ಮಳೆಗಾಲದಲ್ಲಿ ಇಡೀ ರಾಜ್ಯವೇ ನಲುಗಿ ಹೋಗಿತ್ತು. ಈ ಮಳೆಗಾಲದಿಂದ ನಾವು ಹೇಗೆ ಪಾರಾಗುವುದು ಎಂದು ಜನ ಅಂದು ಪೇಚಿಗೆ ಬಿದ್ದಿದ್ದರು. ಆದ್ರೆ ಈಗ ಮತ್ತೆ ಹಿಂಗಾರು ಮಳೆ ಆರ್ಭಟವನ್ನ ಶುರುಮಾಡಿದೆ. ಒಂದು ಹಂತ ಮುಗಿಸಿ ಚೇತರಿಸಿಕೊಳ್ಳುವ ಹೊತ್ತಿಗೆ, ಚಂಡಮಾರುತ ಜನರನ್ನು ಕಾಡುತ್ತಿದೆ. ಇದರಿಂದಾಗಿ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿದ್ದು, ಜನರು ಸಂಚಾರ ಮಾಡಲು ಕೂಡ ಪರದಾಡುವಂತಾಗಿದೆ. ಇನ್ನು ರಸ್ತೆಗಳೆಲ್ಲಾ ಗುಂಡಿಮಯವಾಗಿದ್ದರು ಕೂಡ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ.
ಬೆಳಗಾವಿಯಲ್ಲಿ ರಸ್ತೆಗಳು ದುಸ್ತರವಾಗಿದ್ದು, ಸಂಚರಿಸಲು ಜನರು ದಿನಾ ಪರದಾಡುವಂತಾಗಿದೆ. ಅಲ್ಲದೆ ಈ ಬಗ್ಗೆ ಬೆಳಗಾವಿ ಮಹಿಳೆಯರು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರು ಕೂಡ ರಸ್ತೆ ದುರಸ್ತಿ ಕಾರ್ಯ ಮಾತ್ರ ಇನ್ನು ಆರಂಭವಾಗಿಲ್ಲ. ಜೊತೆಗೆ ಲೋಕೋಪಯೋಗಿ ಸಚಿವರು ಕೂಡ ಅದೇ ಜಿಲ್ಲೆಯವರು ಆದ್ರೂ ಜನರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಬೇಸತ್ತ ಬೆಳಗಾವಿ ಮಹಿಳೆಯರು ತಾವೇ ರಸ್ತೆ ದುರಸ್ತಿ ಕಾರ್ಯ ಮಾಡಿಸಿದ್ದಾರೆ. ಮಹಿಳೆಯರೆಲ್ಲರೂ ಸೇರಿ ತಮ್ಮ ಹಣವನ್ನ ನೀಡಿ ರಸ್ತೆ ದುರಸ್ತಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನ ತರಲು ನೆರವಾಗಿದ್ದಾರೆ.

ಈ ಸಮಸ್ಯೆ ಬೆಳಗಾವಿ ಜಿಲ್ಲೆಯ ರಸ್ತೆಗಳದ್ದು ಮಾತ್ರವಲ್ಲ, ಕರ್ನಾಟಕದಲ್ಲಿರುವ ಎಲ್ಲಾ ಜಿಲ್ಲೆಗಳ ರಸ್ತೆಗಳ ಪಾಡು ಇದೇ ಆಗಿದೆ. ಒಟ್ಟು 19000 ಕಿಲೋ ಮೀಟರ್ ರಸ್ತೆಗಳ ಪರಿಸ್ಥಿತಿ ಕೂಡ ಹೀಗೆ ಇದೆ. ಒಂದಿಷ್ಟು ರಸ್ತೆಗಳು ಭಾರಿ ಮಳೆಗೆ ಸಂಪೂರ್ಣ ಸಾಶವಾಗಿದ್ರೆ, ಇನ್ನು ಕೆಲವು ರಸ್ತೆಗಳು