For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಹಾಗೂ ಎಸ್ಬಿಐ ಬಿಟ್ಟು ಮಿಕ್ಕ ಕಂಪನಿ ಮೌಲ್ಯ ಕುಸಿತ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಇನ್ಫೋಸಿಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರ ಕಳೆದ ವಾರದಲ್ಲಿ ಮೌಲ್ಯ ಏರಿಕೆ ಕಂಡಿವೆ.

ಎಂಟು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ ಕುಸಿತ ಕಂಡು ಒಟ್ಟಾರೆ, 1,13,074.57ಕೋಟಿ ರು ಮೌಲ್ಯ ಕುಸಿತವಾಗಿದೆ.

ಕುಸಿತ ಕಂಡ ಕಂಪನಿಗಳು: ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್.

ರಿಲಯನ್ಸ್ ಹಾಗೂ ಎಸ್ಬಿಐ ಬಿಟ್ಟು ಮಿಕ್ಕ ಕಂಪನಿ ಮೌಲ್ಯ ಕುಸಿತ

ಈ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್) 30, 054.79 ಕೋಟಿ ರು ಕುಸಿತ ಕಂಡು 11,28,488.10 ಕೋಟಿ ರು ಆಗಿದೆ. ಇನ್ಫೋಸಿಸ್ 15, 168.41ಕೋಟಿ ರು ಇಳಿಕೆ ಕಂಡು 5,61, 060.44 ಕೋಟಿ ರು ಆಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 15,139.12 ಕೋಟಿ ರು ಕುಸಿತ ಕಂಡು 7,65,035.49 ಕೋಟಿ ರು ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 14, 398.04 ಕೋಟಿ ರು ಕುಸಿತಗೊಂಡು 3,38, 358.80 ಕೋಟಿ ರು ಆಗಿದೆ. ಎಚ್ ಡಿ ಎಫ್ ಸಿ 13,430.38 ಕೋಟಿ ರು ಇಳಿಕೆಯಾಗಿ 4,36,879.75 ಕೋಟಿ ರು ಮುಟ್ಟಿದೆ. ಬಜಾಜ್ ಫೈನಾನ್ಸ್ 9,844.62 ಕೋಟಿ ರು ಕಳೆದುಕೊಂಡು 3,21,592.05 ಕೋಟಿ ರು ಆಗಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 8,505.43 ಕೋಟಿ ರು ಮೌಲ್ಯ ಕಳೆದುಕೊಂಡು 5,58.445.28 ಕೋಟಿ ರು ಆಗಿದೆ. ಐಸಿಐಸಿಐ 6,533.78 ಕೋಟಿ ರು ಇಳಿಕೆ ಕಂಡು 4,13, 243.07 ಕೊಟಿ ರು ಆಗಿದೆ.

ಇದೇ ವೇಳೆ, ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 3,518.62 ಕೋಟಿ ರು ಏರಿಕೆಯಾಗಿ 12,27,855.04 ಕೋಟಿ ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,052.66ಕೋಟಿ ರು ಏರಿಕೆಯಾಗಿ 3,21,732.25 ಕೋಟಿ ರು ಆಗಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬಜಾಜ್ ಫೈನಾನ್ಸ್.

English summary

M- Cap last week: Reliance Industries Ltd and SBI gain

Reliance Industries Ltd and State Bank of India are the only two companies managed gain in their market capitalisation for the week closed last week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X