ಮಹಾ ಶಿವರಾತ್ರಿಯನ್ನು(Maha Shivratri 2025)ಇಂದು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ.ಫಾಲ್ಗುಣ ಮಾಸ 13 ಫೆಬ್ರವರಿ 2025ರಿಂದ ಶುರುವಾಗುತ್ತದೆ. ಈ ಫಾಲ್ಗುಣ ಮಾಸವಿಡೀ ದೇವತೆಗಳ ದೇವನಾದ ಮಹಾದೇವನ ಆರಾಧನೆಗಾಗಿ ಇರುತ್ತದೆ.ಈ ಮಾಸದಲ್ಲಿ ಮಹಾದೇವನ್ನು ಪೂಜೆ ಮಾಡುವುದರಿಂದ ಭಕ್ತರಅದೃಷ್ಟ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಜೀವನದಲ್ಲಿ ಆರ್ಥಿಕ ಸಮಸ್ಯೆ ಬಂದರೆ ನಾವು ಈ ದಿನ ಏನು ಮಾಡಬೇಕು? ಶಿವರಾತ್ರಿ ದಿನ ಶಿವಪ್ಪ ನಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತಾ..? ಆರ್ಥಿಕ ತೊಂದರೆಯಿಂದ ಹೊರ ಬರಲು ಶಿವರಾತ್ರಿ ದಿನ ಏನು ಮಾಡಬೇಕು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು,ಪ್ರತಿಯೊಬ್ಬ ವ್ಯಕ್ತಿಯ ಅವಶ್ಯತೆಗೆ ಹಣವಂತೂ ಬೇಕು. ಶಿವರಾತ್ರಿಯಂದು ಆರ್ಥಿಕ ತೊಂದರೆಗಳನ್ನು ನಿವಾರಿಸಲು ಮತ್ತು ದೈವಿಕ ಆಶೀರ್ವಾದವನ್ನು ಪಡೆಯಲು ನೀವು ಶಿವ ಪೂಜೆ, ಮಂತ್ರಗಳನ್ನು ಪಠಿಸಿ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡಿದ್ದರೆ ನಿಮ್ಮ ಹಣಕಾಸಿನ ಚಿಂತೆಗೆ ವಿದಾಯ ಹೇಳಬಹುದು ಇದರ ಜೊತೆಗೆ ಮಹಾ ಶಿವರಾತ್ರಿಯಂದು ಕೆಲವು ಪರಿಹಾರದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಆರ್ಥಿಕ ಪ್ರಗತಿಯನ್ನು ಹೊಂದಬಹುದು. ಜೊತೆಗೆ ಶಾಂತಿ, ನೆಮ್ಮದಿ ಕೂಡ ಇರುತ್ತದೆ ಎಂಬ ನಂಬಿಕೆ ಇದೆ.

ಹಿಂದೂಗಳ ಪ್ರವಿತ್ರವಾದ ಹಬ್ಬವಾದ ಮಹಾ ಶಿವರಾತ್ರಿಯನ್ನ ಭಕ್ತರು ಆಧ್ಯಾತ್ಮಿಕ ಮತ್ತು ಭೌತಿಕ ಸಮೃದ್ಧಿಯನ್ನು ಬಯಸಿ ರಾತ್ರಿಯಿಡೀ ಶಿವನಿಗೆ ಅರ್ಪಿತವಾದ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ದಿನ ಶಿವ ದೇವಾಲಯಗಳಲ್ಲಿ ಶಿವನಿಗೆ ಅಭಿಷೇಕ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಮಾಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ದಿನದ ಆಚರಣೆಗಳು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಮತ್ತು ದೈವಿಕ ಆಶೀರ್ವಾದಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಕ್ತರಿಗೆ ನಂಬಿಕೆಯಿದೆ.
ಶಿವರಾತ್ರಿ ದಿನ ಶಿವ ಲಿಂಗಕ್ಕೆ ಹಾಲು, ಜೇನುತುಪ್ಪ,ಸಕ್ಕರೆ, ಮೊಸರು, ಶ್ರೀಗಂಧ ವನ್ನು ಬಳಸಿಕೊಂಡು ಅಭಿಷೇಕ ಮಾಡುತ್ತಾರೆ. ಬಿಲ್ವ ಪತ್ತೆ, ಹೂವುಗಳನ್ನು ಶಿವಲಿಂಗಕ್ಕೆ ಅಂಲಕಾರ ಮಾಡಿ ಶಿವನ ನೈವೇದ್ಯಕ್ಕೆ ತಂಬಿಟ್ಟು ಶಿವನಿಗೆ ಪ್ರಿಯವಾದ ಆಹಾರಗಳನ್ನು ಇಟ್ಟು ಪೂಜೆ ಮಾಡುತ್ತಾರೆ.
