ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆದಾಯ ಸಂಗ್ರಹವು ಪ್ರತಿ ತಿಂಗಳು ಏರುತ್ತಾ ಸಾಗಿದ್ದು ಮಾರ್ಚ್ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,23,902 ಕೋಟಿ ರೂಪಾಯಿ ನಷ್ಟಿದೆ. ಈ ಮೂಲಕ ಜಿಎಸ್‌ಟಿ ಪರಿಚಯಿಸಿದ ನಂತರ ಒಂದು ತಿಂಗಳಲ್ಲಿ ಸಂಗ್ರಹವಾದ ಅತಿ ದೊಡ್ಡ ಆದಾಯ ಸಂಗ್ರಹ ಇದಾಗಿದೆ.
ಇದರಲ್ಲಿ ಸಿಜಿಎಸ್‌ಟಿ 22,973 ಕೋಟಿ ರೂ., ಎಸ್‌ಜಿಎಸ್‌ಟಿ 29,329 ಕೋಟಿ ರೂ., ಐಜಿಎಸ್‌ಟಿ 62,842 ಕೋಟಿ ರೂ. ಮತ್ತು ಸೆಸ್ 8,757 ಕೋಟಿ ರೂ. ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ.

ಕಳೆದ ವರ್ಷದ ಕೋವಿಡ್-19 ಲಾಕ್‌ಡೌನ್‌ನಲ್ಲಿ ಸಂಪೂರ್ಣ ನೆಲಕಚ್ಚಿದ್ದ ಆದಾಯ ಸಂಗ್ರಹವು ನಂತರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಾ ಬಂದಿದ್ದು, ಇದೀಗ ಸತತ ಆರನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಇದು ಆರ್ಥಿಕ ಚೇತರಿಕೆಯ ಸ್ಪಷ್ಟ ಸೂಚನೆಯಾಗಿದೆ ಮತ್ತು ತೆರಿಗೆ ಕುರಿತಾಗಿ ಆಡಳಿತವು ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿದೆ.
ಸರ್ಕಾರವು ಸಿಜಿಎಸ್‌ಟಿಗೆ, 21,879 ಕೋಟಿ ಮತ್ತು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ, 17,230 ಕೋಟಿಗಳನ್ನು ಇತ್ಯರ್ಥಪಡಿಸಿದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವಿನ 50:50 ಅನುಪಾತದಲ್ಲಿ ಐಜಿಎಸ್‌ಟಿ 28,000 ಕೋಟಿ ರೂಪಾಯಿಗಳನ್ನು ಇತ್ಯರ್ಥಪಡಿಸಿದೆ.
ಮಾರ್ಚ್ 2021 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ, 58,852 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ, 60,559 ಕೋಟಿ. ಜೊತೆಗೆ 30,000 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.


Click it and Unblock the Notifications