ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ಇಂದು (ಜನವರಿ 13) ವಿದ್ಯುಕ್ತ ಚಾಲನೆ ದೊರತಿದೆ.ಇಂದಿನಿಂದ ಫೆಬ್ರವರಿ 26ರ ವರೆಗೆ 44 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ. 45 ಕೋಟಿಗೂ ಅಧಿಕ ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಭಾರೀ ಬಿಗಿ ಭದ್ರೆತೆಯನ್ನು ಕೈಗೊಳ್ಳಲಾಗಿದೆ ಹಾಗಿದ್ರೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುವುದನ್ನು ತಿಳಿಯೋಣ ಬನ್ನಿ...
ಹೌದು, ಮಹಾಕುಂಭ ಮೇಳದ ಅದ್ದೂರಿ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರಕ್ಕೆ ಬರೋಬ್ಬರಿ 2 ಲಕ್ಷ ಕೋಟಿ ರೂ. ಆದಾಯ ಬರುವ ನಿರೀಕ್ಷೆ ಮಾಡಲಾಗಿದ್ದು, ಇದು ರಾಜ್ಯದ ರಾಜ್ಯದ ನಾಮಮಾತ್ರ ಮತ್ತು ನೈಜ ಜಿಡಿಪಿ ದರವನ್ನು ಶೇ.1ರಷ್ಟು ಹೆಚ್ಚಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮಹಾಕುಂಭ ಮೇಳದ ಉತ್ಸವದಲ್ಲಿ ಸುಮಾರು 45 ಕೋಟಿ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಪ್ರತಿ ವ್ಯಕ್ತಿ ಅಂದಾಜು 5 ಸಾವಿರ ರೂ. ಖರ್ಚು ಮಾಡಿದರೂ, 2 ಲಕ್ಷ ಕೋಟಿ ರೂ. ಆದಾಯ ಸರ್ಕಾರಕ್ಕೆ ಹರಿದು ಬರಲಿದೆ.

ಮಹಾಕುಂಭ ಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲೆಯನ್ನು ನೆರೆಯ ಪ್ರದೇಶಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗಗಳು ಸೇರಿದಂತೆ ಪ್ರಯಾಗ್ರಾಜ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆದ್ದರಿಂದ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಮಹಾ ಕುಂಭ ಮೇಳದ ಭದ್ರತೆ ವ್ಯವಸ್ಥೆ ಹೇಗಿದೆ?
- ಮಹಾ ಕುಂಭ ಮೇಳದಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಪ್ರಯಾಗ್‌ರಾಜ್ ನಗರದಾದ್ಯಂತ ಭಾರೀ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.
- ಮಹಾ ಕುಂಭ ಮೇಳದಲ್ಲಿ ಅನಪೇಕ್ಷಿತ ಪೋಸ್ಟ್‌ಗಳನ್ನು ಪತ್ತೆ ಹಚ್ಚಿ, ಅವುಗಳನ್ನು ತಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
- ಇನ್ನೂ ಪ್ರಯಾಗ್ ರಾಜ್‌ಗೆ ಸಂಪರ್ಕಿಸುವ 7 ಪ್ರಮುಖ ಮಾರ್ಗಗಳಲ್ಲಿ ಪೊಲೀಸರು 102 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿ ವಾಹನಗಳು ಮತ್ತು ವ್ಯಕ್ತಿಗಳ ತಪಾಸಣೆಯನ್ನು ಸಹ ಮಾಡಲಾಗುತ್ತದೆ.
- ಮಹಾ ಕುಂಭ ಮೇಳ ನಡೆಯುವ ಸ್ಥಳದಲ್ಲಿ ಕೃತಕ ಬುದ್ಧಿಮತ್ತೆ (AI) 2,700 ಕ್ಯಾಮೆರಾಗಳು, ಮತ್ತು 113 ನೀರೊಳಗಿನ ಡ್ರೋನ್‌ಗಳ ವ್ಯವಸ್ಥೆ ಮಾಡಲಾಗಿದೆ.
- ಕುಂಭ ಮೇಳದಲ್ಲಿ 56 ಸೈಬರ್ ಯೋಧರ ತಂಡ, ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸೈಬರ್ ಸಹಾಯ ಕೇಂದ್ರಗಳನ್ನು ಸ್ಥಾಪಿನೆ ಮಾಡಲಾಗಿದೆ.
- 71 ಇನ್ಸ್‌ಪೆಕ್ಟರ್‌ಗಳು, 234 ಸಬ್ ಇನ್‌ಸ್ಪೆಕ್ಟರ್‌ಗಳು ಮತ್ತು 645 ಕಾನ್‌ಸ್ಟೆಬಲ್, 113 ಗೃಹ ರಕ್ಷಕರು ಸೇರಿದಂತೆ 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಪ್ರಯಾಗರಾಜ್ ಜಿಲ್ಲೆಗೆ ಸಂಪರ್ಕಿಸುವ 7 ಪ್ರಮುಖ ಮಾರ್ಗಗಳ 102 ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿದೆ.
- ಉತ್ತರ ಪ್ರದೇಶದ ಪೊಲೀಸರು ದೇವಾಲಯಗಳು ಸೇರಿದಂತೆ ಪ್ರಯಾಗರಾಜ್ ಸುತ್ತಲೂ ಭಾರೀ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ.
- ಕುಂಭ ಮೇಳದ ಪುಣ್ಯ ಸ್ನಾನದ ವೇಳೆ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್‌ಗಳನ್ನು ನಿರ್ಮಿಸಲಾಗಿದೆ.
ಹೆಚ್ಚಿನ ತಂತ್ರಜ್ಞಾನ ಅಳವಡಿಕೆ
ಕುಂಭ ಮೇಳದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು,ಉತ್ತರ ಪ್ರದೇಶ ಪೊಲೀಸರು ಸುಧಾರಿತ ತಾಂತ್ರಿಕ ಸಾಧನಗಳನ್ನು ಒಳಗೊಂಡಿರುವ ಬಹುಮುಖಿ ವಿಧಾನವನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಕುಂಭಮೇಳದ ಪ್ರದೇಶದ ಸುತ್ತಲೂ ಒಟ್ಟು 2,700 AI ಕ್ಯಾಮೆರಾಗಳನ್ನು ಕಾರ್ಯತಂತ್ರವಾಗಿ ಅಳವಡಿಕೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಜಲ ಮಾರ್ಗಗಳಲ್ಲಿ ಸುರಕ್ಷತೆಯನ್ನು ಕಾಪಾಡಲು 113 ನೀರೊಳಗಿನ ಡ್ರೋನ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಈ AI-ಸಕ್ರಿಯಗೊಳಿಸಿದ ಕ್ಯಾಮೆರಾಗಳು ಮತ್ತು ಡ್ರೋನ್‌ಗಳು ಪೊಲೀಸರ ಭದ್ರತೆ ಕಾರ್ಯತಂತ್ರದ ಅವಿಭಾಜ್ಯ ಅಂಶಗಳಾಗಿವೆ. ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಬರುವುದರಿಂದ ಅವರನ್ನು ರಕ್ಷಿಸಲು ಈ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೀಗೆ ಮಹಾ ಕುಂಭ ಮೇಳದ ಕಾರ್ಯಕ್ರಮ ನಡೆಯಲು ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications