ಇಂದು ಖಾಸಗಿ ವಲಯದಲ್ಲಿ ಕೆಲಸಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ ದೊಡ್ದ ಖಾಸಗಿ ಸಂಸ್ಥೆಯಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ನಿಮಗೆ ಖಂಡಿತವಾಗಿಯೂ ಪಿ.ಎಫ್ ಖಾತೆಯನ್ನು ಇದ್ದೇ ಇರುತ್ತದೆ. ಈ ಪಿ.ಎಫ್ ಖಾತೆಗೆ ಸಂಬಂಧಿಸಿದಂತೆ, ಸರ್ಕಾರವು ಪ್ರತಿಯೊಬ್ಬ ಉದ್ಯೋಗಿಗೂ ಯುಎಎನ್ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನುನೀಡುತ್ತದೆ. ಈ UAN ಸಂಖ್ಯೆಯು ನಿಮ್ಮ PF ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ.
ಸಾರ್ವತ್ರಿಕ ಖಾತೆ ಸಂಖ್ಯೆ (UAN) ಎಂದರೇನು?
ಆರಂಭದಲ್ಲಿ, ಯಾವುದೇ ವ್ಯಕ್ತಿಗಳು ಯಾವುದೇ ಸಂಸ್ಥೆಯಲ್ಲಿ ಹೊಸ ಉದ್ಯೋಗವನ್ನು ಪ್ರಾರಂಭಿಸಿದಾಗ, ಅವರು ಹೊಸ ಭವಿಷ್ಯ ನಿಧಿ ಖಾತೆ ಸಂಖ್ಯೆಯನ್ನು ಪಡೆಯುತ್ತಾರೆ. ಆದರೆ ಒಬ್ಬ ಉದ್ಯೋಗಿ ತನ್ನ ಪಿಎಫ್ ಕೊಡುಗೆಗಳನ್ನು ನಿರ್ವಹಿಸಲು ಇದು ಸಾಕಾಗುವುದಿಲ್ಲ. ಉದ್ಯೋಗಿ ತನ್ನ ಎಲ್ಲಾ ಉದ್ಯೋಗಿ ಭವಿಷ್ಯ ನಿಧಿಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಇಡೀ ವಿಧಾನವು ತುಂಬಾ ಜಟಿಲವಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯು ಯುಎಎನ್ ಅನ್ನು ಪರಿಚಯಿಸುತ್ತಿದೆ.

ಯುನಿವರ್ಸಲ್ ಅಕೌಂಟ್ ನಂಬರ್ (UAN) ಎಂಬುದು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಯಿಂದ ಪ್ರತಿ ಉದ್ಯೋಗಿಗೂ ನೀಡಲಾಗುತ್ತದೆ. ಇದು ಉದ್ಯೋಗದಾತರಿಂದ ಉದ್ಯೋಗಿಗೆ ನೀಡಲಾಗುವ ಒಂದು ಶಾಶ್ವತವಾದ ಗುರುತಿನ ಸಂಖ್ಯೆಯಾಗಿದೆ. ಉದ್ಯೋಗ ಬದಲಾದರೂ ಈ ಸಂಖ್ಯೆ ಬದಲಾಗುವುದಿಲ್ಲ. ಈ ಸಂಖ್ಯೆಯು ಪ್ರತಿಯೊಬ್ಬ ಉದ್ಯೋಗಿಯ ಭವಿಷ್ಯ ನಿಧಿ (PF) ಖಾತೆಯನ್ನು ನಿರ್ವಹಿಸಲು ಅತ್ಯಂತ ಅವಶ್ಯಕ. ಉದ್ಯೋಗಿಗಳು ತಮ್ಮ ಪಿ.ಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು, ಹಣವನ್ನು ಹಿಂಪಡೆಯಲು ಮತ್ತು ಇತರ ಸಂಬಂಧಿತ ಸೇವೆಗಳನ್ನು ಪಡೆಯಲು ಯುಎಎನ್ ಅನ್ನು ಬಳಸಬಹುದು. ಉದ್ಯೋಗಿಯು ಕೆಲಸವನ್ನು ಬದಲಾಯಿಸಿದಾಗ, ಅವರಿಗೆ ಹೊಸ ಸದಸ್ಯ ID ನೀಡಲಾಗುತ್ತದೆ, ಆದರೆ ಅವರಯುಎಎನ್ ಒಂದೇ ಆಗಿರುತ್ತದೆ. ಆದ್ದರಿಂದ, ಯುಎಎನ್ ಪ್ರಸ್ತುತ ಮತ್ತು ಹಿಂದಿನ ಉದ್ಯೋಗದಾತರಿಂದ ನೀಡಲಾದ ಎಲ್ಲಾ EPF ಕೊಡುಗೆಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದು ಉದ್ಯೋಗಿಗಳಿಗೆ ತಮ್ಮ ಪಿ.ಎಫ್ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ. ಪ್ರಸ್ತುತ ಅಥವಾ ಹಿಂದಿನ ಉದ್ಯೋಗದಾತರಾಗಿರಲಿ, ಒಟ್ಟು EPF ಕೊಡುಗೆಗಳನ್ನು ಟ್ರ್ಯಾಕ್ ಮಾಡಲು ಇದು ಕಡ್ಡಾಯವಾಗಿದೆ.
