ಬೆಂಗಳೂರು, ಮೇ 20: ನ್ಯಾಚುರಲ್ಸ್ ಐಸ್‌ಕ್ರೀಮ್ ಸಂಸ್ಥಾಪಕ ರಘುನಂದನ್ ಶ್ರೀನಿವಾಸ್ ಕಾಮತ್ ಶುಕ್ರವಾರ ರಾತ್ರಿ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಿಧನರಾದರು.
ಅಂಧೇರಿ ಪಶ್ಚಿಮದ ಅಂಬೋಲಿಯಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅವರನ್ನು "ಭಾರತದ ಐಸ್ ಕ್ರೀಮ್ ಮ್ಯಾನ್" ಎಂದು ಕರೆಯಲಾಗುತ್ತಿತ್ತು. ಅವರ ತಂದೆ ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವು ಮಾರಾಟ ಮಾಡುತ್ತಿದ್ದರು. ತನ್ನ ವ್ಯಾಪಾರವನ್ನು ನಡೆಸಲು ತನ್ನ ತಂದೆಗೆ ಸಹಾಯ ಮಾಡುವ ಮೂಲಕ ಕಾಮತ್ ತಮ್ಮ ವ್ಯಾಪಾರದ ಪ್ರಯಾಣವನ್ನು ಪ್ರಾರಂಭಿಸಿದರು.

14ನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ ಕಾಮತ್ ತನ್ನ ಸಹೋದರನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿಂದ ಅವನಿಗೆ ಐಸ್ ಕ್ರೀಮ್‌ಗಳಿಗೆ ಹಣ್ಣಿನ ರುಚಿಯನ್ನು ಸೇರಿಸುವ ಆಲೋಚನೆ ಬಂದಿತು. ಅವರ ಮೊದಲ ಐಸ್ ಕ್ರೀಮ್ ಪಾರ್ಲರ್ ಅನ್ನು 1984 ರಲ್ಲಿ ಮುಂಬೈನಲ್ಲಿ ಆರು ಸಿಬ್ಬಂದಿಗಳೊಂದಿಗೆ ಪ್ರಾರಂಭಿಸಲಾಯಿತು.
ಅದು ಸುಮಾರು 12 ರುಚಿಗಳನ್ನು ಒಳಗೊಂಡಿತ್ತು. ಅವರ ಐಸ್ ಕ್ರೀಮ್ ಮುಂಬೈನಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಇದು ಅವರನ್ನು 1994 ರ ವೇಳೆಗೆ ಮುಂಬೈನಲ್ಲಿ ಐದು ಹೊಸ ಮಳಿಗೆಗಳನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಈಗ ನ್ಯಾಚುರಲ್ ಐಸ್ ಕ್ರೀಮ್ಸ್ ಭಾರತದಲ್ಲಿ 15 ನಗರಗಳಲ್ಲಿ 165 ಮಳಿಗೆಗಳನ್ನು ಹೊಂದಿದೆ.
ಮೊದಲಿಗೆ, ತಮ್ಮ ಹೊಟೇಲ್‌ನಲ್ಲಿ 12 ಸ್ವಾದಗಳ ಐಸ್ ಕ್ರೀಮ್ ಪರಿಚಯಿಸಿದ್ದರು. ಆದರೆ ಮುಂದೆ ಇದು ಉಪಹಾರ ಗೃಹದಿಂದ ಪೂರ್ಣ ಪ್ರಮಾಣದ ಐಸ್ ಕ್ರೀಂ ಪಾರ್ಲರ್ ಆಗಿ ಅಭಿವೃದ್ಧಿಗೊಂಡಿತು. 2020 ರಲ್ಲಿ, ನ್ಯಾಚುರಲ್ ಐಸ್ ಕ್ರೀಮ್ 300 ಕೋಟಿ ಚಿಲ್ಲರೆ ವಹಿವಾಟು ವರದಿ ಮಾಡಿದೆ. ಕೆಪಿಎಂಜಿ ಸಮೀಕ್ಷೆಯ ಪ್ರಕಾರ, ಗ್ರಾಹಕರ ತೃಪ್ತಿಗಾಗಿ ಇದು ಭಾರತದ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿದೆ.


Click it and Unblock the Notifications