ಕಡ್ಡಾಯ! ಎಲ್‌ಪಿಜಿ ಸಬ್ಸಿಡಿ ಪಡೆಯಲು ಹೀಗೆ ಮಾಡಲೇಬೇಕು; ಇದು ಸರ್ಕಾರದ ಆದೇಶ

ನೀವು ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದೀರಾ? ಎಲ್ಲರಂತೆ ನಿಮಗೂ ಕೂಡ LPG ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬರುತ್ತಿಲ್ಲವೇ? ಹಾಗಿದ್ರೆ, ನೀವು ಈ ಕೆಲವು ತಪ್ಪುಗಳನ್ನು ಮಾಡಿರುತ್ತೀರಿ. ಹೌದು, ಎಲ್‌ಪಿಜಿ ಗ್ಯಾಸ್ ಇರುವವರಿಗೆ ಸರಕಾರ ಆರ್ಥಿಕ ಸಹಾಯದ ರೂಪದಲ್ಲಿ ಸಬ್ಸಿಡಿ ನೀಡುತ್ತದೆ. ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದ್ರೆ ಅದಕ್ಕೆ ಕೆಲವೊಂದು ಕಾರಣಗಳು ಇರುತ್ತವೆ. ಸರ್ಕಾರ ಸಬ್ಸಿಡಿ ವಿಚಾರದಲ್ಲಿ ಹೊಸ ನಿಯಮಗಳನ್ನು ಕಡ್ಡಾಯಗೊಳಿಸಿದೆ. ಹಾಗಿದ್ರೆ, ಆ ನಿಯಮ ಯಾವುದು? ಇದಕ್ಕೆ ಏನು ಮಾಡಬೇಕು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ರಾಜ್ಯ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ ಮೇಲೆ ಫಲಾನುಭವಿಗಳಿಗೆ ಆರ್ಥಿಕ ಸಹಾಯವನ್ನು ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಿದೆ.

LPG: ಸಬ್ಸಿಡಿ ಪಡೆಯಲು ಹೀಗೆ ಮಾಡಿ.. ಇದು ಸರ್ಕಾರದ ಆದೇಶ

ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕು ಎಂದರೆ ಹೀಗೆ ಮಾಡಬೇಕು. ಕಡಿಮೆ ಆದಾಯದ ಕುಟುಂಬಗಳಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್ ನೀಡಲಾಗುತ್ತದೆ. ರೀಫಿಲ್‌ಗಳ ವೆಚ್ಚವನ್ನು ಸರಿದೂಗಿಸಲು ಕುಟುಂಬಕ್ಕೆ ತಿಂಗಳಿಗೆ 27 ರೂ. ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ಬಯಸುವ ಕುಟುಂಬವು, ನಿಮ್ಮ ಆಧಾರ್‌ ಕಾರ್ಡ್‌ನ ದಾಖಲೆಗಳನ್ನು ಒದಗಿಸಬೇಕು. ಅಥವಾ ಆಧಾರ್ ನಂಬರ್‌ ಲಿಂಕ್ ಮಾಡಬೇಕು.

ಆಧಾರ್ ಸಂಖ್ಯೆಯನ್ನು ಹೊಂದಿಲ್ಲದ ವ್ಯಕ್ತಿಗಳು ಏನು ಮಾಡಬೇಕು?

ಆಧಾರ್ ಸಂಖ್ಯೆಯನ್ನು ಹೊಂದಿಲ್ಲದ ವ್ಯಕ್ತಿಗಳು ಈ ಯೋಜನೆಗೆ ನೋಂದಾಯಿಸುವ ಮೊದಲು ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಯಾವುದೇ ಯೋಜನೆಯನ್ನು ಪಡೆಯಲು ಆಧಾರ್ ಸಂಖ್ಯೆಯಂತೂ ಬೇಕೇ ಬೇಕು.ಎಲ್ಲರೂ ಅಧಾರ್ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.

