ಸುಗ್ಗಿ ಹಬ್ಬ ಸಂಕ್ರಾಂತಿಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಇದೆ. ವರ್ಷದ ಮೊದಲ ತಿಂಗಳು ಸಾಲು ಸಾಲು ಹಬ್ಬಗಳು ಬರುತ್ತಿವೆ. ಈ ನಡುವೆ ಅಡುಗೆಗೆ ಹಾಗೂ ಪೂಜೆಗೆ ಬಹು ಅಗತ್ಯವಾದ ತೆಂಗಿನ ಕಾಯಿ ಬೆಲೆಯೂ ಭಾರೀ ಏರಿಕೆಯಾಗಿದೆ. ಹೌದು, ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ತೆಂಗಿನ ಕಾಯಿ ಬೆಲೆ 60 ರೂಪಾಯಿ ದಾಟಿದೆ. ಇದು ಬೆಳೆಗಾರರಲ್ಲಿ ಖುಷಿ ನೀಡಿದ್ದರೂ, ಗ್ರಾಹಕರ ತಲೆಬಿಸಿ ಹೆಚ್ಚು ಮಾಡಿದೆ.
ತೆಂಗಿನಕಾಯಿ ದುಬಾರಿಯಾಗಲು ಕಾರಣವೇನು?
ಬೇಸಿಗೆ ಕಾಲದಲ್ಲಿ ರಾಜ್ಯದಲ್ಲಿ ಈ ಬಾರಿ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ.ಹಾಗೂ ಸಾಲು ಸಾಲು ಬುತ್ತಿವೆ ಹಾಗಾಗಿ ತೆಂಗಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ.

ಬೆಂಗಳೂರಿಗೆ ತೆಂಗಿನ ಕಾಯಿ ತುಮಕೂರು, ತಿಪಟೂರು, ಅರಸೀಕೆರೆ ಸೇರಿದಂತೆ ಇತರೆ ಕಡೆಯಿಂದ ಬರುತ್ತಿದೆ.ಚಿಕ್ಕಜಾಜೂರು, ಹೊಸದುರ್ಗ, ಹೊಳಲ್ಕೆರೆ, ರಾಮಗಿರಿ, ಚಿತ್ರದುರ್ಗ ಭಾಗದಿಂದ ಹೆಚ್ಚು ತೆಂಗಿನಕಾಯಿ ಆಮದು ಆಗುತ್ತಿದೆ. ಆದರೆ ಈ ಬಾರಿ ತೆಂಗಿನ ಕಾಯಿ ಇಳುವರಿ ಕಡಿಮೆಯಾಗಿರುವ ಕಾರಣ ತೆಂಗಿನಕಾಯಿ ಇಳುವರಿಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ತೆಂಗಿನ ದರವೂ ದಿಢೀರನೇ ಏರಿಕೆಯಾಗಿದೆ ಎಂದೇ ಹೇಳಬಹುದು.
1 ಕೆ.ಜಿ ತೆಂಗಿನಕಾಯಿಯ ಬೆಲೆ 60 ರಿಂದ 65 ರೂಪಾಯಿ
ಮಾರುಕಟ್ಟೆಯಲ್ಲಿ ಸದ್ಯ 1 ಕೆ.ಜಿ ತೆಂಗಿನಕಾಯಿಯ ಬೆಲೆ 606 ರಿಂದ 5 ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ತೆಂಗಿನಕಾಯಿಗೆ ತುಂಬಾಬೇಡಿಕೆ ಬಂದಿದೆ. ದುಬಾರಿ ತೆಂಗಿನಕಾಯಿಯ ಬೆಲೆ ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುವ ಸಾಧ್ಯತೆ ಇದೆ.
