ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ 2019-20ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು ನಿವ್ವಳ ಲಾಭ 5 ಪರ್ಸೆಂಟ್ ಏರಿಕೆಯಾಗಿದೆ.
ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 1,564.8 ಕೋಟಿ ರುಪಾಯಿ ಏರಿಕೆಯಾಗಿದ್ದು , ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.1 ಪರ್ಸೆಂಟ್ ಹೆಚ್ಚಾಗಿದೆ. ವೆಚ್ಚ ಕಡಿತ ಪ್ರಯತ್ನಗಳು, ಕಡಿಮೆ ನಿರ್ವಹಣಾ ವೆಚ್ಚಗಳು, ಕಡಿಮೆ ಸರಕುಗಳ ಬೆಲೆಗಳು ಮತ್ತು ಕಾರ್ಪೊರೇಟ್ ತೆರಿಗೆ ದರದಲ್ಲಿನ ಕಡಿತ, ಹೆಚ್ಚಿನ ಮಾರಾಟ ಪ್ರಚಾರ ವೆಚ್ಚಗಳು ಎಲ್ಲವೂ ಸೇರಿ ಒಟ್ಟಾಗಿ ಲಾಭವನ್ನು ಹೆಚ್ಚಿಸಿವೆ.

ಮಾರುತಿ ಸುಜುಕಿ ತ್ರೈಮಾಸಿಕದಲ್ಲಿ ಒಟ್ಟಾರೆ 4,37,361 ವಾಹನಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2 ಪರ್ಸೆಂಟ್ ಹೆಚ್ಚಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವು 4,13,698 ಯುನಿಟ್ ಆಗಿದ್ದು, 2 ಪರ್ಸೆಂಟ್ ಹೆಚ್ಚಾಗಿದೆ. ರಫ್ತು 23,663 ಯುನಿಟ್‌ಗಳಷ್ಟಿತ್ತು.
ಕಳೆದ ತ್ರೈಮಾಸಿಕದಲ್ಲಿ, ಕಂಪನಿಯು 19,649 ಕೋಟಿ ರುಪಾಯಿ ಮೌಲ್ಯದ ನಿವ್ವಳ ಮಾರಾಟವನ್ನು ದಾಖಲಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.8 ಪರ್ಸೆಂಟ್ ಹೆಚ್ಚಾಗಿದೆ.


Click it and Unblock the Notifications