ಮಾವು ಬೆಲೆಗಾರರಿಗೆ ನಿರೀಕ್ಷೆಗೂ ಮೀರಿದ ನಿರಾಸೆಯಾಗುವಂತಹ ಸುದ್ದಿ ಇದೆ. ಅದೇನೆಂದರೆ ಕರ್ನಾಟಕದಲ್ಲಿ ಈ ವರ್ಷ ಕೂಡ ಮಾವಿನ ಬೆಳೆ ಇಳುವರಿ ಗಣನೀಯವಾಗಿ ಕುಸಿತ ಕಂಡಿದೆ. ಇದು ನಿಜಕ್ಕೂ ಮಾವು ಬೆಳೆಗಾರರಿಗೆ ಬೇಸರ ತರುವಂತಾಗಿದೆ. ಈ ಹಿಂದೆ ತಾಂತ್ರಿಕ ತಜ್ಞರ ಸಮಿತಿ 12 ರಿಂದ 14 ಲಕ್ಷ ಮೆಟ್ರಿಕ್ ಟನ್ ಇಳುವರಿಯ ನಿರೀಕ್ಷೆ ವ್ಯಕ್ತಪಡಿಸಿತ್ತು. ಆದ್ರೆ ಇತ್ತೀಚೆಗೆ ಹೊರಹೊಮ್ಮಿದ ಅಂದಾಜಿನ ಪ್ರಕಾರ ಇಳುವರಿ ಕುಸಿತ ಕಂಡಿದೆ. ಅಂದರೆ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಟ್ಟಕ್ಕೆ ಇಳಿದಿದೆ. ಇದು ಮಾವು ಬೆಳೆಗಾರರ ಬದುಕು ಮೇಲೆ ಆರ್ಥಿಕವಾಗಿ ತೀವ್ರ ಪರಿಣಾಮ ಬೀರುವಂತಿದೆ.

ತಾಪಮಾನದ ಪ್ರಭಾವದಿಂದ ಇಳುವರಿ ಕುಸಿತ:
ಅಂದಹಾಗೆ ಹೂ ಬಿಡುವ ಹಂತದಲ್ಲಿರುವ ಮಾವಿನ ಮರಗಳಿಗೆ, ತಂಪಾದ ವಾತಾವರಣ ಅತಿ ಅವಶ್ಯಕ. ಆದರೆ ಈ ವರ್ಷ ಮಾತ್ರ ಜನವರಿಯಲ್ಲಿ ಅತಿಹೆಚ್ಚು ತಾಪಮಾನದ ಬಿಸಿಯುತ್ತು. ರಾಜ್ಯದ ಹಲವು ಭಾಗಗಳಲ್ಲಿ ಏನಂದರೂ 33 ರಿಂದ 34 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಈ ಪರಿಣಾಮ, ಮರಗಳು ಚೆನ್ನಾಗಿ ಹೂಬಿಡಲಿಲ್ಲ. ಮಾವಿನ ಮರದಲ್ಲಿ ಹೂವಿನ ಕೊರತೆಯಾಗಿ ಹಣ್ಣುಗಳು ಬೆಳೆಯುವಲ್ಲಿ ವಿಫಲವಾದವು. ಮಾವಿನ ಹಣ್ಣುಗಳ ಬದಲು ಹೊಸ ಎಲೆಗಳು ಚಿಗುರಿ, ಮರದಲ್ಲಿ ಹಣ್ಣು ಮತ್ತು ಸಸ್ಯಕ ಬೆಳವಣಿಗೆಯ ನಡುವೆ ಆಹಾರ ಸ್ಪರ್ಧೆ ಉಂಟುಮಾಡಿದವು. ಇದರಿಂದಾಗಿ ಇಳುವರಿ ಮೇಲೆ ತೀವ್ರ ಪರಿಣಾಮ ಬಿದ್ದಿದೆ ಎಂದು ಕೆಎಸ್‌ಎಂಡಿಎಂಸಿ ವ್ಯವಸ್ಥಾಪಕ ನಿರ್ದೇಶಕ ಸಿಜಿ ನಾಗರಾಜು ಸ್ಪಷ್ಟಪಡಿಸಿದ್ದಾರೆ.
