿಗೆ 0.6% ರಷ್ಟು ಕುಸಿದಿದೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಮಾರ್ಚ್ 27 ರಿಂದ ಏಪ್ರಿಲ್ 24 ರವರೆಗೆ ಗೃಹ ಸಾಲದ ಬೆಳವಣಿಗೆ 0.6% ರಷ್ಟು ಕುಸಿದಿದೆ ಎಂದು ತೋರಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಆಫ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಬಿಡುಗಡೆ ಮಾಡಿದ ಅಂಕಿಅಂಶವು, ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ನಿರುದ್ಯೋಗ ದರವು 27.1% ಕ್ಕೆ ಏರಿದೆ. ಏಪ್ರಿಲ್‌ನಲ್ಲಿ ಸುಮಾರು 1.2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಅನೇಕ ಬ್ಯಾಂಕುಗಳು ಎಲ್ಲ ಬಗೆಯ ಸಾಲ ನೀಡಲು ಹಿಂದೇಟು ಹಾಕುತ್ತಿವೆ.
ಮರುಪಾವತಿ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ
ಐಡಿಬಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಜೋರ್ಟಿ ಎಂ ಚಾಕೊ ಅವರು ಹೇಳುವ ಪ್ರಕಾರ, ಸಾಲಗಾರರ ಮರುಪಾವತಿ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಬ್ಯಾಂಕ್‌ಗಳು ಗೃಹ ಸಾಲ ವಿತರಣೆಯನ್ನು ಮೌಲ್ಯಮಾಪನ ಮಾಡುತ್ತಿವೆ. ಸಾಲಕ್ಕೆ ಸಂಬಂಧಿಸಿದ ಅಪಾಯಗಳು ಕೋವಿಡ್ -19 ಕಾರಣದಿಂದಾಗಿ ಸಾಕಷ್ಟು ಬದಲಾವಣೆಗೆ ಒಳಗಾಗಿದೆ ಮತ್ತು ಅಂತಹ ಅಪಾಯಗಳನ್ನು ನೋಡಿಕೊಳ್ಳಲು ನಾವು ಕಾನೂನುಗಳನ್ನು ಬಿಗಿಗೊಳಿಸಿದ್ದೇವೆ ಎನ್ನುತ್ತಾರೆ.


Click it and Unblock the Notifications