ಬೆಂಗಳೂರು, ಜೂನ್ 11: ಸೋಮವಾರ ರಾತ್ರಿ ಬೆಂಗಳೂರಿನ ನಮ್ಮ ಮೆಟ್ರೋ (namma metro) ನಿಲ್ದಾಣದ ನೇರಳೆ ಮಾರ್ಗದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8:56 ರ ಸುಮಾರಿಗೆ ಸಂಭವಿಸಿದ ಈ ಘಟನೆಯು ನೇರಳೆ ಮಾರ್ಗದಲ್ಲಿ ಅರ್ಧ ಗಂಟೆಗಳ ಕಾಲ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿತು.
ಆ ವ್ಯಕ್ತಿಯನ್ನು ಸಾಗರ್ ಎಂದು ಗುರುತಿಸಲಾಗಿದ್ದು, 30ರ ಹರೆಯದ ಬೆಂಗಳೂರು ಮೂಲದವನು ಎಂದು ತಿಳಿದು ಬಂದಿದೆ. ಮೆಟ್ರೋ ರೈಲು ಸಮೀಪಿಸುತ್ತಿರುವ ರೈಲಿನ ಮುಂದೆ ಹಾರಿದರು. ಆಗ ಆ ವ್ಯಕ್ತಿಯನ್ನು ಸಿಲಿಕಾನ್ ಸಿಟಿ ಮೂಲದ ಸಾಗರ್ ಎಂದು ಗುರುತಿಸಲಾಯಿತು. BMRCL ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವಾಣ್ ಘಟನೆಯ ಬಗ್ಗೆ ಸಾಗರ್ ಎಂಬ ವ್ಯಕ್ತಿಯ ತಲೆಗೆ ಗಾಯವಾಗಿದೆ. ಅವರು ಪ್ರಜ್ಞೆ ತಪ್ಪಿಲ್ಲ. ಆದರೆ, ತಲೆಗೆ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ.

ಘಟನೆಯ ಕುರಿತು ಟ್ವೀಟ್ ಮಾಡಿರುವ ಮೆಟ್ರೋ ಪ್ರಯಾಣಿಕರೊಬ್ಬರು, ಸಾಗರ್ ಅವರು ಮೆಟ್ರೋ ರೈಲಿನೊಳಗಿದ್ದರು. ರೈಲು ಹೊಸಹಳ್ಳಿ ನಿಲ್ದಾಣದಲ್ಲಿ ಬಾಗಿಲು ತೆರೆಯಲಿಲ್ಲ. ನಮಗೆ ಹೊರಗೆ ದೊಡ್ಡ ಶಬ್ದ ಕೇಳಿ ಬಂತು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಗರ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್ ಗಿರೀಶ್ ತಿಳಿಸಿದ್ದಾರೆ. ಅವರ ತಲೆಗೆ ಸಣ್ಣ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆಯ ನಂತರ, ಬಿಎಂಆರ್‌ಸಿಎಲ್ ಮುನ್ನೆಚ್ಚರಿಕೆ ಕ್ರಮವಾಗಿ ಆರು ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಕೆಎಸ್‌ಆರ್ ಬೆಂಗಳೂರು, ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ ಮತ್ತು ದೀಪಾಂಜಲಿ ನಗರ - 30 ನಿಮಿಷಗಳ ಕಾಲ ಮೆಟ್ರೋ ಸಂಚಾರ ನಿಲ್ಲಿಸಲಾಗಿತ್ತು.
ಇದು ಮೂರನೇ ಘಟನೆ:
ಕೇರಳದ 23 ರ ಯುವಕ ಜನವರಿ 5 ರಂದು ಜಾಲಹಳ್ಳಿ ನಿಲ್ದಾಣದಲ್ಲಿ ಮೆಟ್ರೋ ರೈಲು ಹಳಿ ಮೇಲೆ ಹಾರಿ ತೀವ್ರವಾಗಿ ಗಾಯಗೊಂಡಿದ್ದರು, ಅದೃಷ್ಟವಶಾತ್ ಅವರು ಬದುಕುಳಿದರು. ಮಾರ್ಚ್ 21 ರಂದು ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ 19 ವರ್ಷದ ಕಾನೂನು ವಿದ್ಯಾರ್ಥಿಯು ದೀಪಾಂಜಲಿ ನಗರ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟ್ರ್ಯಾಕ್‌ಗೆ ಜಿಗಿದಿದ್ದರು. ಆದರೆ ಅವರು ಬದುಕುಳಿಯಲಿಲ್ಲ.
ಈ ದುರಂತಗಳ ನಡುವೆ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಪರದೆಯ ಬಾಗಿಲುಗಳು/ಗೇಟ್‌ಗಳನ್ನು (ಪಿಎಸ್‌ಡಿಗಳು/ಪಿಎಸ್‌ಜಿಗಳು) ಸ್ಥಾಪಿಸಲು ಸಲಹೆಗಳು ಬಂದಿವೆ. ಏನೇ ಇರಲಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಆಗ್ರಹ ಕೇಳಿಬಂದಿದೆ.


Click it and Unblock the Notifications