ಆರ್ಥಿಕ ಸುಧಾರಣೆಯ ಹರಿಕಾರ ಅಭಿವೃದ್ಧಿಗೆ ಮುನ್ನುಡಿ ಬರೆದ ಸಾಹಸಿ ಪ್ರಧಾನಿಯಾಗಿ, ಆರ್ಥಿಕ ಸಚಿವರಾಗಿ ಹಿರಿಯ ಕಾಂಗ್ರೆಸ್ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಮಹಾನುಭವಿ ಡಾ. ಮನಮೋಹನ್ ಸಿಂಗ್‌ರವರು ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾದರೂ ತಡೆದುಕೊಳ್ಳುವ ತಾಕತ್ತು ದೇಶದ ಅರ್ಥ ವ್ಯವಸ್ಥೆಗೆ ಇಂದು ಇದೆ ಎನ್ನುವುದಾದರೆ ಅದಕ್ಕೆ ರೂಪಿಸಿದ ಅರ್ಥ ವ್ಯವಸ್ಥೆಯೇ ಮೂಲ ಕಾರಣ ಎಂದು ಸಾಬೀತು ಮಾಡಿದ ವ್ಯಕ್ತಿ. ಅವರು ಜೀವಮಾನದ ಸಾದನೆಯನ್ನು ಹಾದಿಯಲ್ಲಿ ಅವರು ಜಾರಿಗೆ ತಂದ ಯೋಜನೆಗಳು ಯಾವುವು? ಭಾರತದಲ್ಲಿ ಆರ್ಥಿಕ ಸುಧಾಹರಣೆಯನ್ನು ತರಲು ಕೈಗೊಂಡ ನೀತಿಯೇನು ಎಂಬುವುದನ್ನು ತಿಳಿಯೋಣ ಬನ್ನಿ.
ಹೌದು, 1991 ರಲ್ಲಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಕ ಮಾಡಲಾಗಿತು. ಅವರು ಆರ್ಥಿಕ ಸಚಿವರಾದ ನಂತರ ಮಾಡಿದ ಮೊದಲ ಕೆಲಸವೆಂದರೆ ದೇಶವನ್ನು ಆರ್ಥಿಕ ವಿಪತ್ತಿನಿಂದ ರಕ್ಷಿಸುವುದು ಇದಕ್ಕಾಗಿ ಅವರು ಉದಾರೀಕರಣ, ಖಾಸಗೀಕರಣ, ಜಾಗತೀಕರಣ" (LPG) ಎಂದು ಕರೆಯಲ್ಪಡುವ ಆರ್ಥಿಕ ಸುಧಾರಣಾ ನೀತಿಗಳನ್ನು ಜಾರಿಗೆ ತಂದರು.

ಉದಾರೀಕರಣ
ಉದ್ಯಮ ವಲಯಕ್ಕೆ ತಲೆನೋವಾಗಿದ್ದ ಲೈಸೆನ್ಸ್ ರಾಜ್ ನ್ನು ಕೊನೆಗೊಳಿಸಿದ್ದ ಕೀರ್ತಿಯೂ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ರಾಸಾಯನಿಕ ಇತ್ಯಾದಿ ಹಾನಿಕಾರಕ ಎನಿಸುವ ಉದ್ಯಮಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಉದ್ದಿಮೆಯನ್ನೂ ಯಾವ ಲೈಸೆನ್ಸ್ ಇಲ್ಲದೆಯೇ ಸ್ಥಾಪಿಸುವ ಅವಕಾಶವನ್ನು ಸಿಂಗ್ ವಿತ್ತಸಚಿವರಾಗಿದ್ದಾಗ ನೀಡಿದ್ದರು. ಖಾಸಗಿ ಬ್ಯಾಂಕುಗಳು ತಾವೇ ಸ್ವಂತವಾಗಿ ಬಡ್ಡಿದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು ಅವರು ಪಡೆದುಕೊಂಡರು.ಅವರು ಕೈಗೊಂಡ ಆರ್ಥಿಕ ಸುಧಾರಣಾ ಮಾಡಲು ಸಹಾಯವಾಗಿತ್ತು.
ಖಾಸಗೀಕರಣ
ಖಾಸಗೀಕರಣ ನೀತಿಯಿಂದಾಗಿ ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಲು ಅನುಮತಿಸಲಾಗಿತು. ಖಾಸಗೀಕರಣದ ಫಲದಿಂದ ಅಡುಗೆ ಅನಿಲ ಅಥವಾ ಫೋನ್ ಸಂಪರ್ಕಕ್ಕಾಗಿ ಈಗ ಮೊದಲಿನಂತೆ ವರ್ಷಗಟ್ಟಲೇ ಕಾಯಬೇಕಾಗಿಲ್ಲ. ಯಾರದೇ ಶಿಫಾರಸೂ ಬೇಕಾಗಿಲ್ಲ ಇದಕೆಲ್ಲಾ ಅವರು ಕೈಗೊಂಡ ನೀತಿಗಳ ಫಲ
ಜಾಗತೀಕರಣ
ಜಾಗತೀಕರಣದ ಮಟ್ಟದಲ್ಲಿ ಮನಮೋಹನ್ ಸಿಂಗ್ ಆಮದು ಸುಂಕ ದರಗಳನ್ನು ಇಳಿಸಲಾಯಿತು. ಆಮದು ನಿರ್ಬಂಧ ಪಟ್ಟಿಯಿಂದ ಎಲ್ಲಾ ಸರಕುಗಳನ್ನು ಮುಕ್ತಗೊಳಿಸಲಾಯಿತು. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿದೇಶೀ ಹೂಡಿಕೆಗೆ ಆರ್ಥಿಕತೆಯನ್ನು ತೆರೆಯಲಾಯಿತು. ಈ ರೀತಿಯ ಸುಧಾರಣಾ ಕ್ರಮಗಳ ಪರಿಣಾಮವಾಗಿ ಭಾರತಕ್ಕೆ ಹೂಡಿಕೆ, ಬಂಡವಾಳ ಹೆಚ್ಚ್ಆಗಿತ್ತು. ಐಟಿ ಕ್ಷೇತ್ರ ಬಹುದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು.
