ದೀಪಾವಳಿ ಹಬ್ಬದ ಕೊಡುಗೆ: ಮಾರುತಿ ಸುಜುಕಿಯಿಂದ ಸಾಕಷ್ಟು ರಿಯಾಯಿತಿ

ಹಬ್ಬದ ಸೀಸನ್ ಹತ್ತಿರ ಬಂದಂತೆ ವಿವಿಧ ಕಂಪನಿಗಳು ಆಫರ್‌ ನೀಡುವುದನ್ನ ನೀವು ಕೇಳಿರ್ತೀರಿ. ಅದು ಟೆಲಿಕಾಂ ಕಂಪನಿಗಳಿಂದ ಹಿಡಿದು ಇ-ಕಾಮರ್ಸ್ ಕಂಪನಿಗಳವರೆಗೆ ವಿವಿಧ ರಿಯಾಯಿತಿಯನ್ನ ನೀವು ಕಾಣಬಹುದು.

ಇದೇ ಸಾಲಿನಲ್ಲಿ ಮಾರುತಿ ಸುಜುಕಿ ಇತರೆ ಕಾರು ತಯಾರಕರಂತೆ ಅಕ್ಟೋಬರ್ ತಿಂಗಳಿನಲ್ಲಿ ತನ್ನ ವಿವಿಧ ವೇರಿಯೆಂಟ್ ಮೇಲೆ ಅನೇಕ ರಿಯಾಯಿತಿಗಳನ್ನ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಬರುವ ದೀಪಾವಳಿ ಹಬ್ಬದ ಪ್ರಯುಕ್ತ ಮಾರಾಟ ಹೆಚ್ಚಿಸಲು ಬಂಪರ್ ಆಫರ್ ನೀಡಲಿದೆ.

ಹಾಗಿದ್ದರೆ ಗ್ರಾಹಕರು ಮಾರುತಿ ಕಂಪನಿಯ ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ಪಡೆಯುತ್ತಾರೆ ಎಂದು ತಿಳಿಯಲು ಈ ಕೆಳಗಿನ ಮಾಹಿತಿ ಓದಿ

ಮಾರುತಿ ಸುಜುಕಿ ಆಫರ್ ಏನು?

ಮಾರುತಿ ಸುಜುಕಿ ಆಫರ್ ಏನು?

ಮಾರುತಿ ಆಲ್ಟೊದಲ್ಲಿ 25,000 ರೂ.ಗಳ ಗ್ರಾಹಕ ಕೊಡುಗೆಯನ್ನು ನೀಡಲಾಗುತ್ತಿದೆ. ಕಾರಿನ ಮೇಲೆ 15,000 ರೂಪಾಯಿ ವಿನಿಮಯ ಬೋನಸ್ ಮತ್ತು 3,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿ ಕೂಡ ಇದೆ. ಅಂದರೆ, ಈ ಕಾರಿನ ಮೇಲೆ ಒಟ್ಟು 43,000 ರೂಗಳವರೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಮೂಲ ಮಾದರಿಯನ್ನು ಹೊರತುಪಡಿಸಿ ಆಲ್ಟೊದ ಎಲ್ಲಾ ಪೆಟ್ರೋಲ್ ರೂಪಾಂತರಗಳಿಗೆ ಅನ್ವಯಿಸುತ್ತವೆ. CNG ರೂಪಾಂತರಗಳು ಸಹ ಇದೇ ರೀತಿಯ ಪ್ರಯೋಜನಗಳನ್ನು ಹೊಂದಿವೆ, ಆದರೆ ಅವುಗಳ ಮೇಲೆ ಯಾವುದೇ ಗ್ರಾಹಕ ಕೊಡುಗೆ ಇಲ್ಲ.

