LPG Cylinder Price: ಜನರ ಜೇಬಿಗೆ ಮತ್ತೆ ಕತ್ತರಿ, ಎಲ್‌ಪಿಜಿ ಇನ್ನಷ್ಟು ದುಬಾರಿ!

ಈಗಾಗಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ತೀವ್ರ ಮಟ್ಟಕ್ಕೆ ಹೆಚ್ಚಾಗಿದೆ. ಈ ನಡುವೆ ಇಂದು (ಜುಲೈ 6) ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು 1,053 ರೂಪಾಯಿ ಆಗಿದೆ.

ಇನ್ನು ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯು ರೂಪಾಯಿ 1,052.50ಕ್ಕೆ ಏರಿದ್ದರೆ, ಕೋಲ್ಕತ್ತಾದಲ್ಲಿ ರೂಪಾಯಿ 1,079ಕ್ಕೆ ತಲುಪಿದೆ. ಇನ್ನು ಚೆನ್ನೈನಲ್ಲಿ 1,068.50 ಆಗಿದೆ. ಬೆಂಗಳೂರಿನಲ್ಲಿ 1,062.00 ರೂಪಾಯಿ ಆಗಿದೆ.

ಕಳೆದ ಬಾರಿಗೆ ಮೇ ತಿಂಗಳಲ್ಲಿ ಎರಡು ಬಾರಿ ಎಲ್‌ಪಿಜಿ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ಮೇ ಆರಂಭದಲ್ಲಿ ಸಿಲಿಂಡರ್‌ನ ಬೆಲೆಯನ್ನು 50 ರೂಪಾಯಿಗಳಷ್ಟು ಹೆಚ್ಚಳ ಮಾಡಲಾಗಿದೆ. ಆ ಬಳಿಕ ಅದೇ ತಿಂಗಳ ಮಧ್ಯದಲ್ಲಿ 14 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 3.50 ರೂಪಾಯಿ ಹೆಚ್ಚಳ ಮಾಡಿದೆ.

 Breaking: ಜನರ ಜೇಬಿಗೆ ಮತ್ತೆ ಕತ್ತರಿ, ಎಲ್‌ಪಿಜಿ ಇನ್ನಷ್ಟು ದುಬಾರಿ

ಎಲ್‌ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿ

ಮೇ ತಿಂಗಳಿನಲ್ಲಿ ಎರಡು ಬಾರಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಮೇಲಿನ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು, ಈ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್‌ಪಿಜಿ ಬಳಕೆದಾರರಿಗೆ ಸಿಹಿಸುದ್ದಿಯನ್ನು ನೀಡಿದ್ದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದವರಿಗೆ ಎಲ್‌ಪಿಜಿ ಸಿಲಿಂಡರ್ ಮೇಲೆ ಇನ್ನೂರು ರೂಪಾಯಿ ಸಬ್ಸಿಡಿಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಬಳಿಕ ಎಲ್‌ಪಿಜಿ ಸಿಲಿಂಡರ್‌ ಸಬ್ಸಿಡಿ ಸೀಮಿತಿ ಫಲಾನುಭವಿಗಳಿಗೆ ಮಾತ್ರ ಲಭ್ಯವಾಗಲಿದೆ ಎಂದು ತೈಲ ಕಾರ್ಯದರ್ಶಿ ಪಂಕಜ್ ಜೈನ್ ತಿಳಿಸಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+