ಭಾರತವನ್ನು ಜಗತ್ತಿನೆದುರು ಮುಕ್ತವಾಗಿ ತೆರೆದಿಡುವ ದಿಟ್ಟ ಸಾಹಸಿ
ಜಾಗತೀಕರಣ, ಉದಾರೀಕರಣದಿಂದ ಏನೇನು ಅನುಕೂಲಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ಸಿಂಗ್. ಎಲ್ಲರೂ ನೆನ್ನೆ ಮತ್ತು ಇಂದಿನ ಬಗ್ಗೆ ಯೋಚಿಸುತ್ತಿದ್ದರೆ, ಸಿಂಗ್ ನಾಳೆ ಮತ್ತು ನಾಡಿದ್ದನ್ನು ಯೋಚಿಸುತ್ತಿದ್ದರು. ಹೀಗಾಗಿಯೇ ಭಾರತವನ್ನು ಜಗತ್ತಿನೆದುರು ಮುಕ್ತವಾಗಿ ತೆರೆದಿಡುವ ದಿಟ್ಟ ಸಾಹಸಕ್ಕೆ ಕೈ ಹಾಕಿದರು.
ತೆರಿಗೆ ವ್ಯವಸ್ಥೆ ಸರಳೀಕರಣ, ಕಾನೂನು ಸಡಿಲಿಕೆ ಮೂಲಕ ಉದ್ಯಮಕ್ಕೆ ಹಿತಕರವಾದ ವಾತಾವರಣವನ್ನು ಸಿಂಗ್ ಸೃಷ್ಟಿಸಿದರು. ಈ ಫಲವಾಗಿ ಅಪಾರ ವಿದೇಶಿ ಬಂಡವಾಳ ದೇಶಕ್ಕೆ ಹರಿದುಬಂತು. ಅದರ ಜತೆಗೆ ವಿದೇಶಿ ತಂತ್ರಜ್ಞಾನವೂ ಬಂತು.
ಮನಮೋಹನ್ ಸಿಂಗ್ ಜಾರಿಗೆ ತಂದಿದ್ದ ಯೋಜನೆಗಳು
1.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (NREGA): ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗಿತು.
2.ಮಾಹಿತಿ ಹಕ್ಕು ಕಾಯಿದೆ (RTI): ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸುವುದು
3.ಯುನೈಟೆಡ್ ಸ್ಟೇಟ್ಸ್ ಜೊತೆಗಿನ ನಾಗರಿಕ ಪರಮಾಣು ಒಪ್ಪಂದ: ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಲು ಸಹಾಯವಾಗಿತು.
4.ಡಾ ಸಿಂಗ್ ಅವರ ಶಾಂತ ಮತ್ತು ನಿರ್ಣಾಯಕ ನಾಯಕತ್ವವು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡಿತು.
ಐಟಿಬಿಟಿ ದೂರದೃಷ್ಟಿಕೋನ
ನಾವು ಐಟಿ-ಬಿಟಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಕಾಣುತ್ತಿದ್ದೇವೆ ಅದರೆ ಅದಕ್ಕೆ ಮನಮೋಹನ್ ಸಿಂಗ್ ಅವರೇ ಕಾರಣ. ಕಂಪ್ಯೂಟರ್, ಟಿವಿ, ಡಿವಿಡಿ, ಬೈಕು, ಸ್ಕೂಟರ್ ಮತ್ತು ಕಾರು ಮತ್ತಿತರ ವಸ್ತುಗಳು ಇಂದು ಸಿರಿವಂತರ ಸ್ವತ್ತಾಗಿ ಉಳಿದಿಲ್ಲ. ಇವೆಲ್ಲವೂ ಮಧ್ಯಮವರ್ಗದ ಜನರ ಕೈಗೆಟುಕುತ್ತಿವೆ. ಗ್ರಾಹಕರ ಒಂದೇ ಒಂದು ಫೋನ್ ಕಾಲ್ ಅಥವಾ ಇಮೇಲ್‌ಗೆ ಬ್ಯಾಂಕ್‌ಗಳು ಇಂದು ಸ್ಪಂದಿಸುತ್ತವೆ ಇದಕ್ಕೆ ಕಾರಣದಾತ ಮನಮೋಹನ್ ಸಿಂಗ್.
ಎಟಿಎಂ, ಇ-ಬ್ಯಾಂಕಿಂಗ್ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಭೂತಪೂರ್ವ ಬದಲಾವಣೆಯನ್ನು ನಾವಿಂದು ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಸಿಂಗ್ ಅವರ ದೂರದೃಷ್ಟಿಯ ಆರ್ಥಿಕ ನೀತಿಗಳೇ ಕಾರಣ.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆಧಾರ್ ಯೋಜನೆ ಸಹ ಜಾರಿಗೆ ಬಂದಿತು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications