For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಬ್ಯಾಂಕ್‌ನೊಂದಿಗೆ ಮಾರುತಿ ಸುಜುಕಿ ಒಪ್ಪಂದ: ಆಕರ್ಷಕ ಸಾಲದ ಕೊಡುಗೆ

|

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಗ್ರಾಹಕರಿಗೆ ಕಾರು ಸಾಲದ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲು ಕರ್ನಾಟಕ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕ ಬ್ಯಾಂಕ್ ತನ್ನ 858 ಶಾಖೆಯಲ್ಲಿ ಮಾರುತಿ ಸುಜುಕಿ ವಾಹನಗಳಿಗೆ ಸಾಲವನ್ನು ನೀಡುತ್ತದೆ.

ಮಾರುತಿ ಸುಜುಕಿ ಪ್ರಕಾರ, ಅರೆನಾ ಮತ್ತು ನೆಕ್ಸಾ ಮಾರಾಟಗಾರರಿಂದ ಖರೀದಿಸಿದ ಕಾರಿನ ಆನ್-ರೋಡ್ ಬೆಲೆಯ ಮೇಲೆ ಶೇಕಡಾ 85ರಷ್ಟು ಸಾಲ ಲಭ್ಯವಿರುತ್ತದೆ. ಜೊತೆಗೆ ಕಾರಿಗೆ ಗರಿಷ್ಠ ಸಾಲದ ಅವಧಿ 84 ತಿಂಗಳುಗಳು.

ಕರ್ನಾಟಕ ಬ್ಯಾಂಕ್‌ನೊಂದಿಗೆ ಮಾರುತಿ ಸುಜುಕಿ ಒಪ್ಪಂದ

"ಈ ಸಹಭಾಗಿತ್ವದಿಂದಾಗಿ ಗ್ರಾಹಕರಿಗೆ ಈಗ ಮಾರುತಿ ಕಾರುಗಳನ್ನು ಖರೀದಿಸಲು ಸುಲಭವಾಗಿದೆ. ಕಾರಿನ ಮಾಲೀಕತ್ವವನ್ನು ಸುಲಭಗೊಳಿಸಲು ಕಂಪನಿಯು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಸುಲಭ ಇಎಂಐ ಮತ್ತು ಹಣಕಾಸು ಆಯ್ಕೆಗಳ ಕೊಡುಗೆಗಳನ್ನು ಕಂಪನಿಯು ನೀಡುತ್ತದೆ " ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

2020-21ರ ಆರ್ಥಿಕ ವರ್ಷದಲ್ಲಿ ಕಂಪನಿಯು ಬ್ಯಾಂಕುಗಳ ಸಹಭಾಗಿತ್ವದೊಂದಿಗೆ 9.7 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ ಎಂದು ಅವರು ಹೇಳಿದರು. ಈಗ ಕಂಪನಿಯು ವಿಶೇಷವಾಗಿ ಕರ್ನಾಟಕದ ಗ್ರಾಹಕರಿಗೆ ಹಣಕಾಸು ಯೋಜನೆಯನ್ನು ಪರಿಚಯಿಸಿದೆ, ಇದು ಮಾರುತಿ ಕಾರುಗಳನ್ನು ಖರೀದಿಸಲು ಸುಲಭವಾಗಿದೆ.

ಮಾರುತಿ ಸುಜುಕಿ ಏಪ್ರಿಲ್ 1ರಿಂದ ಕಾರುಗಳ ಬೆಲೆ ಹೆಚ್ಚಿಸಲಿದ್ದು, ಈ ಮೂಲಕ ಕಂಪನಿಯು ಎರಡನೇ ಬಾರಿಗೆ ಬೆಲೆ ಏರಿಕೆ ಮಾಡಲಿದೆ. ಕಾರುಗಳ ವಿವಿಧ ಮಾದರಿ ಮತ್ತು ರೂಪಾಂತರಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ನಿರಂತರ ವೆಚ್ಚ ಹೆಚ್ಚಳದಿಂದಾಗಿ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

English summary

Maruti Suzuki Partners With Karnataka Bank To Offer Car Loans

Maruti Suzuki India has signed a pact with private sector lender Karnataka Bank to introduce finance options for prospective car buyers.
Story first published: Wednesday, March 31, 2021, 18:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X