ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಂಭತ್ತು ಕಂಪನಿಗಳು 2.22 ಲಕ್ಷ ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಕಳೆದ ವಾರದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ.
ಹೆಚ್ಚು ಮೌಲ್ಯ ಕಳೆದು ಕೊಂಡ ಕಂಪನಿಯಾಗಿ ಬಜಾಜ್ ಫೈನಾನ್ಸ್ ಗುರುತಿಸಿಕೊಂಡಿದ್ದರೆ, ಟಿಸಿಎಸ್, ರಿಲಯನ್ಸ್ ಹಾಗೂ ಎಚ್ ಡಿ ಎಫ್ ಸಿ ಅತಿ ಹೆಚ್ಚು ಲಾಭ ಗಳಿಸಿವೆ. ಒಟ್ಟಾರೆ, 2,22,591.01 ಕೋಟಿ ರು ಲಾಭ 9 ಕಂಪನಿಗಳಿಂದ ಬಂದಿದೆ. ಬಿಎಸ್ಇ ಸೆನ್ಸೆಕ್ಸ್ 1,690.88 ಅಂಕ ಅಥವಾ ಶೇ 3.21ರಷ್ಟು ಏರಿಕೆ ಕಂಡಿತ್ತು. ಆಗಸ್ಟ್ 5ರಂದು ದಾಖಲೆಯ 54,717.24 ಅಂಶಕ್ಕೇರಿತ್ತು. ಭಾರತೀಯ ಷೇರುಪೇಟೆ ಜಾಗತಿಕ ಸಕಾರಾತ್ಮಕ ಸೂಚನೆ ಬೆನ್ನಲ್ಲೆ ಸೋಮವಾರ(ಆಗಸ್ಟ್ 2)ದಂದು ಭರ್ಜರಿ ಆರಂಭ ಪಡೆದಿತ್ತು ಮುಂಬೈ ಷೇರುಪೇಟೆ ಸೆನ್ಸೆಕ್ಸ್ 333 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 106 ಪಾಯಿಂಟ್ಸ್ ಹೆಚ್ಚಳಗೊಂಡಿತ್ತು.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹೆಚ್ಚು ಕಂಪನಗಳು ತಮ್ಮ ಮೌಲ್ಯ ಹೆಚ್ಚಿಸಿಕೊಂಡಿವೆ. ಆಗಸ್ಟ್ 1ಕ್ಕೆ ಪ್ರಕಟವಾದ ಮಾರುಕಟ್ಟೆ ಮೌಲ್ಯದಂತೆ 6 ಕಂಪನಿಗಳು 96,642 ಕೋಟಿ ರು ಕಳೆದುಕೊಂಡಿದ್ದವು. ರಿಲಯನ್ಸ್ ,ಟಿಸಿಎಸ್, ಎಚ್ ಯು ಎಲ್ ಲಿಮಿಟೆಡ್, ಕೋಟಕ್ ಮಹೀಂದ್ರಾ, ಎಚ್ ಡಿ ಎಫ್ ಸಿ ಬ್ಯಾಂಕ್ ಹಿನ್ನಡೆ ಅನುಭವಿಸಿದ್ದರೆ, ಇನ್ಫೋಸಿಸ್, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಮುನ್ನಡೆ ಪಡೆದುಕೊಂಡಿದ್ದವು. ಆದರೆ, ಆಗಸ್ಟ್ 8ರಂತೆ ಬಜಾಜ್ ಫೈನಾನ್ಸ್ ಹೊರತುಪಡಿಸಿ ಮಿಕ್ಕ ಟಾಪ್ 9 ಕಂಪನಿಗಳ ಮೌಲ್ಯ ಸುಸ್ಥಿತಿಯಲ್ಲಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಕಳೆದ ವಾರ ಲಾಭ ಗಳಿಸಿದ ಕಂಪನಿಗಳಾಗಿದ್ದು, ಹೆಚ್ಚಿನ ವಹಿವಾಟು ನಡೆಸಿವೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 52,766.97 ಕೋಟಿ ರು ಸೇರಿಸಿಕೊಂಡು 12,24,441.49 ಕೋಟಿ ರು ಮೌಲ್ಯಕ್ಕೇರಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 37,563.09 ಕೋಟಿ ರು ಸೇರಿಸಿಕೊಂಡು 8,26,332.67 ಕೋಟಿ ರು ತಲುಪಿದೆ. ಎಚ್‌ಡಿಎಫ್‌ಸಿ ಮೌಲ್ಯ 34,173.81 ಕೋಟಿ ರು ಹೆಚ್ಚಳವಾಗಿ 4,74,912.16 ಕೋಟಿ ರು ಆಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 34,011.11 ಕೋಟಿ ರು ಹಿಗ್ಗಿ 13,24,341.36 ಕೋಟಿ ರು ಮೌಲ್ಯಕ್ಕೇರಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯ 24,585.18 ಕೋಟಿ ರು ಏರಿಕೆ ಕಂಡು 3,52,708.11 ಕೋಟಿ ರು ಆಗಿದೆ. ಇನ್ಫೋಸಿಸ್ ಮೌಲ್ಯ 17,078.94 ಕೋಟಿ ರು ಏರಿಕೆ ಕಂಡು 7,02,898.22 ರು ಆಗಿದೆ. ಐಸಿಐಸಿಸಿ ಬ್ಯಾಂಕ್ ಮೌಲ್ಯ 10,181.46 ಕೋಟಿ ರು ಮೇಲಕ್ಕೇರಿ 4,83,030.92 ಕೋಟಿ ರು ಆಗಿದೆ.
ಹಿಂದೂಸ್ತಾನ್ ಯೂನಿಲಿವರ್ ಮೌಲ್ಯ 8,705.23 ಕೋಟಿ ರು ಹಿಗ್ಗಿ 5,57,111.01 ರು ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3,525.22 ಕೋಟಿ ರು ಏರಿಕೆಯಾಗಿ 3,88,800.70 ಕೋಟಿ ರು ಆಗಿದೆ. ಬಜಾಜ್ ಫೈನಾನ್ಸ್ 344.05 ಕೋಟಿ ರು ಕಳೆದುಕೊಂಡು 3,75,628.83 ಕೋಟಿ ರುಗೆ ಕುಸಿದಿದೆ.
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.


Click it and Unblock the Notifications