ಮೊದಲೆ ಗುಂಡಿ ಬಿದ್ದು ಈಗಂತು ಇನ್ನಷ್ಟು ಸಮಸ್ಯೆಗಳಾಗಿ ಮಾರ್ಪಟ್ಟಿವೆ. ಕೆಲವು ಭಾಗಗಳಲ್ಲಿ ಜನರು ಅಧಿಕಾರಿಗಳ ಮೊರೆ ಹೋಗಿ ರಸ್ತೆಗಳನ್ನ ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ ಈ ಎಲ್ಲಾ ಸಮಸ್ಯೆಗಳನ್ನ ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳಿಂದಾಗಿ ರಾಜ್ಯದ ಹಲವೆಡೆ ಜನರು ಬೇಸತ್ತು ಹೋಗಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 12,553 ಕಿಲೋ ಮೀಟರ್‌ನ ಜಿಲ್ಲಾ ಮುಖ್ಯರಸ್ತೆ, ಗ್ರಾಮೀಣ ರಸ್ತೆಗಳು ಹಾಗೂ 1,107 ಸಣ್ಣ ಸೇತುವೆ ಜೊತೆಗೆ ಮೋರಿಗಳು ನಾಶವಾಗಿವೆ. ಇನ್ನು ರಾಜ್ಯ ಹೆದ್ದಾರಿಗಳು ಸುಮಾರು 7,035 ಕಿಲೋ ಮೀಟರ್‌ನವರೆಗೂ ಗುಂಡಿಬಿದ್ದಿವೆ. ಅಲ್ಲದೆ ಈ ರಸ್ತೆಗಳನ್ನ ಸರಿಪಡಿಸಲು ಒಂದಿಷ್ಟು ಕ್ರಮಗಳನ್ನ ತೆಗೆದುಕೊಂಡರಾದ್ರೂ ಕೂಡ ಇವೆಲ್ಲಾ ತಾತ್ಕಿಲ ಕ್ರಮಗಳು ಮಾತ್ರ ಆಗಿದ್ದವು. ಅಲ್ಲದೆ ರಿಪೇರಿಗಾಗಿ ಒಂದಿಷ್ಟು ಹಣವೆಚ್ಚ ಮಾಡಿ ಅದರಲ್ಲೂ ಕಳಪೆ ಕಾಮಗಾರಿಗಳನ್ನ ಮಾಡಿದ್ದಾರೆ ಎಂದು ಹಲವು ಬಾಗದ ಜನರು ಆರೋಪ ಮಾಡಿದ್ದಾರೆ. ಇಂತಹ ಪರಿಸ್ಥಿತಿಗಳು ನಮಗೆ ಹೆಚ್ಚಾಗಿ ಎದುರಾಗುವುದು ರಾಜ್ಯದ ಮಲೆನಾಡು ಭಾಗ, ಕರಾವಳಿ ಜಿಲ್ಲೆಗಳಲ್ಲಿ ರಸ್ತೆಯ ಸ್ಥತಿಗಳು ಶೋಚನೀಯವಾಗಿವೆ.
ಅಷ್ಟೇ ಅಲ್ಲ ರಾಜ್ಯದ ಕೆಲವು ಭಾಗಗಳಲ್ಲಿ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ಇನ್ನು ಕೆಲ ಭಾಗಗಳಲ್ಲಿ ರಸ್ತೆಗಳಿದ್ದವು ಎನ್ನುವುದಕ್ಕೆ ಒಂದು ಸಾಕ್ಷಿ ಕೂಡ ಉಳಿದಿಲ್ಲ. ಇದರಿಂದಾಗಿ ಜನರು ತಮ್ಮ ವೈಯಕದತಿಕ ಕೆಲಸಗಳಿಗೆ, ಆಸ್ಪತ್ರೆಗೆ, ಮಾರುಕಟ್ಟೆಗೆ, ಶಾಲೆಗೆ ಹೀಗೆ ಎಲ್ಲೆಡೆ ಹೋಗಲು ಕೂಡ ಈ ದುಸ್ತರವಾದ ರಸ್ತೆಗಳು ಜನರಿಗೆ ಸಮಸ್ಯೆಗಳಾಗಿ ಮಾರ್ಪಟ್ಟಿವೆ.
