For Quick Alerts
ALLOW NOTIFICATIONS  
For Daily Alerts

7 ಸಾವಿರ ಪಗಾರ, 132 ಕೋಟಿ ವ್ಯವಹಾರ: ಇದೊಂಥರ ತಮಾಷಿ

|

ಇಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕಿದೆ. ಇಡೀ ವರದಿಯನ್ನು ಓದಿದ ಮೇಲೆ ನಿಮ್ಮಲ್ಲಿ ಪ್ರಶ್ನೆಗಳು ಉಳಿದರೆ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಅಂಥ ಪ್ರಶ್ನೆಗಳು ಈ ವರದಿ ಮಾಡುವ ಸಂದರ್ಭದಲ್ಲೂ ಬಂದಿದ್ದು, ಉತ್ತರ ಏನೂ ಸಿಕ್ಕಿಲ್ಲ. ಆದ್ದರಿಂದ ಆಗಿರುವುದಷ್ಟನ್ನೇ ವರದಿ ಮಾಡಲಾಗುತ್ತಿದೆ.

ಆತನ ಹೆಸರು ರವಿ ಗುಪ್ತಾ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯವರು. ತಿಂಗಳಿಗೆ ಏಳು ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಅವರಿಗೇ ಮಾಹಿತಿ ಇಲ್ಲದೆ, ಅವರ ಹೆಸರಿನಲ್ಲಿ ಯಾವುದೋ ವಜ್ರದ ವ್ಯಾಪಾರ ಮಾಡುವ ಕಂಪೆನಿಯು ಖಾತೆ ತೆರೆದು, 132 ಕೋಟಿ ರುಪಾಯಿ ವ್ಯವಹಾರ ಆಗಿತ್ತಂತೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿದ್ದು ಏಕೆ? ಕಾರಣಗಳೇನು?

 

ಆ ಕಾರಣಕ್ಕೆ ಆದಾಯ ತೆರಿಗೆ ಇಲಾಖೆಯಿಂದ 3 ಕೋಟಿಯ 49 ಲಕ್ಷ ರುಪಾಯಿ ತೆರಿಗೆ ಪಾವತಿಸುವಂತೆ ಮಾರ್ಚ್ 30, 2019ರ ಗಡುವು ನೀಡಲಾಗಿತ್ತು. ಆ ನಂತರ ಗಡುವು ವಿಸ್ತರಣೆ ಮಾಡಿ, ಜನವರಿ 17ರ 2020ನೇ ಇಸವಿಯ ತನಕ ನೀಡಲಾಯಿತು.

7 ಸಾವಿರ ಪಗಾರ, 132 ಕೋಟಿ ವ್ಯವಹಾರ: ಇದೊಂಥರ ತಮಾಷಿ

ಸಂತ್ರಸ್ತ ರವಿ ಗುಪ್ತಾ ಮಹಾರಾಷ್ಟ್ರ, ಮಧ್ಯಪ್ರದೇಶ ಪೊಲೀಸರಿಗೆ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ದೂರು ನೀಡಿದ್ದು, ಈ ವರೆಗೆ ಯಾವ ಸಂಸ್ಥೆಯಿಂದಲೂ ಏನೂ ಪ್ರಯೋಜನ ಆಗಿಲ್ಲ. ಆದರೆ ಏಳು ಸಾವಿರ ಪಗಾರ ಎಣಿಸುತ್ತಿದ್ದ ರವಿ ಗುಪ್ತಾ ಖಾತೆಯಲ್ಲಿ ನೂರಾ ಮೂವತ್ತೆರಡು ಕೋಟಿ ವ್ಯವಹಾರ ಮಾಡಿದ್ದು ಯಾರು ಅಥವಾ ಹೇಗೆ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದಿದೆ.

ಆದರೆ, ರವಿ ಗುಪ್ತಾ ಖಾತೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯವಹಾರ ಆಗುತ್ತಿದ್ದದ್ದು ಎಂಟು- ಒಂಬತ್ತು ವರ್ಷದ ಹಿಂದೆ. ಆಗ ಗುಪ್ತಾ ವಯಸ್ಸು ಇಪ್ಪತ್ತೊಂದು. ಇಂದೋರ್ ನಲ್ಲಿ ಏಳು ಸಾವಿರ ರುಪಾಯಿ ಸಂಬಳ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ರವಿ ಗುಪ್ತಾಗೇ ತಿಳಿಯದಂತೆ ಮುಂಬೈನ ಬ್ಯಾಂಕ್ ವೊಂದರಲ್ಲಿ ಅವರ ಹೆಸರಲ್ಲಿ ಖಾತೆ ತೆರೆದು, ನೂರಾರು ಕೋಟಿ ವ್ಯವಹಾರ ನಡೆದಿದೆ.

ರವಿ ಗುಪ್ತಾಗೆ ಸೇರಿದ ಆಸ್ತಿ ವಶಪಡಿಸಿಕೊಳ್ಳುವುದಾಗಿ ಆದಾಯ ತೆರಿಗೆ ಇಲಾಖೆಯಿಂದ ಎಚ್ಚರಿಕೆಯನ್ನೂ ನೀಡಲಾಗಿದೆ. "ನನಗೂ ಈ ವ್ಯವಹಾರಕ್ಕೂ ಸಂಬಂಧವೇ ಇಲ್ಲ. ಸರಿಯಾದ ತನಿಖೆ ನಡೆಸಿ, ನನಗೆ ನ್ಯಾಯ ಕೊಡಿಸಿ" ಎನ್ನುತ್ತಿದ್ದಾರೆ ರವಿ ಗುಪ್ತಾ.

English summary

Man Was Earning 7 Thousand, Gets Notice To Explain 132 Crore Transaction

Ravi Gupta, from Bhind district, MP, was summoned by I-T department to explain the transaction worth of ₹132 crore, made by his account in 2011-12.
Story first published: Thursday, January 16, 2020, 20:44 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more