ಕೇಂದ್ರ ಬಜೆಟ್ (Union Budget 2025) ಮಂಡನೆಗೆ ದಿನಗಣನೆ ಆರಂಭವಾಗಿದೆ.ಫೆಬ್ರವರಿ ತಿಂಗಳು ಬಂತು ಅಂದರೆ ಎಲ್ಲಾರ ಗಮನ ಎಲ್‌ಪಿಜಿ ಗ್ಯಾಸ್‌ಗಳತ್ತ(lpg gas cylinder)ಹೋಗುತ್ತದೆ. ಹೌದು, ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಷ್ಕರಣೆ ಮಾಡುತ್ತವೆ.ಈ ಬಾರಿಯ ಬಜೆಟ್ ಕೂಡ ಫೆಬ್ರವರಿ ಮೊದಲ ದಿನ ಬಂದಿರುವುದರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಹೆಚ್ಚಾಗುತ್ತಾ? ಕಡಿಮೆಯಾಗುತಾ? LPG ಬೆಲೆಗಳಿಗಾಗಿ ಬಜೆಟ್ 2025 ರಿಂದ ಏನನ್ನು ನಿರೀಕ್ಷಿಸಬಹುದು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಈ ಬಾರಿಯ ಬಜೆಟ್ ಮೇಲೆ ಹಲವಾರು ವಲಯಗಳಿಂದ ಭಾರೀ ನಿರೀಕ್ಷೆಗಳಿವೆ. ಫೆಬ್ರವರಿ 1, 2025 ರಂದು,ನಿರ್ಮಲ ಸೀತಾರಾಮನ್ ಅವರು ಮೋದಿ 3.0 ಅಡಿಯಲ್ಲಿ ತಮ್ಮ ಎಂಟನೇ ಮತ್ತು ಎರಡನೇ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸುತ್ತಾರೆ.ಈ ಬಜೆಟ್‌ನಲ್ಲಿ ಎಲ್‌ಪಿಜಿ ದರ ಕಡಿಮೆಯಾಗಬೇಕು ಎಂದು ಜನಸಾಮಾನ್ಯರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಭಾರತದಲ್ಲಿ LPG ಬೆಲೆಗಳು:
ಆರು ತಿಂಗಳುಗಳವರೆಗೆ ಭಾರತದಲ್ಲಿ ಎಲ್‌ಪಿಜಿ ಬೆಲೆಗಳು ಬದಲಾಗದೆ ಆಗೇ ಉಳಿದ ನಂತರ OMC ಗಳು 19KG ಸಿಲಿಂಡರ್‌ಗಳ LPG ಬೆಲೆಗಳು ಕಡಿಮೆ ಮಾಡುವುವ ಮೂಲಕ ವರ್ಷದ ಮೊದಲ ತಿಂಗಳನ್ನು ಸಿಹಿಸುದ್ದಿಯೊಂದಿಗೆ ಬರಮಾಡಿಕೊಳ್ಳಲಾಗಿತು. ಜನವರಿ 1, 2025 ರಿಂದ ಜಾರಿಗೆ ಬರುವಂತೆ ನಗರಗಳಾದ್ಯಂತ 19Kg ಸಿಲಿಂಡರ್ ಬೆಲೆಗಳನ್ನು ರೂ 14.5 ರಿಂದ ರೂ 16 ಕ್ಕೆ ಇಳಿಕೆಯಾಗಿತು.
ಕೋಲ್ಕತ್ತಾ ನಗರವು LPG ಬೆಲೆಗಳಲ್ಲಿ ಹೆಚ್ಚಿನ ಕಡಿತವನ್ನು ಕಂಡಿತು.ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈಗೆ ಹೋಲಿಸಿದರೆ ಮುಂಬೈನಲ್ಲಿ ಅಗ್ಗದ ಬೆಲೆಯಲ್ಲಿ LPG ಮಾರಾಟವಾಗುತ್ತಿದೆ. ಈ ಹಿನ್ನೆಲೆ ಬಹುತೇಕ ಮಂದಿ ಅದರಲ್ಲೂ ಮಧ್ಯಮ ವರ್ಗದವರು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಈ ವಸ್ತುಗಳ ಸಬ್ಸಿಡಿಯನ್ನು ಹೆಚ್ಚಿಸುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಜನವರಿ 1, 2025 ರಿಂದ 19 ಕೆಜಿ LPG ಸಿಲಿಂಡರ್‌ಗಳ ಇತ್ತೀಚಿನ ಬೆಲೆಗಳ ವಿವರ ಇಲ್ಲಿವೆ.
ದೆಹಲಿಯಲ್ಲಿ LPG ಬೆಲೆಗಳು: 19Kg LPG ಸಿಲಿಂಡರ್ ರೂ 1,804 ಆಗಿದ್ದರೆ, 14.2Kg LPG ಬೆಲೆ ರೂ 803 ಆಗಿದೆ.
ಮುಂಬೈನಲ್ಲಿ LPG ಬೆಲೆಗಳು: ಆರ್ಥಿಕ ಕೇಂದ್ರ ಬಿಂದುವಾಗಿರುವ ಪ್ರಸ್ತುತ 19kg LPG ಬೆಲೆ 1,756 ರೂಗಳಲ್ಲಿದೆ ಮತ್ತು 14.2kg LPG ಸಿಲಿಂಡರ್ ರೂ 802.50 ನಲ್ಲಿ ಲಭ್ಯವಿದೆ.