ಸುಗ್ಗಿ ಹಬ್ಬ ಸಂಕ್ರಾಂತಿಗೆ ಏರಿಕೆಯಾದ ತೆಂಗಿನ ಕಾಯಿ
ಮಕರ ಸಂಕ್ರಾಂತಿಗೆ ತೆಂಗಿನಕಾಯಿ ಹೆಚ್ಚಳವಾಗಿರುವುದರಿಂದ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಪೂಜೆಗೆ ಹಾಗೂ ಅಡುಗೆಗೆ ಹೇಗಪ್ಪಾ ತೆಂಗಿನಕಾಯಿ ಕೊಳ್ಳುವುದು ಎಂಬ ಚಿಂತೆ ಬೆಂಗಳೂರಿಗರಿಗೆ ಇದೆ.
ಬೆಂಗಳೂರಲ್ಲಿ ಕಳೆದ ವಾರ 25 ನಿಂದ 30 ರೂಪಾಯಿ ಇದ್ದ ತೆಂಗಿನಕಾಯಿ ದರ ಈ ವಾರದಿಂದ 60 ರಿಂದ 65 ರೂಪಾಯಿ ಆಗಿದೆ. ಕಳೆದ ವಾರ ಚಿಲ್ಲರೆ ಮಾರಾಟದಲ್ಲಿ ಒಂದು ದೊಡ್ಡ ತೆಂಗಿನಕಾಯಿಗೆ 35ರಿಂದ 45 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಸುಗ್ಗಿ ಹಬ್ಬ ಸಂಕ್ರಾಂತಿಗೆ ಕಬ್ಬು ಬೆಲೆ ಏರಿಕೆ
ಸಂಕ್ರಾಂತಿ ಹಬ್ಬ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡುತ್ತಿದೆ. ಸುಗ್ಗಿ ಹಬ್ಬ ಮಕರ ಸಂಕ್ರಾಂತಿಗೆ ಬೆಂಗಳೂರಿನ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಸಂಕ್ರಾಂತಿ ಹಬ್ಬಕ್ಕಾಗಿ ಸಾಮಾಗ್ರಿಗಳನ್ನ ಕೊಳ್ಳಲು ಜನರು ಮರುಕಟ್ಟೆಯಲ್ಲಿ ಮುಗಿ ಬೀಳುತ್ತಿದ್ದಾರೆ. ಹಬ್ಬಕ್ಕಾಗಿ ಕಬ್ಬು, ಬೆಲ್ಲ, ಹೆಸರು, ಕಡಲೆ, ಎಳ್ಳು , ಅಕ್ಕಿ ಮತ್ತು ತೆಂಗಿನಕಾಯಿ ಕೊಳ್ಳಲು ಜನ ನಾ ಮುಂದೆ ತಾ ಮುಂದೆ ಎನ್ನುತ್ತಿದ್ದಾರೆ.
ಸುಗ್ಗಿ ಹಬ್ಬ ಸಂಕ್ರಾಂತಿಯ ವೇಳೆಗೆ ಕಬ್ಬಿನ ಬೆಲೆ ಕೂಡ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸಂಕ್ರಾಂತಿಗೆ ಕಬ್ಬಿನ ಬೆಲೆ ಏರಿಕೆಯಾಗಿದೆ. ಈ ಬಾರಿ ಸುರಿದ ಅಧಿಕ ಮಳೆ ಕಬ್ಬಿನ ಬೆಳೆಯ ಮೇಲೆ ಕೂಡ ಪರಿಣಮ ಬೀರಿದೆ. ಹೀಗಾಗಿ ಸಂಕ್ರಾಂತಿಯ ಸಡಗರವನ್ನ ಹೆಚ್ಚಿಸುವ ಕಬ್ಬು ಈ ಬಾರಿ ದುಬಾರಿಯಾಗಿದೆ.
ಸಂಕ್ರಾಂತಿ ಹಬ್ಬಕ್ಕೆ ಇನ್ನೂ ಯಾವ ವಸ್ತುಗಳು ಏರಿಕೆಯಾಗುತ್ತಾವೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications