ಸರ್ಕಾರಿ ನೌಕರರಿಗೆ ಕಾರು ತಯಾರಿಕಾ ಕಂಪೆನಿ ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಗುರುವಾರ (ನವೆಂಬರ್ 5, 2020) ವಿವಿಧ ಅನುಕೂಲಗಳನ್ನು ಘೋಷಿಸಲಾಗಿದೆ. 11,500 ರುಪಾಯಿ ತನಕ ಹೆಚ್ಚುವರಿ ನಗದು ರಿಯಾಯಿತಿ, ಕಡಿಮೆ ಬಡ್ಡಿ ದರ ಮತ್ತು ಸುಲಭ ಇಎಂಐಗಳ ಆಫರ್ ಗಳನ್ನು ನೀಡುತ್ತಿದೆ.
'Sarcar 2.0' ಕಾರ್ಯಕ್ರಮದ ಅಡಿಯಲ್ಲಿ ಎಲ್ಲ ಸರ್ಕಾರಿ ನೌಕರರೂ 11,500 ರುಪಾಯಿ ತನಕ ಹೆಚ್ಚುವರಿ ನಗದು ರಿಯಾಯಿತಿಗೆ ಅರ್ಹರು. ಶೂನ್ಯ ಪ್ರೊಸೆಸಿಂಗ್ ಮತ್ತು ಪೂರ್ವಪಾವತಿ ಶುಲ್ಕ, ಕಡಿಮೆ ಬಡ್ಡಿ ದರ 7.25%ನಿಂದ ಆರಂಭವಾಗುತ್ತದೆ ಎಂದು ಕಂಪೆನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗ ಹಬ್ಬದ ಸೀಸನ್ ಅನುಕೂಲ ಕೂಡ ಇದೆ. ಎಂಟು ವರ್ಷದ ತನಕ ಮರುಪಾವತಿ ಅವಧಿ ದೊರೆಯುತ್ತದೆ. ವೈಯಕ್ತಿಕ ಬಳಕೆ ವಾಹನಗಳಿಗೆ ತಿಂಗಳ ಇಎಂಐ ಅತ್ಯಂತ ಕನಿಷ್ಠ ಮೊತ್ತವಾದ 799 ರುಪಾಯಿ ಇದ್ದು, ಕೆಲವು ಯೋಜನೆಗಳನ್ನು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಒದಗಿಸಲಾಗುತ್ತಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಡೀಲರ್ ನ ಸಂಪರ್ಕಿಸಿ, ಈ ಆಫರ್ ಗಳನ್ನು ಪಡೆಯಬಹುದು. ಕಾಂಟ್ಯಾಕ್ಟ್ ಲೆಸ್ ಪಾವತಿಗೆ ಕಂಪೆನಿ ವ್ಯವಸ್ಥೆ ಮಾಡಿಕೊಡಲಿದ್ದು, ವಿವಿಧ ಫೈನಾನ್ಷಿಯಲ್ ಟೆಕ್ನಾಲಜಿ ಕಂಪೆನಿಗಳ ಸಹಭಾಗಿತ್ವದಲ್ಲಿ ತಕ್ಷಣದ ಇಎಂಐ ವ್ಯವಸ್ಥೆ ಆಗುತ್ತದೆ ಎಂದು ತಿಳಿಸಲಾಗಿದೆ.


Click it and Unblock the Notifications