ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ದೇಶದ ಬಹುತೇಕ ಜನರು ಹೊಸ ವರ್ಷದ ಆಚರಣೆಗೆ ಸಜ್ಜಾಗ್ತಿದ್ದಾರೆ ಅದರಲ್ಲೂ ಬೆಂಗಳೂರಿನ ಬಹುತೇಕ ಪಾರ್ಟಿ ಹಾಟ್‌ಸ್ಪಾಟ್‌ಗಳು ಜಗಮಗಿಸೋ ಲೈಟುಗಳಿಂದ, ಧೂಳೆಬ್ಬಿಸುವ ಸೌಂಡ್‌ಗಳಿಂದ ಸಜ್ಜಾಗಿದೆ. ಇನ್ನೇನು ಜನ ಎಂಟ್ರಿ ಕೊಟ್ರೆ ಸಾಕು, ಪಾರ್ಟಿ ಶುರು ಅನ್ನೋ ರೇಂಜ್‌ಗೆ ಬೆಂಗಳೂರು ಸಜ್ಜಾಗ್ತಿದೆ. ಇಂದು ರಾತ್ರಿಯಾಗುತ್ತಿದ್ದಂತೆ ಜನ ಪಾರ್ಟಿ, ಪಬ್, ರೆಸ್ಟೋರೆಂಟ್ ಅಂತ ಜಮಾಯಿಸುತ್ತಾರೆ. ಇದೀಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕೂಡಾ ಕಟ್ಟೆಚ್ಚರ ವಹಿಸಿದೆ. ಎಂಜಿ ರೋಡ್, ಕೋರಮಂಗಲ (MG Road, Koramangala) ಸೇರಿ ಹಲವು ಕಡೆಗಳಲ್ಲಿ ಖಾಕಿ ಪಡೆ ಸಜ್ಜಾಗಿದ್ದು, ಈಗಾಗಲೇ ಪೊಲೀಸರನ್ನೂ ನಿಯೋಜಿಸಲಾಗಿದೆ.

ಹೊಸ ವರ್ಷ ಬರುತ್ತಿದ್ದಂತೆ ಬೆಂಗಳೂರು ಸಂಭ್ರಮಾಚರಣೆಗೆ ಸಜ್ಜಾಗೋದು ಸಾಮಾನ್ಯ. ಅದೇ ರೀತಿ ಪೊಲೀಸರು ಕೂಡಾ ಈ ಸಂದರ್ಭದಲ್ಲಿ ಬಿಗಿಭದ್ರತೆಯನ್ನೂ ವಹಿಸುತ್ತಾರೆ. ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸುತ್ತಾರೆ. ಅಲ್ಲದೇ ಹೊಸ ವರ್ಷದ ಆಚರಣೆ ನಿಮಿತ್ತ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರವನ್ನು ಬಂದ್ ಮಾಡಲಾಗಿದೆ. ಅಲ್ಲದೇ ಮೆಟ್ರೋ ಸೇವೆ, 50ಕ್ಕೂ ಅಧಿಕ ಫ್ಲೈಓವರ್‌ಗಳು ಬಂದ್ ಇರಲಿದೆ ಎಂದು ಹೇಳಲಾಗಿದೆ.
ಈ ರಸ್ತೆಗಳು ಬಂದ್.. ಬಂದ್..!
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಜನ ಪಾರ್ಟಿ, ಸೆಲೆಬ್ರೇಷನ್‌ಗಾಗಿ ಜಮಾಯಿಸಲು ಶುರು ಮಾಡುತ್ತಾರೆ. ಆದ್ದರಿಂದ ಸಂಚಾರ ದಟ್ಟಣೆ ಹಿನ್ನೆಲೆ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡಾ ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಕೆಲ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಕೆಲವು ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ನಿಷೇಧ ಹೇರಲಾಗಿದೆ. ಅದರಲ್ಲೂ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರೋಡ್, ಸೇಂಟ್ ಮಾರ್ಕ್ ರೋಡ್, ಮ್ಯೂಸಿಯಂ ರೋಡ್‌ಗಳಲ್ಲಿ ರಾತ್ರಿ 10 ರಿಂದ ಮುಂಜಾನೆ 3 ಗಂಟೆಯವರೆಗೆ ವಾಹನ ಓಡಾಟಕ್ಕೆ ನಿಷೇಧ ಹೇರಲಾಗಿದೆ.
ನಾಳೆವರೆಗೂ ಪಾರ್ಕಿಂಗ್‌ಗೆ ಅವಕಾಶ ಇಲ್ಲ!
ಸಂಚಾರ ನಿಷೇಧ ಮಾತ್ರವಲ್ಲದೇ ಇಂದು ಸಂಜೆಯಿಂದ ನಾಳೆ (ಜ.1) ಮುಂಜಾನೆ 3 ಗಂಟೆಯವರೆಗೂ ಈ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಆದ್ದರಿಂದ ಪೊಲೀಸರು ಸೂಚಿಸುವ ಜಾಗದಲ್ಲೇ ಪಿಕಪ್, ಡ್ರಾಪ್ ಬಳಸುವಂತೆ ಸಂಚಾರಿ ಪೊಲೀಸರು ಸೂಚನೆ ಹೊರಡಿಸಿದ್ದಾರೆ.
50 ಫ್ಲೈಓವರ್ ಕ್ಲೋಸ್!
ರಸ್ತೆ, ಪಾರ್ಕಿಂಗ್ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಮಾತ್ರವಲ್ಲದೇ, ಬೆಂಗಳೂರಿನ ಪ್ರಮುಖ 50 ಫ್ಲೈಓವರ್‌ಗಳು ಸಹ ಬಂದ್ ಇರಲಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1 ರ ಸಂಜೆ 6 ಗಂಟೆಯವರೆಗೆ ಫ್ಲೈಓವರ್ ಬಂದ್ ಇರಲಿದೆ ಎಂದು ಸೂಚನೆ ನೀಡಲಾಗಿದೆ. ಇನ್ನು ಏರ್‌ಪೋರ್ಟ್ ಫ್ಲೈಓವರ್‌ಗಳಲ್ಲಿ ಈ ಸಮಯದಲ್ಲಿ ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಇತರ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಇನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ಖಡಕ್ ನಿಯಮಗಳನ್ನು ಜಾರಿಗೆ ತಂದಿದೆ. ಯಾವುದೇ ದುರ್ಘಟನೆ ನಡೆಯದಂತೆ ಖಾಗಿ ಬಿಗಿಭದ್ರತೆ ವಹಿಸಿದೆ. ಅದಕ್ಕಾಗಿ ಪ್ರಮುಖ ನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ 14 ಸಾವಿರ ಪೊಲೀಸರು, 3 ಮಂದಿ ಸಂಚಾರ ಪೊಲೀಸರು, 400 ಟ್ರಾಫಿಕ್ ವಾರ್ಡನ್‌ಗಳನ್ನು ನಿಯೋಜನೆ ಮಾಡಲಾಗಿದೆ. 88 KSRP ತುಕಡಿ, 21 CAR ತುಕೆಇ, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನು ಸಹ ನಿಯೋಜಿಸಲಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications