ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ತಲೆಕೆಡಿಸಿಕೊಂಡಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯೂ ಹೆಚ್ಚಾಗಿದೆ.
ಸರ್ಕಾರಿ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆ 25.50 ರೂ.ಗೆ ಹೆಚ್ಚಿಸಿವೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆ 84 ರೂ. ಏರಿಕೆಯಾಗಿದೆ . ಈ ಮೂಲಕ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 834.50 ರೂ.

ಈ ಹೊಸ ದರಗಳು ಇಂದಿನಿಂದ ಅಂದರೆ ಜುಲೈ 1 ರಿಂದ ಅನ್ವಯವಾಗುತ್ತವೆ. ದೇಶದ ಅತಿದೊಡ್ಡ ಎಲ್‌ಪಿಜಿ ಕಂಪನಿ ಇಂಡೇನ್‌ನ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಬೆಲೆಗಳ ಪ್ರಕಾರ, ಜುಲೈ 1 ರಂದು ದೆಹಲಿಯಲ್ಲಿ 14.2 ಕೆಜಿ ದೇಶೀಯ ಎಲ್‌ಪಿಜಿಯ ಬೆಲೆ 834.5 ರೂ.ಗೆ ಏರಿದೆ. ಆದರೆ ಜೂನ್ 1 ರಂದು ಅದರ ಬೆಲೆ 809.00 ರೂ. ಆಗಿತ್ತು.
ಅದೇ ಸಮಯದಲ್ಲಿ, ವಾಣಿಜ್ಯ ಅನಿಲದ ಬೆಲೆ 76 ರೂ. ಹೆಚ್ಚಾಗಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1550 ರೂ.ಗೆ ಏರಿದೆ. ಆದರೆ ಜೂನ್ 1 ರಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಸಿಲಿಂಡರ್‌ಗೆ 1473.50 ರೂಪಾಯಿ ಬೆಲೆ ಇತ್ತು. ಈ ಮೊದಲು ತೈಲ ಕಂಪನಿಗಳು ಬೆಲೆಯನ್ನು 10 ರೂ. ಇಳಿಸಿದ್ದವು. ಅದೇ ಸಮಯದಲ್ಲಿ, ಗ್ಯಾಸ್ ಕಂಪನಿಗಳು ವಾಣಿಜ್ಯ ಬಳಕೆಯಲ್ಲಿ ಬರುವ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 122 ರೂ. ಕಡಿತಗೊಳಿಸಿದ್ದವು.
ದೇಶದ ಪ್ರಮುಖ ನಗರಗಳಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ:
ದೆಹಲಿ: 834.50
ಕೋಲ್ಕತ್ತಾ: 861.00
ಮುಂಬೈ: 834.50
ಚೆನ್ನೈ: 850.50
ಗುರುಗಾವ್: 843.50
ನೋಯ್ಡಾ: 832.50
ಬೆಂಗಳೂರು: 837.50
ಭುವನೇಶ್ವರ: 861.00
ಚಂಡೀಗಡ: 844.00
ಹೈದ್ರಾಬಾದ್: 887.00
ಜೈಪುರ: 813.00


Click it and Unblock the Notifications