'ಸಿದ್ದು' ಆಯ್ತು.. ಈಗ 'ಮೋದಿ' ಸರದಿ..! ಹೌದು ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ಇನ್ನೂ ಹಾಗೇ ಇದೆ. ಇದರ ನಡುವೆ ಮೋದಿ ಸರ್ಕಾರ ಕೂಡ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ.
ಹೌದು, ಇತ್ತೀಚಿಗಷ್ಟೇ ಅಡುಗೆ ಅನಿಲ ಬೆಲೆಯನ್ನು 41 ಇಳಿಸಿದ್ದು,ಇಂದು 50 ರೂಪಾಯಿ ಏರಿಕೆಯಾಗುವ ಮೂಲಕ ದೇಶದ ಜನತೆಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.

ಈ ಕುರಿತು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಅಡಿಗೆ ಅನಿಲ 50 ರೂನಷ್ಟು ಏರಿಕೆ ಮಾಡಿದೆ. ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ವಾರವಷ್ಟೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ (Domestic LPG cylinder) ಬೆಲೆಯನ್ನೂ ಕೂಡ ಏರಿಕೆ ಮಾಡಿದೆ. ಮಾಧ್ಯಮ ವರ್ಗದ ಮೇಲೆ ಬೆಲೆ ಏರಿಕೆ ತಟ್ಟಲಿದೆ.
ಇಂದು ಎಲ್‌ಪಿಜಿ 14.2 ಕಿಲೋ ಗ್ಯಾಸ್ ಸಿಲಿಂಡರ್‌ಗೆ 50 ರೂನಷ್ಟು ಹೆಚ್ಚಳ ಮಾಡಿ ಮಾಧ್ಯಮ ವರ್ಗದವರೆಗೆ ಗಾಯದ ಬೆಲೆ ಬೆಲೆ ಏರಿಕೆ ಬರೆಯನ್ನು ಎಳೆದಿದೆ. 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಸಾಮಾನ್ಯ ಬಳಕೆದಾರರಿಗೆ 803 ರೂ ನಿಂದ 853ಕ್ಕೆ ಮತ್ತು ಉಜ್ವಲ ಯೋಜನೆಯಡಿ ಬಳಕೆದಾರರಿಗೆ ಪ್ರತಿ ಸಿಲಿಂಡರ್‌ಗೆ 503 ರೂ.ಗಳಿಂದ 553 ಕ್ಕೆ ಏರಿಕೆಯನ್ನು ಮಾಡಿದೆ. ನಾಳೆಯಿಂದಲ್ಲೇ ಜಾರಿಗೆ ಬರುತ್ತದೆ.
ಎಲ್‌ಪಿಜಿ ಸಿಲಿಂಡರ್‌ನ ಪ್ರತಿ ಸಿಲಿಂಡರ್ ಬೆಲೆ 50 ರಷ್ಟು ಹೆಚ್ಚಾಗಲಿದೆ. 500 ರಿಂದ ₹ 550 ಕ್ಕೆ (ಪಿಎಂಯುವೈ ಫಲಾನುಭವಿಗಳಿಗೆ) ಮತ್ತು ಇತರರಿಗೆ 803 ರಿಂದ ₹853 ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿಯನ್ನು ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ ಬಳಿಕ ಇದೀಗ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದೆ.
ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಇದು ನಿಮ್ಮ ಜೇಬಿಗೆ ಮತ್ತಷ್ಟು ಬರೆ ಬೀಳುವ ಸಾಧ್ಯತೆಯಿದೆ. ಏಕೆಂದರೆ ಅಬಕಾರಿ ಸುಂಕವು ಇಂಧನ ಬೆಲೆಗಳನ್ನು ರೂಪಿಸುವಲ್ಲಿ ಒಂದು ಅಂಶವಾಗಿದ್ದು, ಇದು ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಪಾವತಿಸಬೇಕಾಗುತ್ತದೆ. ಅಬಕಾರಿ ಸುಂಕದ ಹೆಚ್ಚಳವು ಅಂತಿಮವಾಗಿ ಇಂಧನ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗುತ್ತದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತೀಕಾರದ ಸುಂಕದ ನೀತಿಯಿಂದ ಜಾಗತಿಕ ಮಟ್ಟದಲ್ಲಿ ವ್ಯಾಪಾರ ಯುದ್ಧಗಳು ಆರಂಭವಾಗಿರುವ ಸಮಯದಲ್ಲಿ ಕೇಂದ್ರ ಸರ್ಕಾರವು ಈ ತೀರ್ಮಾನ ತೆಗೆದುಕೊಂಡಿದೆ.ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅಂಬಕಾರಿ ಸುಂಕದ ಬಗ್ಗೆ ಸ್ಪಷ್ಟನೆ ನೀಡಿದೆ. ಇದರಿಂದ ಗ್ರಾಹಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರದ ಪೆಟ್ರೋಲ್ ಡೀಸೆಲ್ ಅಬಕಾರಿ ಸುಂಕದಲ್ಲಿ ಹೆಚ್ಚಳದ ಅಧಿ ಸೂಚನೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಚಿಲ್ಲರೆ ಮಾರುಕಟ್ಟೆಯಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳು ಮಾಹಿತಿ ನೀಡಿವೆ ಎಂದು ಸಚಿವಾಲಯ ತಿಳಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವವರಿಗೆ ಬೆಲೆ ಏರಿಕೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಎರಡು ರೂ ಏರಿಕೆ ಮಾಡಲಾಗಿರುವ ಸುದ್ದಿ ಬಂದ ಬೆನ್ನಲ್ಲೇ ಜನಸಾಮಾನ್ಯರಿಗೆ ಎಲ್‌ಪಿಜಿ ಶಾಕ್ ಕೂಡ ಎದುರಾಗಿದೆ.


Click it and Unblock the Notifications