ಹವಾಮಾನ ಸಮಸ್ಯೆ ಮುಂದುವರಿಕೆ:
ಇನ್ನು ಈ ವರ್ಷ ರಾಜ್ಯದ ಹವಾಮಾನದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಹೀಗಾಗಿ ಕೀಟ ಬಾಧೆ ಗಂಭೀರ ಸಮಸ್ಯೆಯಾಗಿ ಹೊರ ಹೊಮ್ಮಿದೆ. ಈ ಬಾರಿ ಕೀಟಗಳ ಕಾಟ ಕಡಿಮೆಯಾಗಿರುವುದರಿಂದ, ರೈತರಿಗೆ ಸ್ವಲ್ಪ ಆತ್ಮಸ್ಥೈರ್ಯ ಸಿಕ್ಕಿದೆ. ಮರ ಜಿಗಿಯುವ ಹುಳುಗಳು ರೈತರು ತಾಂತ್ರಿಕ ಮಾರ್ಗಸೂಚಿಗಳನ್ನನುಸರಿಸಿದ ಕಾರಣ ಮತ್ತು ತಡೆಯ ಕ್ರಮಗಳನ್ನು ತೆಗೆದುಕೊಂಡ ಕಾರಣದಿಂದ, ಕೀಟ ಹಾಗೂ ರೋಗಗಳ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ತೀವ್ರವಾದ ಉಷ್ಣತೆಯಿಂದಾಗಿ, ಮತ್ತೊಮ್ಮೆ ಇಳುವರಿಯಲ್ಲಿ ಬಿರುಕು ಉಂಟಾಗಿದೆ ಎಂಬುದು ಸ್ಪಷ್ಟವಾಗಿದೆ.
ಮಾವು ಬೆಳೆಗಾರರಿಗೆ ಸಂಕಷ್ಟ:
ಅಂದಹಾಗೆ ಕಳೆದ ನಾಲ್ಕೈದು ವರ್ಷಗಳಿಂದ ಹವಾಮಾನ ವೈಪರೀತ್ಯ ಎನ್ನುವುದನ್ನು ನೋಡಬಹುದಾಗಿದೆ. ಹವಾಮಾನ ವೈಪರೀತ್ಯ ಮತ್ತು ಕೀಟ ಬಾಧೆಯಿಂದ ರೈತರಿಗೆ ಲಾಭದಾಯಕ ವರ್ಷ ಅನುಭವವಾಗಿಲ್ಲ. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರೆದಿದೆ. ಕನಕಪುರ-ಚನ್ನಪಟ್ಟಣದಲ್ಲಿ ಈ ವರ್ಷ ಮಾವಿನ ಇಳುವರಿ 70% ರಷ್ಟು ಕಡಿಮೆಯಾಗಿದೆ ಎಂದು, ಕನಕಪುರ-ಚನ್ನಪಟ್ಟಣ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೀಶ್ ಕುಮಾರ್ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದ ಮಾವುಗಳು:
ರಾಮನಗರ ಜಿಲ್ಲೆಯ ಸೆಂಧೂರ, ರಸಪುರಿ, ಬಾದಾಮಿ (ಅಲ್ಫೋನ್ಸೋ), ಮತ್ತು ಬಂಗನ್‌ಪಲ್ಲಿ ಮಾವಿನ ಪ್ರಭೇದಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಆದರೆ ಕೋಲಾರದ ಮಾವಿನ ಹಣ್ಣುಗಳು ಮೇ ಮೊದಲ ಹದಿನೈದು ದಿನಗಳಲ್ಲಿ ಮಾತ್ರ ಆಗಮನ ಹೊಂದಲಿವೆ. ಬೆಂಗಳೂರಿನಲ್ಲಿ ಪ್ರಸ್ತುತ ಮಾವಿನ ಹಣ್ಣಿನ ಬೆಲೆ ಪ್ರತಿ ಕೆಜಿಗೆ ₹150ರಷ್ಟಿದ್ದು, ಜನಸಾಮಾನ್ಯರ ಕೈಗೆಳಗಾಗದ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ಮಾವು ಹಣ್ಣುಗಳು ಮಾರುಕಟ್ಟೆಗೆ ಮೂರು ಹಂತಗಳಲ್ಲಿ ಬರುವುದು ಸಹಜ. ಆದರೆ ಈ ಬಾರಿ ಋತು ಮೊದಲೇ ಆರಂಭವಾದ ಕಾರಣದಿಂದಾಗಿ, ಆಗಮನ ಸ್ಥಿರವಾಗಿರಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಾವಿನ ಋತುವು ಜುಲೈ ಅಂತ್ಯ ಅಥವಾ ಆಗಸ್ಟ್ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಸಿಜಿ ನಾಗರಾಜು ತಿಳಿಸಿದ್ದಾರೆ.
ಮಾವು ಮಂಡಳಿಯ ಕರ್ಸಿರಿ ಆನ್‌ಲೈನ್ ಪೋರ್ಟಲ್‌ನಲ್ಲಿ ಏಪ್ರಿಲ್ 22ರಿಂದ ಗ್ರಾಹಕರು ನೇರವಾಗಿ ರೈತರಿಂದ ಮಾವಿನ ಹಣ್ಣುಗಳಿಗಾಗಿ ಆರ್ಡರ್ ನೀಡಬಹುದು. ಈ ಆರ್ಡರ್‌ಗಳನ್ನು ಇಂಡಿಯಾ ಪೋಸ್ಟ್ ಮೂಲಕ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಅವಲಂಬನೆಯಿಲ್ಲದೆ ರೈತರಿಗೆ ನಿಖರ ಆದಾಯ ದೊರೆಯುವ ಸಾಧ್ಯತೆ ಇದೆ.


Click it and Unblock the Notifications