ಮಹಾಶಿವರಾತ್ರಿ ಹಬ್ಬ ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಶಿವನನ್ನು ಪೂಜಿಸುವ ವಿಶೇಷವಾಗಿ ಆರಾಧಿಸುವ ದಿನವಾಗಿದೆ. ಈ ದಿನ ಶಿವನ ಪೂಜೆ, ಉಪವಾಸ, ಧ್ಯಾನ,ಜಾಗರಣೆಯನ್ನು ಮಾಡಿ ಹಬ್ಬವನ್ನು ಆಚರಣೆ ಮಾಡುತ್ತಾರೆ.ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆಯನ್ನು ಮಾಡುತ್ತಾರೆ.ಹಾಗಿದ್ರೆ ಈ ದಿನ ನಿಮ್ಮಗೆ ಬ್ಯಾಂಕ್ ವ್ಯವಹಾರ ಮಾಡಲು ಬ್ಯಾಂಕ್‌ಗಳು ತೆರೆದಿರುತ್ತವೆಯೇ ಇಲ್ಲವೋ ಹಾಗೂ ಶಾಲಾ ಮಕ್ಕಳಿಗೆ ಈ ದಿನ ರಜೆ ಇದ್ದೀಯಾ ಇಲ್ಲವೋ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 26ರ ಬುಧವಾರದಂದು ಬಂದಿದೆ.

ಮಹಾಶಿವರಾತ್ರಿ ಹಬ್ಬಕ್ಕೆ ಶಾಲೆಗಳಿಗೆ ರಜೆ ಇದ್ಯಾ?
ಫೆಬ್ರವರಿ 26 ರಂದು ಮಹಾಶಿವರಾತ್ರಿ ಆಚರಣೆಗಾಗಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ.
ಬ್ಯಾಂಕುಗಳಿಗೆ ರಜೆ ಇದ್ಯಾ? ಇಲ್ಲವೋ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಫೆಬ್ರವರಿ 26 ರ ಬುಧವಾರ ಮಹಾಶಿವರಾತ್ರಿಯಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಯಾವೆಲ್ಲಾ ರಾಜ್ಯಗಳ ಬ್ಯಾಂಕುಗಳಿಗೆ ರಜೆ ಇರುತ್ತೆ?
ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಕೇರಳ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆಯನ್ನು ನೀಡಲಾಗಿದೆ.
ಬ್ಯಾಂಕ್ ಹೊರತುಪಡಿಸಿ ಯಾವೆಲ್ಲಾ ಸೌಲಭ್ಯಗಳು ಲಭ್ಯ?
ಆನ್‌ಲೈನ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ದೇಶಾದ್ಯಂತ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತೇವೆ.
ಮಹಾಶಿವರಾತ್ರಿ ಆಚರಣೆಗಳು
ಮಹಾಶಿವರಾತ್ರಿ ಹಬ್ಬವನ್ನು ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸಿ ಬೆಳಕನ್ನು ಬೆಳೆಸುವ ಸಾಂಕೇತಿಕವಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಪೂಜಾ ಕ್ರಮಗಳು:
ಪ್ರಾತಃಕಾಲ ಎದ್ದು ಸ್ನಾನ ಮಾಡುವುದು: ಮಹಾಶಿವರಾತ್ರಿ ಉಪವಾಸ ವ್ರತವನ್ನು ಆರಂಭಿಸುವ ಮೊದಲು, ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಶುಭ್ರವಾದ ಶ್ವೇತ ವಸ್ತ್ರಗಳನ್ನು ಧರಿಸುವುದು
ಶಿವನ ಪೂಜೆ: ಶಿವಲಿಂಗವನ್ನು ಶುದ್ಧ ಮಾಡಿ ಅಭಿಷೇಕ ಮಾಡಿ ಅಲಂಕಾರ ಮಾಡುವುದು.
ಹಾಲು: ಶಿವಲಿಂಗಕ್ಕೆ ಹಾಲು ಅರ್ಪಿಸುವುದರಿಂದ ದೇವನ ಅನುಗ್ರಹವನ್ನು ಪಡೆಯಲು ಧಾರ್ಮಿಕ ನಂಬಿಕೆ ಇದೆ.