ಬಿಲ್ವ ಪತ್ರೆಗಳು ಮತ್ತು ನೈವೇದ್ಯಗಳ ಮಹತ್ವ
ಮಹಾ ಶಿವರಾತ್ರಿಯಂದು ಶಿವ ಪೂಜೆಯ ಒಂದು ಪ್ರಮುಖ ಭಾಗವೆಂದರೆ ಹಾಲು, ಹಣ್ಣುಗಳು ಮತ್ತು ಶ್ರೀಗಂಧದೊಂದಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದು. ಈ ಆಚರಣೆಯಿಂದ ದೈವಿಕ ಅನುಗ್ರಹವನ್ನು ಸಿಗುತ್ತದೆ. ಮತ್ತು ಆರ್ಥಿಕ ತೊಂದರೆಗಳನ್ನು ನಿವಾರಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ವೃತ್ತಿ ಬೆಳವಣಿಗೆ ಮತ್ತು ವ್ಯವಹಾರ ಯಶಸ್ಸಿಗೆ ಕನಿಷ್ಠ 108 ಬಾರಿ ಓಂ ನಮಃ ಶಿವಾಯ ಜಪಿಸುವುದು ಸೂಕ್ತ. ದಾನ ಮತ್ತು ಆರ್ಥಿಕ ಸಮೃದ್ಧಿ ಭಕ್ತರು ಹಾಲು, ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ಹಣ್ಣುಗಳಂತಹ ಅಗತ್ಯ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು.
ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಮಾಡುವ ದಾನ ಕಾರ್ಯಗಳು ಜೀವಿತಾವಧಿಯ ಸಮೃದ್ಧಿಯನ್ನು ನೀಡುತ್ತದೆ. ಮತ್ತು ಆರ್ಥಿಕ ಸ್ಥಿರತೆಯಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ.
ಆರ್ಥಿಕ ಸಂಕಷ್ಟಗಳಿಂದ ಬಳಲುತ್ತಿರುವವರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸೇವಾ ಕಾರ್ಯಗಳನ್ನು ಮಾಡಲು ಮತ್ತು ದೇಣಿಗೆಗಳನ್ನು ಸಹ ನೀಡಲು ಅವಕಾಶವಿರುತ್ತದೆ.
ವಿಶೇಷ ಆಚರಣೆಗಳು ಇದರಿಂದ ಆಗುವ ಪ್ರಯೋಜನಗಳು
1. ಜೇನು ನೀರಿನ ಅಭಿಷೇಕ: ಜೀವನಲ್ಲಿ ಬರುವ ಸವಾಲುಗಳನ್ನು ನಿವಾರಿಸುತ್ತದೆ ಮತ್ತು ಶಾಂತಿಯನ್ನು ಕಾಪಾಡುತ್ತದೆ.
2. ಕಬ್ಬಿನ ರಸದ ನೈವೇದ್ಯ: ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ, ಆರ್ಥಿಕ ಸ್ಥಿರತೆಯನ್ನು ನಿರ್ವರಿಸುತ್ತದೆ.
4. ಹನುಮಾನ್ ಚಾಲೀಸ್: ಹನುಮಾನ್ ಚಾಲೀಸ್ ಪಠಿಸುವುದರಿಂದ ಕೆಲಸಕ್ಕೆ ಸಂಬಂಧಿಸಿದ ಅಡೆತಡೆಗಳು ದೂರವಾಗಿ ಯಶಸ್ಸು ದೊರೆಯುತ್ತದೆ.
ಮಹಾ ಶಿವರಾತ್ರಿ ವ್ರತವನ್ನು ಆಚರಿಸುವುದು (ಉಪವಾಸ) ಅನೇಕ ಭಕ್ತರು ಕಟ್ಟುನಿಟ್ಟಿನ ಉಪವಾಸವನ್ನು ಆಚರಿಸುತ್ತಾರೆ, ಕೇವಲ ಹಣ್ಣುಗಳು ಮತ್ತು ನೀರನ್ನು ಮಾತ್ರ ಸೇವಿಸುತ್ತಾರೆ ಮತ್ತು ಇಡೀ ರಾತ್ರಿ ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕಳೆಯುತ್ತಾರೆ. ಈ ಪದ್ಧತಿಯಿಂದ ದೈವಿಕ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ.
ಮಹಾಶಿವರಾತ್ರಿ ಪೂಜಾ ಮುಹೂರ್ತ
ಬ್ರಹ್ಮ ಮುಹೂರ್ತ: ಫೆ.26 ರಂದು ಬೆಳಿಗ್ಗೆ 05.17 ರಿಂದ 06.05 ರವರೆಗೆ
ರಾತ್ರಿ ಮೊದಲ ಪ್ರಹರ ಪೂಜಾ ಸಮಯ: ಸಂಜೆ 6.29 ರಿಂದ ರಾತ್ರಿ 9.34 ರವರೆಗೆ
ರಾತ್ರಿ ಎರಡನೇ ಪ್ರಹಾರ ಪೂಜೆ ಸಮಯ: ಫೆ. 27 ರಂದು ರಾತ್ರಿ 9.34 ರಿಂದ 12.39 ರವರೆಗೆ.
ರಾತ್ರಿ ಮೂರನೇ ಪ್ರಹಾರ ಪೂಜೆ ಸಮಯ: ಫೆ. 27ರ ಮಧ್ಯಾಹ್ನ 12. 39 ರಿಂದ ಬೆಳಿಗ್ಗೆ 3.45 ರವರೆಗೆ
ರಾತ್ರಿ ನಾಲ್ಕನೇ ಪ್ರಹಾರ ಪೂಜೆ ಸಮಯ: ಫೆ. 27 ರಂದು ಬೆಳಿಗ್ಗೆ 3. 45 ರಿಂದ ಬೆಳಿಗ್ಗೆ 6.50 ರವರೆಗೆ


Click it and Unblock the Notifications