ವಾಡಿಕೆಗಿಂತ ಈ ಸಲ ಮುಂಗಾರಿನಲ್ಲಿ 58% ಗಿಂತ ಹೆಚ್ಚು ಮಳೆಯಾಯಿತು. ಇನ್ನು ವಾಡಿಕೆಯಂತೆ ಅಕ್ಟೋಬರ್‌ನಲ್ಲಿ 114 ಮಿ.ಮೀ. ಮಳೆಯಾಗುತ್ತಿತ್ತು. ಆದ್ರೆ ಈ ಬಾರಿ ಇದರ ಬದಲಿಗೆ 181 ಮಿಲಿ ಮೀಟರ್ ಮಳೆಯಾಯಿತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಕುರಿತು ವರದಿಯನ್ನು ನೀಡಲು ಹೇಳಿದ್ದರು. ಈ ನಿಟ್ಟಿನಲ್ಲಿ ಅ. 25ರಂದು ನೀಡಿದ್ದ ಸೂಚನೆಯಂತೆ ಜಿಲ್ಲಾಡಳಿತಗಳಿಂತ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿದೆ.ಜಿಲ್ಲೆಗಳ ಮೂಲಸೌಕರ್ಯಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿರುವ ಪ್ರಗತಿ ಪಥ, ಕಲ್ಯಾಣ ಪಥ ಯೋಜನೆಗಳನ್ನ ಆರಂಬಿಸುವ ಮೂಲಕ ಈ ರಸ್ತೆ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು. ಅಲ್ಲದೆ ಕೆ ಶಿಪ್-4 ಕಾಮಗಾರಿ ಆರಂಭಿಸುವ ಮೂಲಕ ರಾಜ್ಯ ಹೆದ್ದಾರಿಗಳನ್ನ ಸರಿಪಡಿಸಬಹುದು. ಈ ರೀತಿಯಲ್ಲಾದ್ರೂ ಸರ್ಕಾರ ಜನರಿಗೆ ನೆರವಾಗಬಹುದು.
ಅಭಿವೃದ್ಧಿ ಎಂದರೇ ನಗರಗಳಲ್ಲಿ ಒಂದಿಷ್ಟು ಕಟ್ಟಡಗಳನ್ನ ಕಟ್ಟಿದರೆ ಮಾತ್ರ ಆಗುವಂತದ್ದಲ್ಲ. ಗ್ರಾಮೀಣ ಭಾಗಗಳ ಅಭಿವೃದ್ಧಿಯಾದಾಗಲೇ ನಿಜವಾಗಲೂ ರಾಜ್ಯ ಅಭಿವೃದ್ಧಿ ಹೊಂದುತ್ತದೆ. ನಮ್ಮ ರಾಜ್ಯದ ಮಂತ್ರಿಗಳು ಬೇರೆಡೆ ಪ್ರವಾಸಕ್ಕೆ ತೆರಳಿದಂತೆ, ಬೇರೆಯವರು ಕೂಡ ನಮ್ಮ ರಾಜ್ಯಕ್ಕೆ ಬಂದಾಗ ನಿಜವಾಗ್ಲೂ ಅವಮಾನ ಆಗೋದು ಜನಗಳಿಗಲ್ಲ ಅಲ್ಲಿನ ಶಾಸಕ ಅಥವಾ ಸಚಿವರಿಗೆ. ಇನ್ನಾದ್ರು ಕೂಡ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಾಗೆ ರಸ್ತೆಗಳ ದರ್ತಿ ಕಾರ್ಯವನ್ನ ಆರಂಭಿಸಬೇಕು. ಇನ್ನು ಮುಂಬರುವ ಮಳೆಗಾಲದ ಒಳಗೆ ರಸ್ತೆ ದುರಸ್ತಿ ಕಾರ್ಯವನ್ನ ಇಲಾಖೆ ಕೈಗೆತ್ತಿಕೊಂಡ್ರೆ ಜನರು ಮತ್ತೆ ಮಳೆಗಾಲ ಬಂದಾಗ ಪರದಾಡುವುದಾದ್ರು ತಪ್ಪುತ್ತದೆ. ಇಲ್ಲ ಬೆಳಗಾವಿಯಂತೆ ಜನರು ಸರ್ಕಾರವಿದ್ದರೂ ಕೂಡ ತಮ್ಮ ದುಡ್ಡಿನಂತೆ ಮತ್ತೆ ರಸ್ತೆ ಕಾಮಗಾರಿಯನ್ನ ಆರಂಭಿಸಬೇಕಾಗುತ್ತದೆ. ಹೀಗಾಗಿ ಜನರ ಸಮಸ್ಯೆಗಳಿಗೆ ಓಗೊಟ್ಟು ಇನ್ನಾದ್ರು ಸರ್ಕಾರ ಇಂತಹ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದು ಉತ್ತಮ.
More From GoodReturns

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್‌ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!



Click it and Unblock the Notifications