ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!

ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಜನಸಾಮಾನ್ಯರು ಬೇಸತ್ತಿದ್ದಾರೆ. ಇದರ ನಡುವೆ ಸರ್ಕಾರಿ ತೈಲ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿವೆ.

ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 769 ರೂಗಳಿಂದ 794 ರೂ.ಗೆ ಏರಿದೆ. ಈ ಹೊಸ ಬೆಲೆಗಳು ಇಂದಿನಿಂದಲೇ (ಫೆಬ್ರವರಿ 25) ಜಾರಿಗೆ ಬಂದಿವೆ. ಈ ತಿಂಗಳು ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ಗಳ ಬೆಲೆಯನ್ನು ಇಂದು 25 ರೂ.ವರೆಗೆ ಹೆಚ್ಚಿಸಲಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!

ಎಲ್‌ಪಿಜಿ ಸಿಲಿಂಡರ್ ಬೆಲೆ ಡಿಸೆಂಬರ್‌ನಲ್ಲಿ ಎರಡು ಬಾರಿ ಹೆಚ್ಚಾಗಿದೆ. ಡಿಸೆಂಬರ್ 1 ರಂದು ಅದರ ದರವನ್ನು 594 ರೂ.ಗಳಿಂದ 644 ರೂ.ಗೆ ಹೆಚ್ಚಿಸಲಾಯಿತು ಮತ್ತು ನಂತರ ಡಿಸೆಂಬರ್ 15 ರಂದು ಅದನ್ನು ಮತ್ತೊಮ್ಮೆ 694 ರೂ.ಗೆ ಏರಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ 100 ರೂಪಾಯಿಗಳ ಹೆಚ್ಚಳ ಕಂಡುಬಂದಿದೆ. ಆದರೆ ಜನವರಿಯಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ (14.2 ಕೆಜಿ) ಬೆಲೆ 694 ರೂ. ಆಗಿತ್ತು.

ಇನ್ನು ಫೆಬ್ರವರಿ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮೂರು ಬಾರಿ ಹೆಚ್ಚಿಸಲಾಗಿದೆ. ಫೆಬ್ರವರಿ 4 ರಂದು ಸರ್ಕಾರ ಎಲ್‌ಪಿಜಿ ಬೆಲೆಯನ್ನು 25 ರೂ.ಗೆ ಹೆಚ್ಚಿಸಿತ್ತು. ಅದರ ನಂತರ ಫೆಬ್ರವರಿ 15 ರಂದು ಒಂದು ಸಿಲಿಂಡರ್ ಬೆಲೆಯನ್ನು 50 ರೂ. ಈಗ ಮತ್ತೆ 25 ರೂಪಾಯಿಗಳನ್ನು ಹೆಚ್ಚಿಸಿರುವುದು ಮೂರನೇ ಬಾರಿ. ಫೆಬ್ರವರಿ 4 ರಂದು ಹೆಚ್ಚಿದ ನಂತರ ಅದರ ಬೆಲೆ 644 ರೂ.ಗಳಿಂದ 719 ರೂ.ಗೆ ಏರಿದೆ. ಫೆಬ್ರವರಿ 15 ರಂದು ಬೆಲೆ 719 ರೂ.ನಿಂದ 769 ರೂ.ಗೆ ಮತ್ತು ಫೆಬ್ರವರಿ 25 ರಂದು ಬೆಲೆ 769 ರಿಂದ 794 ರೂ.ಗೆ ಏರಿತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+