ನವದೆಹಲಿ, ಏಪ್ರಿಲ್ 28: ಭಾರತದ ಆಟೋಮೊಬೈಲ್ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದು, ಅಮೆರಿಕ & ಯುರೋಪ್ ಕಂಪನಿಗಳಿಗೆ ಕೂಡ ನಮ್ಮ ದೇಶದ ಆಟೋಮೊಬೈಲ್ ಕಂಪನಿಗಳು ಪೈಪೋಟಿ ಕೊಡುವಷ್ಟು ಬಲಾಢ್ಯವಾಗಿ ಬೆಳೆದು ನಿಂತಿವೆ. ಈ ಪೈಕಿ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇದೀಗ, ತನ್ನ ಹೂಡಿಕೆದಾರರಿಗೆ ಸಿಹಿಸುದ್ದಿ ಹೊತ್ತು ತಂದಿದೆ.
ಕೊರೊನಾ ನಂತರ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಹೊಸ ಕ್ರಾಂತಿಕಾರಕ ಹೆಜ್ಜೆಯನ್ನು ಇಡುತ್ತಿದೆ. ಅದರಲ್ಲೂ ಮಾರುತಿ ಸುಜುಕಿ ಸಂಸ್ಥೆ ಎಲ್ಲಾ ಹಂತದಲ್ಲೂ ಬೆಳೆದು ನಿಂತಿದ್ದು, ತನ್ನ ಲಾಭದಲ್ಲಿಯೂ ಹೊಸ ಮೈಲಿಗಲ್ಲು ಸ್ಥಾಪನೆ ಮಾಡುತ್ತಿದೆ. ಈಗ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ 2023 & 24ನೇ ಹಣಕಾಸು ವರ್ಷದಲ್ಲಿ, ಮಾರ್ಚ್ ತ್ರೈಮಾಸಿಕದಲ್ಲಿ 3,877 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಲಾಭ ಕೂಡ ಭರ್ಜರಿಯಾಗಿ ಹೆಚ್ಚಾಗಿದ್ದು, ಈ ಸಿಹಿಸುದ್ದಿ ಹೂಡಿಕೆದಾರರಿಗೆ ಖುಷಿ ನೀಡಿದೆ.

ಮಾರಟದಲ್ಲೂ ಹೊಸ ಸಾಧನೆ
ಕಳೆದ ಬಾರಿ ಮಾರುತಿ ಸುಜುಕಿ ಸಂಸ್ಥೆ 2,623 ಕೋಟಿ ಲಾಭವನ್ನು ಗಳಿಸಿತ್ತು. ಈಗ ಎಂದರೆ 2023 & 24ನೇ ಸಾಲಿನಲ್ಲಿ 3,877 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. 2022 ಮತ್ತು 2023ರ ಇದೇ ಅವಧಿಯಲ್ಲಿ ಹೆಚ್ಚಿನ ಲಾಭ ಸಿಕ್ಕಿರಲಿಲ್ಲ. ಆದರೆ ಈ ಬಾರಿ, ಭರ್ಜರಿ ಲಾಭದ ಜೊತೆಗೆ ಮಾರಟದಲ್ಲಿಯೂ ಕ್ರಾಂತಿಕಾರಿ ಸುಧಾರಣೆ ಕಂಡುಬರುತ್ತಿದೆ. ಕಳೆದ ವರ್ಷಕ್ಕಿಂತಲು ಈ ಬಾರಿಯ ಲಾಭ ಶೇಕಡಾ 47.8ರಷ್ಟು ಏರಿಕೆ ಆಗಿದೆ. ಇದಕ್ಕೆಲ್ಲಾ ಕಾರಣ ಮಾರುತಿ ಸುಜುಕಿ ಸಂಸ್ಥೆಯ ಉತ್ಪನ್ನಗಳ ಮಾರಾಟ ಹೆಚ್ಚಳ.
ಪ್ರತಿ ಷೇರಿನ ಬೆಲೆ ₹12,687
ಕಳೆದ ಕೆಲ ತಿಂಗಳಿಂದ, ಷೇರು ಮಾರುಕಟ್ಟೆಯಲ್ಲಿ ಕೂಡ ಮಾರುತಿ ಸುಜುಕಿ ದೊಡ್ಡ ಸದ್ದು ಮಾಡುತ್ತಿದೆ. ಇದೀಗ ಹೆಚ್ಚಿದ ವಾಹನಗಳ ಮಾರಾಟದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಷೇರು ಪೇಟೆಗೆ ಮಾಹಿತಿ ನೀಡಿದೆ. ಮತ್ತೊಂದು ಕಡೆ ಇದೇ ಮೊದಲ ಬಾರಿ 2023 & 24ರ ಆರ್ಥಿಕ ವರ್ಷದಲ್ಲಿ ಕಂಪನಿ ವಾಹನಗಳ ಒಟ್ಟು ಮಾರಾಟ 20 ಲಕ್ಷ ದಾಟಿದೆ. ಸತತ ಮೂರನೇ ವರ್ಷ ಕೂಡ, ಈ ಮೂಲಕ ಮಾರುತಿ ಸುಜುಕಿ ಸಂಸ್ಥೆ ದೇಶದ ಅತಿದೊಡ್ಡ ರಫ್ತುದಾರನಾಗಿ ಹೆಸರು ಪಡೆದಿದೆ. ದೇಶದ ಒಟ್ಟು ಪ್ರಯಾಣಿಕ ವಾಹನದ ರಫ್ತಿನಲ್ಲಿ, ಈ ಕಂಪನಿ ಶೇ. 41 ರಷ್ಟು ಪಾಲು ಹೊಂದಿದ್ದು, ಇದೀಗ ಬಿಎಸ್‌ಇಯಲ್ಲಿ ಮಾರುತಿ ಸುಜುಕಿ ಕಂಪನಿಯ ಪ್ರತಿ ಷೇರಿನ ಬೆಲೆ ₹12,687ಕ್ಕೆ ತಲುಪಿ ಇತಿಹಾಸ ನಿರ್ಮಿಸುತ್ತಿದೆ.


Click it and Unblock the Notifications