ದೇಶದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಶತ ಪ್ರಯತ್ನ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರ ಬದಲು ಭಾರತದಲ್ಲೇ ತಯಾರು ಮಾಡಲು ಚಿಂತನೆ ನಡೆಸುತ್ತಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆಗೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಭಾರತದಲ್ಲೇ ಇಂಥ ಉಪಕರಣಗಳನ್ನು ತಯಾರಿಸುವತ್ತ ಗಮನ ಹರಿಸಲಾಗುವುದು ಎಂದೂ ಸಚಿವಾಲಯ ಹೇಳಿದೆ.

ಇನ್ನೊಂದೆಡೆ, ಇಂಗ್ಲೆಂಡ್, ಮಲೇಷ್ಯಾ, ಫ್ರಾನ್ಸ್, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕಾದಿಂದ ಪರೀಕ್ಷಾ ಕಿಟ್‌ಗಳನ್ನು ತರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಕಚೇರಿಗಳು ಕೊಟೇಷನ್ ಪಡೆದುಕೊಂಡಿವೆ.
ಪರೀಕ್ಷಾ ಪ್ರಕ್ರಿಯೆಗಳನ್ನು ಮತ್ತಷ್ಟು ವೇಗಗೊಳಿಸಲು ಕೇರಳ, ಛತ್ತೀಸ್‌ಗಡ, ಪಂಜಾಬ್, ದೆಹಲಿ ಮತ್ತು ತಮಿಳುನಾಡಿನಂತಹ ರಾಜ್ಯಗಳು ಸಾಮೂಹಿಕ ಪರೀಕ್ಷೆಗೆ ತೆರಳಲು ಸಿದ್ಧವಾಗಿವೆ. ಆದರೆ ಅಗತ್ಯ ಸಂಖ್ಯೆಯ ಪರೀಕ್ಷಾ ಕಿಟ್‌ಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿಲ್ಲ. ಉದಾಹರಣೆಗೆ, ತಮಿಳುನಾಡಿನಲ್ಲಿ ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಲು 4 ಲಕ್ಷ ಕಿಟ್‌ಗಳನ್ನು ಬೇಕಾಗಿದೆ.


Click it and Unblock the Notifications