ಬಿಲ್ವಪತ್ರ: ಇದು ಶಿವನಿಗೆ ಸಮರ್ಪಿಸಿದ ಅತ್ಯಂತ ಪ್ರೀತಿ ಸೂಚಕ ಹಾಗೂ ಶುದ್ಧವಾದ ಹಣ್ಣು.
ಶ್ರೀಗಂಧ: ಪೂಜೆಗೆ ಘಮುದಾರವಾದ ಮತ್ತು ಶುಭವಾದ ಶ್ರೀಗಂಧವನ್ನು ಹಚ್ಚುವುದು.
ತುಪ್ಪ: ತುಪ್ಪವನ್ನು ಅರ್ಪಿಸುವುದರಿಂದ ಮನಸ್ಸು ಶುದ್ಧಗೊಳ್ಳುತ್ತದೆ ಮತ್ತು ಇದು ದೇವನಿಗೆ ಅತ್ಯಂತ ಪ್ರಿಯವಾಗಿದೆ.
ಸಕ್ಕರೆ: ಸಕ್ಕರೆ ಅರ್ಪಿಸುವುದು ಧಾರ್ಮಿಕವಾಗಿ ಪವಿತ್ರ ಮತ್ತು ಶಿವನ ಭಕ್ತಿಗೆ ಭಾಗ್ಯವನ್ನು ತರುತ್ತದೆ.
ಈ ಎಲ್ಲಾ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಿ, ಭಕ್ತರು ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ.
ಈ ಪೂಜೆಯ ನಂತರ, ಕೆಲವು ಮಂದಿ ಉಪವಾಸ ವ್ರತವನ್ನು 24 ಗಂಟೆಗಳವರೆಗೆ ಮುಂದುವರೆಸುತ್ತಾರೆ, ಇದರ ಮೂಲಕ ದೈಹಿಕ, ಮನೋಭಾವದ ಶುದ್ಧತೆ ಹಾಗೂ ದೇವನ ಅನುಗ್ರಹವನ್ನು ಪಡೆಯಲು ನಂಬಿಕೆ ಇರುತ್ತದೆ.
ಮಹಾಶಿವರಾತ್ರಿಯ ಮಹತ್ವ
ವರ್ಷದ ಅತ್ಯಂತ ಕತ್ತಲೆಯ ರಾತ್ರಿಯಾದ ಈ ರಾತ್ರಿಯ ಗ್ರಹಗಳ ಸ್ಥಾನಗಳು ಮಾನವ ವ್ಯವಸ್ಥೆಯಲ್ಲಿ ಶಕ್ತಿಯ ಪ್ರಬಲ ನೈಸರ್ಗಿಕ ಉತ್ಕರ್ಷವನ್ನು ಸೃಷ್ಟಿಸುತ್ತವೆ.
ರಾತ್ರಿಯಿಡೀ ಎಚ್ಚರವಾಗಿ ಮತ್ತು ಜಾಗೃತವಾಗಿರುವುದು ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಅಗಾಧ ಪ್ರಯೋಜನವನ್ನು ನೀಡುತ್ತದೆ. ಈ ಹಬ್ಬವು ಪ್ರಕೃತಿಯ ಶಕ್ತಿಗಳನ್ನು ನಮ್ಮ ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ. ಭಕ್ತರು ರಾತ್ರಿಯಿಡೀ ನಿದ್ರಿಸುವುದನ್ನು ತಪ್ಪಿಸುತ್ತಾರೆ ಮತ್ತು ಶಿವನ ಆಶೀರ್ವಾದವನ್ನು ಪಡೆಯಲು 'ಓಂ ನಮಃ ಶಿವಾಯ' ಮಂತ್ರವನ್ನು ನಿರಂತರವಾಗಿ ಜಪಿಸುತ್ತಾರೆ.ಶಿವನ ಕೃಪೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ.


Click it and Unblock the Notifications