LPG Price Drop: ಇಂದು ಜುಲೈ ಮೊದಲ ದಿನ ತೈಲ ಕಂಪನಿಗಳು LPG ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು,ಬಾಣಿಜ್ಯ ಸಿಲಿಂಡರ್ ಬಳಕೆದಾದದರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸತತವಾಗಿ ನಾಲ್ಕು ತಿಂಗಳಿಂದ ಎಲ್‌ಪಿಜಿ ಸಿಲಿಂಡರ್ ದರದಲ್ಲಿ(LPG Cylinder Price)ಇಳಿಕೆಯಾಗಿದ್ದು, ಜುಲೈ ತಿಂಗಳಲ್ಲಿ ಕೂಡ ಇಳಿಕೆಯಾಗಿದೆ.
ಹೌದು, ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) LPG ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಸಿಹಿಸುದ್ದಿಯನ್ನು ಕೊಟ್ಟಿವೆ.ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 60 ರೂ.ಗಳಷ್ಟು ಕಡಿಮೆ ಮಾಡಲಾಗಿದೆ ದೆಹಲಿಯಲ್ಲಿ ಅದರ ಬೆಲೆ 1665 ರೂ.ಗಳಾಗಿದೆ ದೆಹಲಿಯಲ್ಲಿ ಹೆಚ್ಚಿನ ಇಳಿಕೆ ಕಂಡಿದು ಬಂದಿದೆ.ಆದರೆ ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜುಲೈ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು 57 ರೂಪಾಯಿಗಳಿಗಿಂತ ಹೆಚ್ಚು ಇಳಿಕೆ ಕಂಡಿವೆ. ಕಳೆದ ಜೂನ್ ಜೂನ್ ತಿಂಗಳಲ್ಲಿ ಸಹ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 24 ರೂ.ಗಳಷ್ಟು ಕುಸಿತವನ್ನು ಕಡಿತ್ತು ಸತತ ನಾಲ್ಕನೇ ತಿಂಗಳು ಎಲ್‌ಪಿಜಿ ವ್ಯಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗಿವೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ(LPG) ದರ ಅಗ್ಗ
ಐಒಸಿಎಲ್ (IOCL) ದತ್ತಾಂಶದ ಪ್ರಕಾರ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಗಳು ಇಳಿಕೆ ಕಂಡಿದೆ. ಜುಲೈ ಮೊದಲ ದಿನ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ 58.5 ರೂ.ಗಳಷ್ಟು ಕಡಿಮೆಯಾಗಿದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕ್ರಮವಾಗಿ ಪ್ರತಿ ಗ್ಯಾಸ್ ಸಿಲಿಂಡರ್‌ಗೆ 57, 58 ಮತ್ತು 57.5 ರೂ.ಗಳಷ್ಟು ಇಳಿಕೆ ಕಂಡಿದೆ.
ಜುಲೈನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪ್ರಸ್ತುತ ಬೆಲೆಗಳ ವಿವರ
ದೆಹಲಿ: 1665 ರೂ
ಮುಂಬೈ:1616 ರೂ
ಕೋಲ್ಕತ್ತಾ: 1,769 ರೂ.
ಚೆನ್ನೈ: 1823.50 RU
ನಾಲ್ಕು ತಿಂಗಳಲ್ಲಿ ವಾಣಿಜ್ಯ LPG ಎಷ್ಟು ಇಳಿಕೆಯಾಗಿವೆ..?
ತೂಲ ಕಂಪನಿಗಳು ಕಳೆದ ನಾಲ್ಕು ತಿಂಗಳಲ್ಲಿ ಸತತವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಸುಮಾರು 140 ರೂ. ಇಳಿಕೆಯನ್ನು ಮಾಡಿದೆ. ಐಒಸಿಎಲ್ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಜುಲೈ ತಿಂಗಳು ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 138 ರೂ. ಇಳಿಕೆ ಕಂಡಿದೆ. ಇನ್ನೂ ಮಹಾನಗರಗಳಾದ ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 144 ರೂ. ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 139 ರೂ. ಇಳಿಕೆ ಕಂಡಿದೆ. ಚೆನ್ನೈನಲ್ಲಿ 141.5 ರೂ. ಗಳಷ್ಟು ಇಳಿಕೆಯನ್ನು ಕಂಡಿವೆ.
ದೇಶೀಯ ತೈಲ ಕಂಪನಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಕೊನೆಯ ಬಾರಿಗೆ ದೇಶೀಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಗ್ಯಾಸ್ ಸಿಲಿಂಡರ್‌ಗೆ 50 ರೂ. ವರರಗೂ ಹೆಚ್ಚಳ ಮಾಡಲಾಗಿದೆ. ಅದು ಬಿಟ್ಟರೆ ಇಂದುವರೆಗೂ ಯಾವುದೇ ಬದಲಾವಣೆಯನ್ನು ಕಂಡಿಲ್ಲ.
ಎಲ್ ಪಿಜಿ ಸಿಲಿಂಡರ್ ದರ ಇಳಿಕೆಯ ವಿವರ
ಜುಲೈ 1, 2025 ರಂದು 14.2 ಕೆಜಿ ದೇಶೀಯ LPG ದರಗಳ ವಿವರ ಈ ಕೆಳಗಿನಂತಿವೆ.
- ದೆಹಲಿ: 853.00 ರೂ.
- ಗುರಗಾಂವ್: 861.5 ರೂ.
- ಅಹಮದಾಬಾದ್: 860 ರೂ.
- ಜೈಪುರ: 856.5 ರೂ.
- ಪಾಟ್ನಾ: 942.5 ರೂ.
- ಆಗ್ರಾ: 865.5 ರೂ.
- ಮೀರತ್: 860 ರೂ.
- ಗಾಜಿಯಾಬಾದ್: 850.5 ರೂ.
- ಇಂದೋರ್: 881 ರೂ.
- ಭೋಪಾಲ್: 858.5 ರೂ.
- ಲುಧಿಯಾನ: 880 ರೂ.
- ವಾರಣಾಸಿ: 916.5 ರೂ.
- ಲಕ್ನೋ: 890.5 ರೂ.
- ಮುಂಬೈ: 852.50 ರೂ.
- ಪುಣೆ: 856 ರೂ.
- ಹೈದರಾಬಾದ್: 905 ರೂ.
- ಬೆಂಗಳೂರು:855.5ರೂ.
ಅಡುಗೆ ಅನಿಲ ಕಡಿಮಾಯಾಗುತ್ತದೆ ಎಂಬ ನಿರೀಕ್ಷೆ ಇಟ್ಟವರಿಗೆ ನಿರಾಸೆಯಾಗಿದೆ.


Click it and Unblock the Notifications