ಷೇರು ಪೇಟೆಯು ಕಳೆದ ಒಂದು ವಾರದಲ್ಲಿ ಕೊಂಚ ಚೇತರಿಕೆ ಕಂಡಿದೆ. ಟಾಪ್ 10 ಷೇರುಗಳ ಪೈಕಿ ಎಂಟು ಸಂಸ್ಥೆಗಳ ಕಳೆದ ವಾರ ಮಾರುಕಟ್ಟೆ ಮೌಲ್ಯದಲ್ಲಿ 1,26,579.48 ಕೋಟಿ ರೂಪಾಯಿಗಳಷ್ಟು ಸೇರ್ಪಡೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ದೊಡ್ಡ ಲಾಭದಾಯಕವಾಗಿ ಷೇರುಗಳಾಗಿದೆ.
ಕಳೆದ ವಾರ ಬಿಎಸ್‌ಇ ಬೆಂಚ್‌ಮಾರ್ಕ್ 973.61 ಪಾಯಿಂಟ್ ಅಥವಾ ಶೇಕಡ 1.59ರಷ್ಟು ಏರಿಕೆ ಕಂಡಿದೆ. ಈ ನಡುವೆ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಹೇಗಿದೆ?, ಎಷ್ಟು ನಷ್ಟ, ಎಷ್ಟು ಲಾಭವಾಗಿದೆ ಎಂದು ತಿಳಿಯೋಣ ಮುಂದೆ ಓದಿ..

ಟಾಪ್ 10 ಷೇರುಗಳ ಮಾರುಕಟ್ಟೆ ಮೌಲ್ಯ
ಐಟಿಸಿ ಮತ್ತು ಇನ್ಫೋಸಿಸ್ ಮಾತ್ರ ತಮ್ಮ ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ಲಾಭ ಗಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯವು 28,956.79 ಕೋಟಿ ರೂಪಾಯಿ ಜಿಗಿದು 16,80,644.12 ಕೋಟಿ ರೂಪಾಯಿಗೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್‌ನ ಮಾರುಕಟ್ಟೆ ಮೌಲ್ಯವು 28,759 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿ 6,16,391.77 ಕೋಟಿ ರೂಪಾಯಿಗೆ ತಲುಪಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು 23,590.05 ಕೋಟಿ ರೂಪಾಯಿಗೆ ಹೆಚ್ಚಳವಾಗಿ 9,31,095.12 ಕೋಟಿ ರೂಪಾಯಿಗೆ ತಲುಪಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯವು 15,697.33 ಕೋಟಿ ರೂಪಾಯಿ ತಲುಪಿ 11,97,881.94 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಎಚ್‌ಡಿಎಫ್‌ಸಿಯ ಮಾರುಕಟ್ಟೆ ಮೌಲ್ಯ 13,893.03 ಕೋಟಿ ರೂಪಾಯಿಗೆ ಏರಿಕೆಯಾಗಿ 5,09,434.44 ಕೋಟಿ ರೂಪಾಯಿಗೆ ತಲುಪಿದೆ.
ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯ 11,946.89 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿ 6,59,479.70 ಕೋಟಿ ರೂಪಾಯಿಗೆ ತಲುಪಿದೆ. ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಮೌಲ್ಯವು 2,174.58 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿ 4,41,327.80 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮೌಲ್ಯವು 1,561.81 ಕೋಟಿ ರೂಪಾಯಿಯಷ್ಟು ಜಿಗಿತ ಕಂಡಿದೆ, 5,15,931.82 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಐಟಿಸಿಯ ಮಾರುಕಟ್ಟೆ ಮೌಲ್ಯವು 10,439.53 ಕೋಟಿ ರೂಪಾಯಿಯಷ್ಟು ಕುಸಿತ ಕಂಡು 5,22,536.01 ಕೋಟಿ ರೂಪಾಯಿಗೆ ಇಳಿದಿದೆ. ಇನ್ಫೋಸಿಸ್ 5,600.92 ಕೋಟಿ ರೂಪಾಯಿಯಷ್ಟು ಇಳಿಕೆ ಕಂಡು 5,16,757.92 ಕೋಟಿ ರೂಪಾಯಿಗೆ ತಲುಪಿದೆ.
ಟಾಪ್ 10 ಸಂಸ್ಥೆಗಳ ಶ್ರೇಯಾಂಕದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ನಂಬರ್ ಒನ್ ಸಂಸ್ಥೆಯಾಗಿ ಉಳಿದಿದೆ, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ನಂತರದ ಸ್ಥಾನದಲ್ಲಿವೆ.


Click it and Unblock the Notifications