ಸುಗ್ಗಿಯ ಹಬ್ಬ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜನರು ಸಜ್ಜಾಗುತ್ತಿದ್ದಾರೆ. ನಾಳೆ ಎಲ್ಲೆಡೆಯಲ್ಲೂ ಹಬ್ಬದ ಸಡಗರ ಮನೆ ಮಾಡುತ್ತಾದೆ. ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ ಇದಾಗಿದ್ದು, ಈ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ನೀವು ನಿಮ್ಮ ಪ್ರೀತಿಪಾತ್ರಗೆ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು
ಹೌದು, ಸುಗ್ಗಿಯ ಸಂಕ್ರಾಂತಿಯಂದು ಸೂರ್ಯನು ತನ್ನ ಪಥವನ್ನು ಬದಲಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ದಿನವಾಗಿದೆ. ಪ್ರತಿಯೊಂದು ಮನೆಗಳಲ್ಲಿ ನಾಳೆ ಈ ಮಕರ ಸಂಕ್ರಾಂತಿಯಂದು ಎಳ್ಳುಬೆಲ್ಲಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚುತ್ತಾ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ, ಜೀವನದಲ್ಲಿ ಸಿಹಿಯೇ ತುಂಬಿರಲಿ ಎಂದು ಹಾರೈಸುತ್ತಾ ವರ್ಷದ ಮೊದಲ ಹಬ್ಬವನ್ನು ಬರ ಮಾಡಿಕೊಳ್ಳತ್ತಾರೆ.

ಸಂಕ್ರಾಂತಿ ಹಬ್ಬದಂದು ಶುಭಾಶಯ ತಿಳಿಸಲು ಕೆಲವು ಸಂದೇಶಗಳು ಇಲ್ಲಿವೆ
- ಹೊಸ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಿರುವ ನಿಮ್ಮ ಬಾಳಲ್ಲಿ ಸಂತಸ, ಸಮೃದ್ಧಿ ಮತ್ತು ಸುಖ - ಶಾಂತಿಯನ್ನು ದಯಪಾಲಿಸಲಿ, ಮಕರ ಸಂಕ್ರಾಂತಿಯ ಹಾರ್ಥಿಕ ಶುಭಾಶಯಗಳು.
- ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ಪ್ರೀತಿ ಪಾತ್ರರಿಗೆ ಶುಭಾಶಯಗನ್ನು ತಿಳಿಸಿ
- ಮಕರ ಸಂಕ್ರಾಂತಿಯ ಶುಭ ದಿನ ಸೂರ್ಯನು ತನ್ನ ಪಥ ಬದಲಾಯಿಸುವಂತೆ ನಿಮ್ಮೆಲ್ಲರ ಬಾಳಿನ ಪಥ ಬದಲಾಗಲಿ. ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ಕರುಣಿಸಲಿ, ಮಕರ ಸಂಕ್ರಾಂತಿ ಶುಭಾಶಯಗಳು.
- ವರ್ಷದ ಮೊದಲ ಹಬ್ಬವು ನಿಮ್ಮ ಬದುಕನ್ನು ಬಂಗಾರವಾಗಿಸಲಿ. ಜೀವನದಲ್ಲಿ ದುಃಖ ಕಳೆದು ಕೇವಲ ಸಂತೋಷವೇ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂಕ್ರಾಂತಿಯ ಶುಭಾಶಯಗಳು.
- ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ. ಮಕರ ಸಂಕ್ರಾಂತಿ ಶುಭಾಶಯಗಳು.
- ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಬಣ್ಣಗಳನ್ನು ತರಲಿ. ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ರಾಜ್ಯಗಳಾದ್ಯಂತ ಮಕರ ಸಂಕ್ರಾಂತಿ ಆಚರಣೆಗಳು
ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಅನೇಕ ಪ್ರದೇಶಗಳಲ್ಲಿ ಜನರು ಈ ಹಬ್ಬವನ್ನು ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸಿ ಆಚರಣೆ ಮಾಡುತ್ತಾರೆ. ಹಾಗೂ ಗುಜರಾತಿನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ಸಂಭ್ರಮ ಸಡಗರದಿಂದ ಜೋರಾಗಿ ಆಚರಣೆ ಮಾಡುತ್ತಾರೆ. ಬಹಳಷ್ಟು ಪ್ರವಾಸಿಗರು ಗಾಳಿಪಟ ಉತ್ಸವವನ್ನು ಅನುಭವಿಸಲು ಪ್ರಸಿದ್ಧ ರಣ್ ಆಫ್ ಕಚ್‌ಗೆ ಭೇಟಿ ನೀಡುತ್ತಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ, ಈ ಹಬ್ಬವನ್ನು ಲೋಹ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಜನವರಿ 13 ಅಥವಾ ಜನವರಿ 14 ರಂದು ದೀಪೋತ್ಸವ, ನೃತ್ಯ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದರೊಂದಿಗೆ ಹೊಸ ಸುಗ್ಗಿಯ ಮತ್ತು ವರ್ಷವನ್ನು ಆಚರಿಸಲಾಗುತ್ತದೆ. ಈ ದಿನದ ಅತ್ಯಂತ ಜನಪ್ರಿಯ ಆಹಾರವೆಂದರೆ ತಿಲ್ ಗುರ್ (ಎಳ್ಳು ಮತ್ತು ಬೆಲ್ಲದ ಮಿಶ್ರಣ) ಮಾಡಿ ಇತರರಿಗೆ ಕೊಡುವ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.ವಿಶೇಷವಾಗಿ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಈ ರೀತಿಯ ಆಚರಣೆಗಳನ್ನು ಹೆಚ್ಚಾಗಿ ಮಾಡುತ್ತಾರೆ. ಭಾರತದ ದಕ್ಷಿಣದಲ್ಲಿ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ತಿನ್ನುವ ಪೊಂಗಲ್ ಅನ್ನು ಜನರು ಇಷ್ಟಪಡುತ್ತಾರೆ. ಜನರು ಗಂಗಾನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ, ಇದು ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂಬ ನಂಬಿಕೆ ಇದೆ. ಸಂಕ್ರಾಂತಿಯಂದು ಭಕ್ತರು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸಮೃದ್ಧವಾದ ಫಸಲುಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಭಾರತದಲ್ಲಿ ಪ್ರಾದೇಶಿಕ ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಗುಜರಾತ್‌ನಲ್ಲಿ ಉತ್ತರಾಯಣ: ಗುಜರಾತ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಗಾಳಿಪಟ ಉತ್ಸವವು ಅದ್ಭುತವಾದ ಆಚರಣೆಯಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರ ಗಮನ ಸಳೆಯುತ್ತದೆ. ಈ ದಿನ ಆಕಾಶವು ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳ ಮೂಲಕ ಸಾವಿರಾರು ಗಾಳಿಪಟಗಳಿಂದ ತುಂಬಿರುತ್ತದೆ.
ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಪೊಂಗಲ್: ಈ ಹಬ್ಬವನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಪೊಂಗಲ್ (ಸಿಹಿ ಅನ್ನ) ತಯಾರಿಸಿ ಸೂರ್ಯ ದೇವರಿಗೆ ಅರ್ಪಿಸುತ್ತಾರೆ. ಕುಟುಂಬದ ಜೊತೆ ಸವಿದು ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳ ಎಲ್ಲಾರು ಮಾಡಿ ಹಬ್ಬದ ಆಚರಣೆಯನ್ನು ಮಾಡುತ್ತಾರೆ
ಪಂಜಾಬ್‌ನಲ್ಲಿ ಲೋಹ್ರಿ: ಈ ಹಬ್ಬವನ್ನು ದೀಪೋತ್ಸವ, ಭಾಂಗ್ರಾ ಮತ್ತು ಗಿಡ್ಡಾ ನೃತ್ಯಗಳು ಮತ್ತು ತಿಲ್ ಮತ್ತು ಬೆಲ್ಲದಂತಹ ವಿಶೇಷ ಆಹಾರಗಳಿಂದ ಅಲ್ಲಿನ ಜನರು ಆಚರಣೆ ಮಾಡುತ್ತಾರೆ.
ಅಸ್ಸಾಂನಲ್ಲಿ ಮಾಗ್ ಬಿಹು: ಅಸ್ಸಾಂನ ಜನರು ಹಬ್ಬಗಳು, ದೀಪೋತ್ಸವಗಳು ಮತ್ತು ಸಾಂಪ್ರದಾಯಿಕ ಆಟಗಳೊಂದಿಗೆ ಆಚರಿಸುತ್ತಾರೆ. ಇದು ಅಸ್ಸಾಮಿ ಹೊಸ ವರ್ಷವನ್ನು ಸಹ ಸೂಚಿಸುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿ ಆಚರಣೆಗಳು: ಕರ್ನಾಟಕದಲ್ಲಿ ಜನರು 'ಎಳ್ಳು ಬೆಲ್ಲ' (ಎಳ್ಳು ಮತ್ತು ಬೆಲ್ಲ) ತಯಾರಿಸುತ್ತಾರೆ ಹಾಗೂ ಅದನ್ನು ಇತರರಿಗೆ ನೀಡುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಈ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications