For Quick Alerts
ALLOW NOTIFICATIONS  
For Daily Alerts

Closing Bell: ಕುಸಿದಿದ್ದ ಸೆನ್ಸೆಕ್ಸ್ ಏರಿಕೆ, ನಿಫ್ಟಿ ಮತ್ತಷ್ಟು ಇಳಿಕೆ

|

ಭಾರತೀಯ ಷೇರುಪೇಟೆ ಶುಕ್ರವಾರ ಮತ್ತಷ್ಟು ಇಳಿಕೆಗೊಂಡಿದ್ದು, ಕುಸಿದಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 21 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 8 ಪಾಯಿಂಟ್ಸ್ ಕುಸಿಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 21.12 ಪಾಯಿಂಟ್ಸ್‌ ಅಥವಾ ಶೇ. 0.04ರಷ್ಟು ಏರಿಕೆಗೊಂಡು 52344.45 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 8.05 ಪಾಯಿಂಟ್ಸ್‌ ಅಥವಾ ಶೇಕಡಾ 0.05ರಷ್ಟು ಕುಸಿದು 15683.40 ಪಾಯಿಂಟ್ಸ್ ಮುಟ್ಟಿದೆ.

 

ದಿನದ ವಹಿವಾಟು ಅಂತ್ಯಕ್ಕೆ ಇಂದು ಒಟ್ಟು 3,352 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,180 ಷೇರುಗಳು ಏರಿಕೆಗೊಂಡು 2,031 ಷೇರುಗಳು ಕುಸಿದಿವೆ. ಅದೇ ಸಮಯದಲ್ಲಿ, 141 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಮತ್ತೊಂದೆಡೆ, ರೂಪಾಯಿ ಮೌಲ್ಯವು 20 ಪೈಸೆ ಏರಿಕೆ ಕಂಡು ಡಾಲರ್ ಎದುರು 73.86 ರೂ. ತಲುಪಿದೆ.

ಕುಸಿದಿದ್ದ ಸೆನ್ಸೆಕ್ಸ್ ಏರಿಕೆ, ನಿಫ್ಟಿ ಮತ್ತಷ್ಟು ಇಳಿಕೆ

ಏರಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರುಗಳು 47 ರೂ.ಗಳ ಏರಿಕೆ ಕಂಡು 694.35 ರೂ., ಬಜಾಜ್ ಆಟೋ ಷೇರುಗಳು 113 ರೂ.ಗಳ ಏರಿಕೆ ಕಂಡು 4,167.10 ರೂ., ಎಚ್‌ಯುಎಲ್‌ನ ಷೇರುಗಳು 65 ರೂ.ಗಳ ಏರಿಕೆ ಕಂಡು 2,482.90 ರೂ., ಭಾರ್ತಿ ಏರ್‌ಟೆಲ್‌ನ ಷೇರುಗಳು 10 ರೂ.ಗಳ ಏರಿಕೆ ಕಂಡು 538.75 ರೂ., ಗ್ರಾಸಿಮ್‌ನ ಷೇರು 23 ರೂ.ಗಳ ಏರಿಕೆ ಕಂಡು 1,480.75 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಒಎನ್‌ಜಿಸಿಯ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 120.25 ರೂ., ಕೋಲ್ ಇಂಡಿಯಾದ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 146.40 ರೂ., ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 26 ರೂ.ಗಳಷ್ಟು ಇಳಿಕೆಯಾಗಿ 670.60 ರೂ., ಎನ್‌ಟಿಪಿಸಿ ಷೇರುಗಳು ಸುಮಾರು 4 ರೂ.ಗಳಷ್ಟು ಇಳಿಕೆಯಾಗಿ 113.55 ರೂ., ಯುಪಿಎಲ್ ಷೇರುಗಳು 278.8 ರಷ್ಟು ಇಳಿಕೆಯಾಗಿ 808.00 ರೂ. ತಲುಪಿದೆ.

English summary

Market Recovers From Day's Low To Close Flat

On a day of volatile trade, the market managed to erase intraday losses to end flat amid volatility
Story first published: Friday, June 18, 2021, 17:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X