ರಾಂಚಿ, ಏಪ್ರಿಲ್ 26: ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವ್ಯಕ್ತಿಯೊಬ್ಬರಿಗೆ ಮೆಸೇಜ್ ಮಾಡಿ 600 ರೂಪಾಯಿ ಫೋನ್‌ಪೇ ಮಾಡುವಂತೆ ಬೇಡಿಕೊಂಡಿರುವ ಘಟನೆ ನಡೆದಿದೆ. ಆದರೆ...
ಹೌದು, ಆದರೆ ಇದು ನಕಲಿ ಎಂಎಸ್ ಧೋನಿ. ಕ್ರಿಕೆಟ್ ಅಭಿಮಾನಿಗಳು ಹುಷಾರಾಗಿರಬೇಕಾದ ಸಮಯ ಇದಾಗಿದೆ. ವಂಚಕರು ಜನರನ್ನು ಮೋಸಗೊಳಿಸಲು ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಜಿ ಭಾರತೀಯ ನಾಯಕ ಎಂಎಸ್ ಧೋನಿಯಂತೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಇತ್ತೀಚಿಗೆ ವಂಚಕನೊಬ್ಬ ತನ್ನ ವ್ಯಾಲೆಟ್ ಇಲ್ಲದೆ ರಾಂಚಿಯಲ್ಲಿ ಸಿಲುಕಿಕೊಂಡಿರುವ ಎಂಎಸ್ ಧೋನಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನಿಗೆ Instagram ನಲ್ಲಿ ಸಂದೇಶ ಕಳುಹಿಸಿದ್ದಾನೆ. ವಂಚಕನು "mahi77i2" (ಧೋನಿಯ ಅಧಿಕೃತ ಹ್ಯಾಂಡಲ್ "mahi7781") ಹ್ಯಾಂಡಲ್ ಅನ್ನು ಬಳಸಿಕೊಂಡು ಮನೆಗೆ ಹೋಗಲು ₹ 600 ಫೋನ್‌ಪೇ ಮಾಡುವಂತೆ ಸಂದೇಶವನ್ನು ಕಳುಹಿಸಿದನು. ಇದನ್ನು ನಂಬಿಸಲು ವಂಚಕನು ಧೋನಿಯ ಫೋಟೋ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸ್ಲೋಗನ್ "ವಿಸ್ಲ್ ಪೋಡು" ಅನ್ನು ಕಳುಹಿಸಿದನು.
ಪೋಸ್ಟ್ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ 2,00,000 ವೀವ್ಸ್ ಪಡೆದಿದೆ. ಹಲವಾರು ಬಳಕೆದಾರರು ಈ ಬಗ್ಗೆ ಆಶ್ಛರ್ಯ ವ್ಯಕ್ತಪಡಿಸಿದ್ದಾರೆ. ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೋರಿದ್ದಾರೆ. ಜನಪ್ರಿಯ ವ್ಯಕ್ತಿಗಳ ಸೋಗಿನಲ್ಲಿ ಆನ್‌ಲೈನ್‌ನಲ್ಲಿ ವಂಚನೆಗಳು ಸಾಮಾನ್ಯವಾಗಿದೆ. ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಒಂದೇ ರೀತಿಯ ಬಳಕೆದಾರ ಹೆಸರುಗಳು, ಪ್ರೊಫೈಲ್ ಚಿತ್ರಗಳು ಮತ್ತು ಆಸಕ್ತಿಗಳಂತಹ ಮನವೊಪ್ಪಿಸುವ ತಂತ್ರಗಳನ್ನು ಬಳಸುತ್ತಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇಂದಿನ ಜಗತ್ತಿನಲ್ಲಿ, ಆನ್‌ಲೈನ್ ವಂಚನೆಗಳು ವ್ಯಾಪಕವಾಗಿ ಹರಡಿವೆ. ಜನರ ಹಣ ಕಸಿಯಲು ವಿವಿಧ ತಂತ್ರಗಳನ್ನು ಬಳಸುತ್ತಾರೆ. ನೀವು ಈ ರೀತಿಯ ಸಂದೇಶವನ್ನು ಸ್ವೀಕರಿಸಿದರೆ ಜಾಗರೂಕರಾಗಿರಿ. ನಿಮಗೆ ತಿಳಿದಿಲ್ಲದ ಯಾರಿಗಾದರೂ ಹಣವನ್ನು ಕಳುಹಿಸಬೇಡಿ ಮತ್ತು ಪ್ರತಿಕ್ರಿಯಿಸುವ ಮೊದಲು ಖಾತೆಯ ಮಾಹಿತಿಯನ್ನು ಪರಿಶೀಲಿಸಿ.


Click it and Unblock the Notifications