ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಸರ್ಕಾರಿ ತೈಲ ಮಾರಾಟ ಕಂಪನಿಗಳು ಬುಧವಾರ(ಫೆಬ್ರವರಿ 12) ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿದ್ದು, ಇದು ಹಲವು ತಿಂಗಳುಗಳಲ್ಲಿ ಆರನೇ ಹೆಚ್ಚಳವಾಗಿದೆ.

ಭಾರತದಾದ್ಯಂತ ಪ್ರತಿದಿನ 30 ಲಕ್ಷ ಇಂಡೇನ್ ಸಿಲಿಂಡರ್‌ಗಳನ್ನು ಪೂರೈಸುವ ಇಂಡಿಯನ್ ಆಯಿಲ್ ವೆಬ್‌ಸೈಟ್‌ನ ಪ್ರಕಾರ, 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗೆ ಈಗ ನವದೆಹಲಿಯಲ್ಲಿ 858.5 ರುಪಾಯಿ ಬೆಲೆಯಿದೆ. 2020 ರ ಜನವರಿ 01 ರಂದು ಕೊನೆಯ ಪರಿಷ್ಕರಣೆಯ ಬಳಿಕ 144.5 ರುಪಾಯಿಯಷ್ಟು ಹೆಚ್ಚಳವಾಗಿದೆ. ಕೊಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 149 ರುಪಾಯಿ ಹೆಚ್ಚಾಗಿದ್ದು 896 ರುಪಾಯಿಗೆ ತಲುಪಿದೆ. ಮುಂಬೈಯಲ್ಲಿ 145 ಹೆಚ್ಚಳವಾಗಿ 829.5 ರುಪಾಯಿ ಮತ್ತು ಚೆನ್ನೈನಲ್ಲಿ 147 ಏರಿಕೆಯಾಗಿ 881 ರುಪಾಯಿಗೆ ತಲುಪಿದೆ.

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮುಖ್ಯವಾಗಿ ಎರಡು ಅಂಶಗಳ ಮೇಲೆ ಅವಲಂಬಿತವಾಗಿದೆ . ಅಂತರರಾಷ್ಟ್ರೀಯ ಮಾನದಂಡದ ಎಲ್‌ಪಿಜಿಯ ದರ ಮತ್ತು ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ. ಇದರ ಆಧಾರದ ಮೇಲೆ ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತಾರೆ.

ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ ಸರ್ಕಾರವು ಪ್ರತಿ ಮನೆಗೆ 12 ಸಿಲಿಂಡರ್‌ಗಳನ್ನು ನೇರ ಸಬ್ಸಿಡಿ ನೀಡುವ ಮೂಲಕ ಸಬ್ಸಿಡಿ ನೀಡುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+