ಆಧಾರ್ ಪಡೆಯುವ ಪ್ರಕ್ರಿಯೆಯಲ್ಲಿ ಇದ್ದರೆ ಏನು ಮಾಡುವುದು?

ಆಧಾರ್ ಪಡೆಯುವ ಪ್ರಕ್ರಿಯೆಯಲ್ಲಿರುವ ವ್ಯಕ್ತಿಗಳಿಗೆ, ಫೋಟೋ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಎಂಜಿಎನ್‌ಆರ್‌ಇಜಿಎ ಕಾರ್ಡ್, ಕಿಸಾನ್ ಫೋಟೋ ಪಾಸ್‌ಬುಕ್ ಅಥವಾ ಒಂದು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಪಾಸ್‌ಬುಕ್ ಅನ್ನು ಅರ್ಜಿಯಲ್ಲಿ ಸಲ್ಲಿಸಲು ಸರ್ಕಾರವು ತಾತ್ಕಾಲಿಕವಾಗಿ ಅನುಮತಿ ನೀಡಿದೆ.

ಬಯೋಮೆಟ್ರಿಕ್ ಸಮಸ್ಸೆಗಳಿಗೆ ಪರಿಹಾರ

ಡ್ರೈವಿಂಗ್ ಲೈಸೆನ್ಸ್ಡಿಟೇಲ್ ವಿಫಲವಾದಗ ಬಯೋಮೆಟ್ರಿಕ್ ದೃಢೀಕರಣದಿಂದಾಗಿ ಬರುವ ಸವಾಲುಗಳನ್ನು ಪರಿಹರಿಸಲು ಸರ್ಕಾರವು ಕೆಲವು ಮಾರ್ಗವನ್ನು ರೂಪಿಸಿದೆ. ಕಳಪೆ ಫಿಂಗರ್‌ಪ್ರಿಂಟ್ ಗುಣಮಟ್ಟವನ್ನು ಹೊಂದಿರುವ ಫಲಾನುಭವಿಗಳು ಇಂಟಿಗ್ರೇಟೆಡ್ ರಿಸ್ಕ್ ಇನ್ಫರ್ಮೇಷನ್ ಸಿಸ್ಟಮ್ (IRIS) ಸ್ಕ್ಯಾನ್ ಅಥವಾ ಮುಖದ ದೃಢೀಕರಣವನ್ನು ಬಳಸಬಹುದು. ಇದು ಸಹ ವಿಫಲವಾದರೆ, ಸಾಧ್ಯವಿರುವ ಆಧಾರ್ ಒಟಿಪಿ ಅಥವಾ ಸಮಯ ಆಧಾರಿತ ಪಾಸ್‌ವರ್ಡ್ (TOTP) ಅನ್ನು ಬಳಸಲಾಗುತ್ತದೆ. ಇವೆಲ್ಲವೂ ವಿಫಲವಾದ ಸಂದರ್ಭಗಳಲ್ಲಿ, ಫಲಾನುಭವಿಗಳು ತಮ್ಮ ಭೌತಿಕ ಆಧಾರ್ ಪತ್ರವನ್ನು ಬಳಸಬಹುದು, ಅದನ್ನು ತ್ವರಿತ ಪ್ರತಿಕ್ರಿಯೆ ಕೋಡ್ ಮೂಲಕ ಪರಿಶೀಲಿಸಬಹುದು.

ಗ್ಯಾಸ್ಗೆ ಆಧಾರ್ ಲಿಂಕ್‌ನ್ನು ಆಫ್‌ಲೈನ್‌ನಲ್ಲೂ ಮಾಡಬಹುದು!

