ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ನಾಲ್ಕು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ 1.14 ಲಕ್ಷ ಕೋಟಿ ರುಪಾಯಿ ಏರಿಕೆ ಕಂಡಿವೆ. ಈ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್), ಇನ್ಫೋಸಿಸ್ ಮಾತ್ರ ಹೆಚ್ಚಿನ ಗಳಿಕೆ ದಾಖಲಿಸಿದೆ. ಟಾಪ್ 10ರಲ್ಲಿರುವ ಏಳು ಕಂಪನಿಗಳು ಒಟ್ಟಾರೆ 1,07, 566.64 ಕೋಟಿರು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ.
ಏರಿಕೆ ಕಂಡ ಕಂಪನಿಗಳು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್), ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಹಾಗೂ ಭಾರ್ತಿ ಏರ್ ಟೆಲ್.
ಕುಸಿತ ಕಂಡ ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಲ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

ಟಿಸಿಎಸ್ 57,816.18 ಕೋಟಿ ರು ಏರಿಕೆ ಕಂಡು 12, 28, 898.85 ಕೋಟಿ ರು ಗೇರಿದೆ. ಇನ್ಫೋಸಿಸ್ 23, 625.36 ಕೋಟಿ ರು ಏರಿಕೆ ಕಂಡು 6,13,854.71ಕೋಟಿ ರು ಗೇರಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮೆಟೆಡ್ ಮೌಲ್ಯ 17,974.19 ಕೋಟಿ ರು ಏರಿಕೆ ಕಂಡು 5,81,741.24 ಕೋಟಿ ರು ಗೇರಿದೆ. ಭಾರ್ತಿ ಏರ್ ಟೆಲ್ ಮೌಲ್ಯ 15,328.71 ಕೋಟಿ ರು ಹೆಚ್ಚಿಸಿಕೊಂಡು 2,99,507.71 ಕೋಟಿ ರು ಗೇರಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯ 35,750.35 ಕೋಟಿ ರು ಕುಸಿತ ಕಂಡು 7,83,723.87 ಕೋಟಿ ರು ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 24,755.52 ಕೋಟಿ ರು ಕುಸಿತವಾಗಿ 12,56,889.45 ಕೋಟಿ ರು ಆಗಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್‌ಟೆಲ್.


Click it and Unblock the Notifications