ಹೀಗಾಗಿ ಯುನಿವರ್ಸಲ್ ಅಕೌಂಟ್ ನಂಬರ್ ನಿಮ್ಮ ಭವಿಷ್ಯ ನಿಧಿ ಖಾತೆಗೆ ಪ್ರವೇಶಿಸಲು ಕೀಲಿಕೈಯಂತಿದೆ. ಒಂದು ವೇಳೆ ಈ UAN ಸಂಖ್ಯೆ ನಿಮ್ಮ ನೆನಪಿನಲ್ಲಿರದಿದ್ದರೆ, ನಿಮ್ಮ PF ಖಾತೆಯ ವ್ಯವಹಾರಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳಬಹುದು.
ಸರಳವಾಗಿ ಹೇಳುವುದಾದರೆ, UAN ಎಂಬುದು ನಿಮ್ಮ PF ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಹೊಂದಿರುವ ಒಂದು ಗುರುತಿನ ಚೀಟಿಯಂತಿದೆ. ಇದನ್ನು ಮರೆತರೆ ನಿಮ್ಮ PF ಖಾತೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನೀವು ನಿಮ್ಮ ಯುಎಎನ್ ನಂಬರ್ ಕಳೆದುಕೊಂಡರೆ ಮುಂದೇನು ಮಾಡುತ್ತೀರಿ?
ಯುಎಎನ್ ನಂಬರ್ ಮರುಪಡೆಯುವುದು ಹೇಗೆ?
ನಿಮ್ಮ ಯುಎಎನ್ ನಂಬರ್ ಕಳೆದುಕೊಂಡಿದ್ದರೆ ಅಥವಾ ಮರೆತುಹೋಗಿದ್ದರೆ ನಿಮ್ಮ UAN ಸಂಖ್ಯೆಯನ್ನು ಮರುಪಡೆಯಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಸರಳವಾದ ವಿಧಾನವೊಂದು ಇಲ್ಲಿ ನೀಡಲಾಗಿದೆ. ಇದನ್ನು ಅನುಸರಿಸುವ ಮೂಲಕ ನೀವು ನಿಮ್ಮ ಯುಎಎನ್ ಸಂಖ್ಯೆಯನ್ನು ಮರಳಿ ಪಡೆದುಕೊಳ್ಳಬಹುದು.
- ಮೊದಲು ನೀವು EPFO ನ ಅಧಿಕೃತ ವೆಬ್‌ಸೈಟ್‌ಗೆ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಬೇಕು .
- ಈಗ ನೀವು ಬಲಭಾಗದಲ್ಲಿ ಗೋಚರಿಸುವ Important Links ಗಳಿಗೆ ಹೋಗಿ "Know your UAN" ಮೇಲೆ ಕ್ಲಿಕ್ ಮಾಡಬೇಕು.
- ಈಗ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು OTP ವಿನಂತಿಯ ಮೇಲೆ ಕ್ಲಿಕ್ ಮಾಡಬೇಕು.
- ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿದ ನಂತರ, Validate OTP ಮೇಲೆ ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಪೂರ್ಣ ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ ಅಥವಾ ಪ್ಯಾನ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು ಮತ್ತು 'Show My UAN' ಮೇಲೆ ಕ್ಲಿಕ್ ಮಾಡಿ.
- ನೀವು 'ಶೋ ಮೈ ಯುಎಎನ್' ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಯುಎಎನ್ ಸಂಖ್ಯೆ ಪರದೆಯ ಮೇಲೆ ಕಾಣಿಸುತ್ತದೆ.
- ಈಗ ನೀವು ನಿಮ್ಮ UAN ಅನ್ನು ಇಲ್ಲಿಂದ ಪಡೆಯಬಹುದು ಮತ್ತು ಅದನ್ನು save ಮಾಡಿ ಇಟ್ಟುಕೊಳ್ಳಬಹುದು


Click it and Unblock the Notifications