ಆಧಾರ್ ಕಾರ್ಡ್ ಅನ್ನು ಎಲ್‌ಪಿಜಿ ಗ್ಯಾಸ್ ಸಂಪರ್ಕದೊಂದಿಗೆ ಆಫ್‌ಲೈನ್‌ನಲ್ಲಿಯೂ ಲಿಂಕ್ ಮಾಡಬಹುದು.ಇದಕ್ಕಾಗಿ ನೀವು ನಿಮ್ಮ ಗ್ಯಾಸ್ ವಿತರಕರ ಬಳಿಗೆ ಹೋಗಿ ಅವರಿಂದ ಅರ್ಜಿ ಪಡೆದು ಭರ್ತಿ ಮಾಡಿಬೇಕು.ಅದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಸೇರಿಸಿ ಅವರಿಗೆ ನೀಡಿದರೆ, ಅವರೇ ಲಿಂಕ್ ಆಗುತ್ತದೆ.

ಎಲ್‌ಪಿಜಿ ಗ್ಯಾಸ್ ಸಂಪರ್ಕದ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು.ಆಗ ಮಾತ್ರ ಸಬ್ಸಿಡಿ ಹಣ ನಿಮಗೆ ಸಿಗುತ್ತದೆ.

LPG ಗ್ಯಾಸ್ ಸಂಪರ್ಕವನ್ನು ಆಧಾರ್ ಗೆ ಲಿಂಕ್ ಮಾಡವುದು ಹೇಗೆ?

* ಎಲ್‌ಪಿಜಿ ಗ್ಯಾಸ್‌ಗೆ ಆಧಾರ್ ಅನ್ನು ಲಿಂಕ್ ಮಾಡಲು ನೀವು ಮೊದಲು ಅಧಿಕೃತ ವೆಬ್‌ಸೈಟ್‌ https://uidai.gov.in/ ಗೆ ಭೇಟಿ ನೀಡಿಬೇಕಾಗುತ್ತದೆ.

* ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ ಸೆಲ್ಫ್‌ ಸೀಡಿಂಗ್‌ ಪುಟಕ್ಕೆ ಭೇಟಿ ನೀಡಬೇಕು.ನಂತರ ಅದರಲ್ಲಿ ಕೇಳಲಾದ ಮಾಹಿತಿಯನ್ನು ತಪ್ಪದೇ ನಮೂದಿಸಬೇಕಾಗುತ್ತದೆ.ನೀವು ತದನಂತರ LPG ಅನ್ನು ಆಯ್ಕೆ ಮಾಡಬೇಕು ಮತ್ತು ನಿಮ್ಮ ಆಯಾ ಗ್ಯಾಸ್ ಕಂಪನಿ IVOCL, BPCL, HPCL ಅನ್ನು ನಮೂಸಬೇಕಾಗುತ್ತದೆ.

* ವಿತರಕರ ಪಟ್ಟಿ ನಿಮ್ಮ ಮುಂದೆ ನಿಮ್ಮ ಹೆಸರು ಕಾಣಿಸುತ್ತದೆ. ಅದರಲ್ಲಿ ನಿಮ್ಮ ವಿತರಕರನ್ನು ಆಯ್ಕೆಮಾಡಿ. ಅದರ ನಂತರ ಗ್ಯಾಸ್ ಸಂಪರ್ಕ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮೇಲ್ ಐಡಿ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ವಿವರಗಳನ್ನು ಪರಿಶೀಲಿನೆ ಮಾಡಿ. ಆಗ ನಿಮ್ಮ ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಆಗುತ್ತದೆ.

ಆಧಾರ್ ಲಿಂಕ್ ಮಾಡಬೇಕಾದ್ರೆ ಇವುಗಳನ್ನು ನೆನಪಿನಲಿಟ್ಟಿಕೊಳ್ಳುವುದು ಮುಖ್ಯ

ನೀವು ಗ್ಯಾಸ್‌ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳವುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳವುದು ಅವಶ್ಯಕ.ಗ್ಯಾಸ್ ಸಂಪರ್ಕ ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್‌ನೊಂದಿಗೆ ಮಾತ್ರ ಲಿಂಕ್ ಮಾಡಬೇಕಾಗುತ್ತದೆ.ನೀವು ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿ ಕಡ್ಡಾಯವಾಗಿ ನಿಮ್ಮ ಬಳಿ ಇರಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+