ಮಾರುತಿ ಇಕೋ

ಮಾರುತಿ ಇಕೋ

ಮಾರುತಿ ಇಕೋದಲ್ಲಿ ಯಾವುದೇ ಗ್ರಾಹಕ ಕೊಡುಗೆ ಇಲ್ಲ. ಆದರೆ ಕಾರಿನ ಮೇಲೆ 10,000 ರೂ. ಎಕ್ಸೇಂಜ್‌ ಬೋನಸ್ ಮತ್ತು 2,500 ರೂ. ಕಾರ್ಪೊರೇಟ್ ರಿಯಾಯಿತಿ ಕೂಡ ಬರುತ್ತದೆ. ಅಂದರೆ, ಈ ಕಾರಿನ ಮೇಲೆ 12,500 ರೂಗಳವರೆಗೆ ಒಟ್ಟಾರೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಪ್ರಯೋಜನಗಳು ಇಕೋದ ಸಿಎನ್‌ಜಿ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನ್ ಆರ್ ಮೇಲೆ 5,000 ರೂ.ಗಳ ಗ್ರಾಹಕ ಕೊಡುಗೆಯನ್ನು ನೀಡಲಾಗುತ್ತಿದೆ. ಕಾರಿನ ಮೇಲೆ 10,000 ರೂ. ಎಕ್ಸೇಂಜ್‌ ಬೋನಸ್ ಮತ್ತು 2,500 ರೂ. ಕಾರ್ಪೊರೇಟ್ ರಿಯಾಯಿತಿ ಕೂಡ ಇದೆ. ಅಂದರೆ, ಈ ಕಾರಿನ ಮೇಲೆ ಒಟ್ಟಾರೆ ರೂ 17,500 ಲಾಭಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ವ್ಯಾಗನ್ ಆರ್ ನ ಎಲ್ಲಾ ಪೆಟ್ರೋಲ್ ರೂಪಾಂತರಗಳಲ್ಲಿ ಲಭ್ಯವಿದೆ. ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಅದರ CNG ರೂಪಾಂತರಗಳಲ್ಲಿ ಲಭ್ಯವಿವೆ, ಆದರೆ CNG ರೂಪಾಂತರಗಳಲ್ಲಿ ಗ್ರಾಹಕರ ಕೊಡುಗೆಗಳು ಲಭ್ಯವಿಲ್ಲ.

ಮಾರುತಿ ಸ್ವಿಫ್ಟ್, ಸ್ವಿಫ್ಟ್, ಡಿಜೈರ್

ಮಾರುತಿ ಸ್ವಿಫ್ಟ್, ಸ್ವಿಫ್ಟ್, ಡಿಜೈರ್

ವಿಟಾರಾ ಬ್ರೀಜಾ ಮೇಲೆ 12,000 ರೂ.ಗಳ ಗ್ರಾಹಕ ಕೊಡುಗೆ ಇದೆ. ಕಾರಿನ ಮೇಲೆ ರೂ .10,000 ಎಕ್ಸೇಂಜ್‌ ಬೋನಸ್ ಮತ್ತು ರೂ. 2,500 ಕಾರ್ಪೊರೇಟ್ ರಿಯಾಯಿತಿ ಕೂಡ ಇದೆ. ಅಂದರೆ, ಈ ಕಾರಿನ ಮೇಲೆ 24,500 ರೂ.ಗಳ ಒಟ್ಟಾರೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಮಾರುತಿ ಡಿಜೈರ್ ನಲ್ಲಿ 7,000 ರೂ.ಗಳ ಗ್ರಾಹಕ ಕೊಡುಗೆ ಇದೆ. ಕಾರಿನ ಮೇಲೆ ರೂ .10,000 ಎಕ್ಸೇಂಜ್‌ ಬೋನಸ್ ಮತ್ತು ರೂ .2,500 ಕಾರ್ಪೊರೇಟ್ ರಿಯಾಯಿತಿ ಕೂಡ ಇದೆ. ಅಂದರೆ, ಈ ಕಾರಿನ ಮೇಲೆ ಒಟ್ಟಾರೆ 19,500 ರೂ. ಲಾಭಗಳನ್ನು ನೀಡಲಾಗುತ್ತಿದೆ. ಮಾರುತಿ ವಿಟಾರಾ ಬ್ರೀಜಾದಲ್ಲಿ ಗ್ರಾಹಕರ ಮೇಲಿನ ಆಫರ್ 5,000 ರೂ. ಆಗಿದ್ದು, ಕಾರಿನ ಮೇಲೆ ರೂ .10,000 ವಿನಿಮಯ ಬೋನಸ್ ಮತ್ತು ರೂ .2,500 ಕಾರ್ಪೊರೇಟ್ ರಿಯಾಯಿತಿ ಕೂಡ ಇದೆ. ಅಂದರೆ, ಈ ಕಾರಿನ ಮೇಲೆ ಒಟ್ಟಾರೆ ರೂ 17,500 ಲಾಭಗಳನ್ನು ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+