ಕಳೆದ ಐದು ತಿಂಗಳಲ್ಲಿ ಸಬ್ಸಿಡಿ ಅಡುಗೆ ಅನಿಲ (ಎಲ್‌ಪಿಜಿ) ಬೆಲೆಯನ್ನು ಸಿಲಿಂಡರ್‌ಗೆ 35.55 ರುಪಾಯಿಯಷ್ಟು ಹೆಚ್ಚಿಸಲಾಗಿದೆ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ತಿಳಿಸಿದ್ದಾರೆ.
ಸರ್ಕಾರದ ನೀತಿಯ ಪ್ರಕಾರ, ದೇಶಾದ್ಯಂತ ಎಲ್‌ಪಿಜಿ ಮಾರುಕಟ್ಟೆ ಬೆಲೆಗೆ ಮಾತ್ರ ಲಭ್ಯವಿದೆ. ಆದರೂ ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳನ್ನು ಖರೀದಿಸಲು ಕುಟುಂಬಗಳಿಗೆ ಅರ್ಹತೆ ಇದೆ. ಸರ್ಕಾರವು ಸಬ್ಸಿಡಿ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಈ ಮೂಲಕ ಫಲಾನುಭವಿಗಳು ಮಾರುಕಟ್ಟೆ ಬೆಲೆಗೆ LPG ಖರೀದಿಸಲು ಹಣವನ್ನು ಬಳಸುತ್ತಾರೆ.

ಅಕ್ಟೋಬರ್‌ನಿಂದ ಸಬ್ಸಿಡಿ ಪಡೆದ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್‌ಗೆ 35.55 ರುಪಾಯಿ ಏರಿಕೆಯಾಗಿದೆ. ರಾಜ್ಯಸಭೆಯ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿರುವ ಪ್ರಧಾನ್, ದೆಹಲಿಯಲ್ಲಿ ದೇಶೀಯ ಸಬ್ಸಿಡಿ ಎಲ್‌ಪಿಜಿಯನ್ನು ಅಕ್ಟೋಬರ್ 1, 2019 ರಂದು ಪ್ರತಿ ಸಿಲಿಂಡರ್‌ಗೆ 538.95 ರುಪಾಯಿ ಎಂದು ನಿಗದಿಪಡಿಸಲಾಗಿದೆ ಮತ್ತು ಈ ತಿಂಗಳು ಇದರ ಬೆಲೆ 574.50 ರುಪಾಯಿ ಆಗಿದೆ ಎಂದು ಹೇಳಿದ್ದಾರೆ. ಆದರೆ ಬೆಲೆ ಏರಿಕೆಗೆ ಅವರು ಯಾವುದೇ ಕಾರಣವನ್ನು ನೀಡಿಲ್ಲ.
ಬೆಂಚ್‌ಮಾರ್ಕ್ ಅಂತರರಾಷ್ಟ್ರೀಯ ದರಗಳ ಆಧಾರದ ಮೇಲೆ ಸಬ್ಸಿಡಿ ರಹಿತ ಅಥವಾ ಮಾರುಕಟ್ಟೆ ಬೆಲೆಯ ಎಲ್‌ಪಿಜಿ ತಿಂಗಳಿಂದ ತಿಂಗಳಿಗೆ ಬದಲಾಗುತ್ತದೆಯಾದರೂ, ಸಬ್ಸಿಡಿ ಪಡೆದ ಎಲ್‌ಪಿಜಿ ಬೆಲೆಗಳನ್ನು ಪ್ರತಿ ತಿಂಗಳು ಸಿಲಿಂಡರ್‌ಗೆ 4 ರುಪಾಯಿ ಹಾಗೂ ತೆರಿಗೆಯನ್ನು ಸೇರಿಸಿ ಹೆಚ್ಚಿಸಲಾಗುತ್ತದೆ.
ಆದರೆ ಸಬ್ಸಿಡಿ ಪಡೆದ ಎಲ್‌ಪಿಜಿ ಬೆಲೆಗಳನ್ನು ಕಂಪನಿಗಳು ಇನ್ನು ಮುಂದೆ ಪ್ರಕಟಿಸುವುದಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ಅನಿಲ ಬೆಲೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಿದ್ದಾರೆಯೇ ಎಂಬ ಪ್ರಶ್ನೆಗೆ, ಸಬ್ಸಿಡಿ ರಹಿತ ದೇಶೀಯ ಎಲ್‌ಪಿಜಿಯ ಬೆಲೆ ತೈಲ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ ಎಂದು ಹೇಳಿದರು.
ಕೇಳಲಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಪ್ರಧಾನ್, ಸಬ್ಸಿಡಿ ರಹಿತ LPG ಸಿಲಿಂಡರ್ ಬೆಲೆ 805.50 ಎಂದು ಹೇಳಿದರು. ಮನೆಯ ಗ್ರಾಹಕರು 14.2 ಕೆಜಿ ಸಿಲಿಂಡರ್‌ಗೆ 231 ಸಹಾಯಧನವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಆದ್ದರಿಂದ, ಮನೆಯೊಂದು ಪ್ರತಿ ಸಿಲಿಂಡರ್‌ಗೆ 805.50 ರುಪಾಯಿ ದರದಲ್ಲಿ ಎಲ್‌ಪಿಜಿಯನ್ನು ಖರೀದಿಸುತ್ತದೆ. ಅವನು ಅಥವಾ ಅವಳು ಸರ್ಕಾರದ ಸಬ್ಸಿಡಿಯಾಗಿ ಪಡೆಯುವ 231 ಅನ್ನು ಲೆಕ್ಕ ಹಾಕಿದ ನಂತರ, ಪಾವತಿಯು 574.50 ರುಪಾಯಿ ಆಗಿದೆ.


Click it and Unblock the Notifications