For Quick Alerts
ALLOW NOTIFICATIONS  
For Daily Alerts

ಟಾಟಾ ಪವರ್‌ನಲ್ಲಿ ಹೂಡಿಕೆ ಮಾಡಲು ಬರುತ್ತಿದೆ ಮಲೇಷಿಯಾದ ಪೆಟ್ರೋನಾಸ್

|

ಮುಂಬೈ: ಟಾಟಾ ಪವರ್‌ನ ಯೋಜಿತ, ನವೀಕರಿಸಬಹುದಾದ ಇಂಧನ ಮೂಲಸೌಕರ್ಯ ಹೂಡಿಕೆ ಟ್ರಸ್ಟ್ (ಇನ್ವಿಟ್) ನಲ್ಲಿ ಪ್ರಮುಖ ಹೂಡಿಕೆದಾರರಾಗಲು ಮಲೇಷಿಯಾ ತೈಲ ಮತ್ತು ಅನಿಲ ಕಂಪನಿ 'ಪೆಟ್ರೋನಾಸ್' ಟಾಟಾ ಗ್ರೂಪ್‌ನೊಂದಿಗೆ ಮಾತುಕತೆ ನಡೆಸಿದೆ.

 

ಟಾಟಾ ಪವರ್ ರಿನ್ಯೂಯಬಲ್ ಎನರ್ಜಿ ಲಿಮಿಟೆಡ್ (ಟಿಪಿಆರ್ಇಎಲ್) ಟಾಟಾ ಪವರ್ ನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟ ಅಂಗಸಂಸ್ಥೆಯಾಗಿದೆ. ಟಾಟಾ ಪವರ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 500-750 ಮಿಲಿಯನ್ ಡಾಲರ್ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಹೊಸ ಹೂಡಿಕೆದಾರರೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.

 

ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಟಾಟಾ ಮೋಟಾರ್ಸ್ 12 ಪರ್ಸೆಂಟ್ ಗಳಿಕೆಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ; ಟಾಟಾ ಮೋಟಾರ್ಸ್ 12 ಪರ್ಸೆಂಟ್ ಗಳಿಕೆ

ಪೆಟ್ರೋನಾಸ್ ಅವರೊಂದಿಗಿನ ಮಾತುಕತೆಗಳು ಪ್ರಗತಿ ಸಾಧಿಸಿವೆ ಮತ್ತು ಮಲೇಷಿಯನ್ನರು ಈ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಪೆಟ್ರೋನಾಸ್ ಸುಮಾರು 200-250 ಮಿಲಿಯನ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಆದರೆ, ಮಾತುಕತೆಗಳು ಇನ್ನೂ ಅಂತಿಮಗೊಂಡಿಲ್ಲ ಎಂದು ಟಾಟಾ ಪವರ್ ತಿಳಿಸಿದೆ.

ಟಾಟಾ ಪವರ್‌ನಲ್ಲಿ ಹೂಡಿಕೆ ಮಾಡಲು ಬರುತ್ತಿದೆ ಮಲೇಷಿಯಾದ ಪೆಟ್ರೋನಾಸ್

ಟಾಟಾ ಗ್ರೂಪ್ ತನ್ನ 3.8 ಗಿಗಾವಾಟ್ ಸೌರ ವಿದ್ಯುತ್ ಮತ್ತು ಪವನ ವಿದ್ಯುತ್‌ಗಾಗಿ 2.2 ರಿಂದ 2.5 ಬಿಲಿಯನ್ ಡಾಲರ್ ಹೂಡಿಕೆ ಎದುರು ನೋಡುತ್ತಿದೆ. ಪೆಟ್ರೋನಾಸ್ ತನ್ನ ಬಂಡವಾಳ ವೆಚ್ಚದ ಶೇಕಡಾ 5 ರಷ್ಟು ನವೀಕರಿಸಬಹುದಾದ ಇಂಧನಕ್ಕೆ ಹರಿಸುವಲ್ಲಿ ಗಮನಹರಿಸಿದೆ. ಭಾರತದಲ್ಲಿ, ಪೆಟ್ರೋನಾಸ್ 2019 ರ ಏಪ್ರಿಲ್‌ನಲ್ಲಿ ನ್ಯೂಯಾರ್ಕ್ ಮೂಲದ ಐ ಸ್ಕ್ವೇರ್ ಕ್ಯಾಪಿಟಲ್‌ನಿಂದ ಆಂಪ್ಲಸ್ ನ್ನು ಸ್ವಾಧೀನಪಡಿಸಿಕೊಂಡಿತು. ಆನ್-ಸೈಟ್ ಸೌರ ಯೋಜನೆಗಳನ್ನು ಸ್ಥಾಪಿಸುವ ಮೂಲಕ ತನ್ನ ಗ್ರಾಹಕರಿಗೆ ನವೀಕರಿಸಬಹುದಾದ ಇಂಧನ ಶಕ್ತಿಯನ್ನು ಒದಗಿಸುವಲ್ಲಿ ಪೆಟ್ರೋನಾಸ್ ಮುಂಚೂಣಿಗೆ ಬರುತ್ತಿದೆ ಎಂದು ವರದಿಗಳು ಹೇಳಿವೆ.

English summary

Malaysian Petronas Company Eye On Invest In Tata Renewable Energy

Malaysian Petronas Company Eye On Invest In Tata Renewable Energy. Tata Power Searching For Investors In Renewable Energy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X