ಕೋಲ್ಕತ್ತಾದಲ್ಲಿ LPG ಬೆಲೆಗಳು: 19Kg ಮತ್ತು 14.2Kg LPG ಬೆಲೆಗಳು 1,911 ಮತ್ತು 829 ರೂ.ಗಳು ಇವೆ.
ಚೆನ್ನೈನಲ್ಲಿ LPG ಬೆಲೆಗಳು: ಈ ದಕ್ಷಿಣ ನಗರವಾಗಿರುವ ಚೆನ್ನೈನಲ್ಲಿ 19ಕೆಜಿ ಗ್ಯಾಸ್ ಬೆಲೆ ಮತ್ತು 14.2 ಕೆಜಿ ಬೆಲೆಗಳು 1,966 ರೂ ಮತ್ತು 818.50 ರೂ ಪ್ರತಿ ಸಿಲಿಂಡರ್ ಇದೆ.
ಬಜೆಟ್ ದಿನ LPG ಬೆಲೆಗಳು ಹೆಚ್ಚಾಗುತ್ತಾ?
ಕಳೆದ ವರ್ಷ ಲೋಕಸಭಾ ಚುನಾವಣೆಯ ಕಾರಣ, ಫೆಬ್ರವರಿ 1 ರಂದು ಹಣಕಾಸು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲು ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. ಆ ಮಧ್ಯಂತರ ಬಜೆಟ್ ಘೋಷಣೆಗೆ ಮುಂಚಿತವಾಗಿ, OMC ಗಳು LPG ಬೆಲೆಗಳನ್ನು ಹೆಚ್ಚಿಸಿವೆ.
ಇಂಡಿಯನ್ ಆಯಿಲ್ ಮೆಟ್ರೋ ನಗರಗಳಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 12.5 ರಿಂದ 18 ರೂ.ಗೆ ಹೆಚ್ಚಿಸಿದೆ. ಆದರೆ 2024 ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರದ ಗೆಲುವಿನ ನಂತರ ಜುಲೈ ತಿಂಗಳಲ್ಲಿ ನಿರ್ಮಲ್ ಸೀತಾರಾಮನ್ ಅವರು ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದರು. ಪೂರ್ಣ ಪ್ರಮಾಣದ ಬಜೆಟ್ 2024 ಕ್ಕಿಂತ ಮುಂಚಿತವಾಗಿ, ಮೆಟ್ರೋ ನಗರಗಳಾದ್ಯಂತ ಇಂಡಿಯನ್ ಆಯಿಲ್ 19 ಕೆಜಿ ಸಿಲಿಂಡರ್ ಬೆಲೆಗಳನ್ನು 30 ರಿಂದ 31 ರೂಗಳಷ್ಟು ತೀವ್ರವಾಗಿ ಕಡಿಮೆ ಮಾಡಿದೆ. LPG ಬೆಲೆಗಳು ಫೆಬ್ರವರಿಯಲ್ಲಿ ಇದೇ ಪ್ರವೃತ್ತಿಯನ್ನು ಕಾಣಬಹುದು.
ಅಲ್ಲದೆ, LPG ಯಲ್ಲಿ ಕಡೆಗೆ ಸಬ್ಸಿಡಿ ಹಂಚಿಕೆಯ ನಿರೀಕ್ಷೆಗಳು, BPCL, ಇಂಡಿಯನ್ ಆಯಿಲ್ ಮತ್ತು HPCL ನಂತಹ OMC ಗಳ ಮೇಲೆ ನಿರ್ಧಾರವಾಗುತ್ತದೆ.
2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆಹಾರ, ರಸಗೊಬ್ಬರ ಮತ್ತು ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಬ್ಸಿಡಿ ಮೊತ್ತವನ್ನು ಶೇ. 8ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಮೋದಿ ಸರ್ಕಾರ ಬಜೆಟ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಕಡಿಮೆ ಮಾಡುತ್ತದೆಯೋ ಇಲ್ಲವೂ ಎಂಬುವುದನ್ನು ಕಾದುನೋಡಬೇಕಿದೆ.
LPG ಬೆಲೆಗಳ ಲೆಕ್ಕಾಚಾರ:
LPG ಬೆಲೆಗಳು ಆಮದು ಶುಲ್ಕ, ಬಂದರು ವೆಚ್ಚಗಳು, ವಿಮೆ, ಸಾಗರ ಸರಕು ಸಾಗಣೆ ಬೆಲೆ, ಜಿಎಸ್‌ಟಿ, ಡೀಲರ್ ಕಮಿಷನ್, ಮಾರ್ಕೆಟಿಂಗ್ ವೆಚ್ಚಗಳು,OMC ಯಿಂದ ವಿಧಿಸಲಾದ ಮಾರ್ಜಿನ್‌ಗಳು, ಎಲ್‌ಪಿಜಿ ಬೆಲೆಗಳನ್ನು ನಿರ್ಧರಿಸುವಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಇವೆಲ್ಲಾದರ ಲೆಕ್ಕಾಚಾರದ ಮೇಲೆ ಗ್ಯಾಸ್ ಸಿಲಿಂಡರ್ ದರ ನಿರ್ಧಾರವಾಗುತ್ತದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications